ವೀರಾಜಪೇಟೆ, ಮೇ 9: ತಾ. 3 ರಂದು ಬಲ್ಯಮಂಡೂರಿನ ನಿವಾಸಿ ವಿ. ವೈ. ರಾಜು ಅವರ ಪುತ್ರ ಗಿರೀಶ್(23) ಎಂಬಾತನನ್ನು ಅಪಹÀರಿಸಿ ಮಾರಣಾಂತಿಕ ಹಲ್ಲೆ ನಡೆಸಿ ಹುಣಸೂರು ಬಳಿ ಎಸೆದ ಪ್ರಕರಣದಲ್ಲಿ ಶ್ರೀಮಂಗಲ ಪೊಲೀಸರು ಸೂಕ್ತ ರೀತಿಯಲ್ಲಿ ಪ್ರಕರಣ ದಾಖಲಿಸಲಿಲ್ಲ. ನೊಂದ ಕುಟುಂಬಕ್ಕೆ ನ್ಯಾಂiÀi ಒದಗಿಸಿಲ್ಲ ಎಂದು ಗಿರೀಶ್ ಪರ ವಕೀಲ ಸಿ.ಕೆ ಪೂವಣ್ಣ ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ವೀರಾಜಪೇಟೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೂವಣ್ಣ ಅವರು ಬಲ್ಯಮಂಡೂರು ನಿವಾಸಿ ಗಿರೀಶ್ ಎರಡು ವರ್ಷಗಳ ಹಿಂದೆ ತಮ್ಮ ಮನೆ ಸಮೀಪದ ಲಕ್ಷ್ಮಣ ತೀರ್ಥ ನದಿಯಲ್ಲಿ ಕೆಲವÀರು ಮರಳು ತೆಗೆÀಯುತ್ತಿದ್ದವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಪರಿಣಾಮ ಅಕ್ರಮ ಮರಳು ದಂಧೆ ವಿರುದ್ಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೆಲವು ತಿಂಗಳ ಹಿಂದೆ ಕ್ರಮ ಕೈಗೊಂಡು ಬೋಟುಗಳನ್ನು, ಮರಳನ್ನು ವಶ ಪಡಿಸಿಕೊಂಡಿರುತ್ತಾರೆ. ಅಕ್ರಮ ಗಣಿಗಾರಿಕೆಗೆ ಬೆಂಬಲ ನೀಡಿದ ಆರೋಪದಲ್ಲಿ ಹಿಂದೆ ಶ್ರೀಮಂಗಲದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳ ಮೇಲೆಯೂ ಪ್ರಕರಣ ದಾಖಲಾಗಿತ್ತು. ಆದರೆ ಇಂದಿಗೂ ಮರಳು ದಂಧೆ ಮುಂದುವರೆದಿದ್ದು ಅಕ್ರಮ ಗಣಿಗಾರಿಕೆಯನ್ನು ಗಿರೀಶ್ ವೀಡಿಯೋ ರೆರ್ಕಾಡ್ ಮಾಡಿ ಹೋರಾಟ ಮುಂದುವರಿಸಿದ ಹಿನ್ನೆಲೆಯಲ್ಲಿ ತಾ. 3 ರಂದು ಗಿರೀಶ್ ಮೇಲೆ ಹಲ್ಲೆ ನಡೆಸಿ ಡಸ್ಟರ್ ವಾಹನದಲ್ಲಿ ಎಳೆದು ಹಾಕಿಕೊಂಡು ಮೈಸೂರಿನ ಲಾಡ್ಜ್‍ನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ನಂತರ ತಾ. 4ರಂದು ಸಂಜೆ ಹುಣಸೂರು ಬಳಿ ಎಸೆದು ತೆರಳಿದ್ದಾರೆ. ಗಿರೀಶ್ ಅವರ ಬೆನ್ನು ಹುರಿ ಮುರಿದಿದ್ದು ಈಗ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೂವಣ್ಣ ವಿವರಿಸಿದರು.
ಗಿರೀಶ್ ಅವರ ಸಹೋದರಿ ಭವ್ಯ ಮಾತನಾಡಿ ಅಕ್ರಮ ಮರಳು ಗಣಿಗಾರಿಕೆ ತಂಡ ತನ್ನ ಗಂಡ ಹಾಗೂ ತಂದೆ ಕುಟುಂಬಕ್ಕೆ ಜೀವ ಭಯದ ಬೆದರಿಕೆ ಹಾಕಿದ್ದು ಇದಕ್ಕೆ ಸಂಬಂಧಿಸಿ ದಂತೆ ಮೈಸೂರು ವಿಭಾಗದ ಐ.ಜಿ. ಬಿ.ಕೆ.ಸಿಂಗ್ ಹಾಗೂ ರಾಜ್ಯದ ಗೃಹ ಸಚಿವರಿಗೂ ದೂರು ನೀಡಿರುವದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಸಹೋದರ ಗಣೇಶ ಉಪಸ್ಥಿತರಿದ್ದರು.