ಮಡಿಕೇರಿ, ಮೇ 9: ಬೆಂಗಳೂರಿನ ಇಂದಿರಾನಗರದ ಕೊಡವ ಕೂಟದ ಸಂತೋಷ ಕೂಟ ಹಾಗೂ ಮಹಾಸಭೆ ಇತ್ತೀಚೆಗೆ ದೊಮ್ಲೂರು ಕ್ಲಬ್ನಲ್ಲಿ ನಡೆಯಿತು. ಈ ಸಂದರ್ಭ ಕೂಟದ ಅಧ್ಯಕ್ಷ ಹೊಟ್ಟೇಂಗಡ ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆದು, ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ಹೊಟ್ಟೇಂಗಡ ತಿಮ್ಮಯ್ಯ, ಉಪಾಧ್ಯಕ್ಷರಾಗಿ ಅಮ್ಮಂಡ ತಾರಾ ದೇವಯ್ಯ, ಕಾರ್ಯದರ್ಶಿಯಾಗಿ ಪಾಂಡಂಡ ಕಮಲ ಮುತ್ತಪ್ಪ, ಖಜಾಂಚಿಯಾಗಿ ಕೋಣೇರಿರ ಬಿನಿತಾ ಚಿಂಗಪ್ಪ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಾಚಿರ ಜಪ್ಪು ಅಯ್ಯಪ್ಪ, ಉಳ್ಳಿಯಡ ರಘು ಪೂಣಚ್ಚ, ಅಯ್ಯಲಪಂಡ ಸುಬ್ಬಯ್ಯ, ಬಲ್ಲಚಂಡ ಕವಿತ, ತೀತಿರ ಮಂದಣ್ಣ ಅವರುಗಳನ್ನು ನೇಮಕ ಮಾಡಲಾಗಿತು.