ನಾಪೆÇೀಕ್ಲು, ಮೇ. 10: ನಾಪೆÇೀಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ 21ನೇ ವರ್ಷದ ಬಿದ್ದಾಟಂಡ ಕಪ್ ಹಾಕಿ ನಮ್ಮೆಯಲ್ಲಿ ಮಾಜಿ ಚಾಂಪಿಯನ್ಗಳು ಗೆಲುವಿಗಾಗಿ ತೀವ್ರ ಸೆಣಸಾಟ ನಡೆಸುತ್ತಿದ್ದಾರೆ. ತಾ. 11ರಂದು (ಇಂದು) ಕ್ವಾರ್ಟರ್ ಫೈನಲ್ ಪಂದ್ಯಾಟ ನಡೆಯಲಿದೆ.ಬುಧವಾರ ನಡೆದ ಚಂದುರ ಮತ್ತು ಮುಳ್ಳಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಚಂದುರ ತಂಡವು 3-1 ಗೋಲಿನ ಅಂತರದಿಂದ ಮುಳ್ಳಂಡ ತಂಡವನ್ನು ಮಣಿಸಿತು. ಮುಳ್ಳಂಡ ತಂಡದ ಪರ ಚಂಗಪ್ಪ 12ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ಚಂದುರ ತಂಡದ ಪರ ಪೆÇನ್ನಣ್ಣ 19 ಮತ್ತು 21ನೇ ನಿಮಿಷದಲ್ಲಿ ಎರಡು ಗೋಲು ಹಾಗೂ ಪೂವಣ್ಣ 35ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಚೆಪ್ಪುಡಿರ ಮತ್ತು ನೆಲ್ಲಮಕ್ಕಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್ ನೆಲ್ಲಮಕ್ಕಡ ತಂಡವು ಟೈಬ್ರೇಕರ್ನಲ್ಲಿ
(ಮೊದಲ ಪುಟದಿಂದ) ಚೆಪ್ಪುಡಿರ ತಂಡವನ್ನು ಸೋಲಿಸಿತು. ಅದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಚೆಪ್ಪುಡಿರ ಪ್ರಣವ್ ಮತ್ತು ನೆಲ್ಲಮಕ್ಕಡ ಅಯ್ಯಪ್ಪ ದಾಖಲಿಸಿದ ಒಂದೊಂದು ಗೋಲಿನಿಂದ ಪಂದ್ಯ ಡ್ರಾಗೊಂಡಿತ್ತು. ಚೇಂದಂಡ ಮತ್ತು ಚೆಕ್ಕೆರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಚೇಂದಂಡ ತಂಡವು 4-1 ಗೋಲಿನ ಅಂತರದಿಂದ ಚೆಕ್ಕೆರ ತಂಡವನ್ನು ಮಣಿಸಿತು. ಚೇಂದಂಡ ತಂಡದ ಪರ ತಮ್ಮಯ್ಯ 24 ಮತ್ತು 26ನೇ ನಿಮಿಷದಲ್ಲಿ, ರೋಶನ್ 43ನೇ ನಿಮಿಷದಲ್ಲಿ ಹಾಗೂ ಮೋಕ್ಷಿತ್ 52ನೇ ನಿಮಿಷದಲ್ಲಿ ತಂಡದ ಪರ ಗೋಲು ದಾಖಲಿಸಿದರೆ, ಚೆಕ್ಕೆರ ತಂಡದ ಪರ ಸಜನ್ ಸೋಮಯ್ಯ 59ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸಿ ಗೋಲಿನ ಅಂತರವನ್ನು ಕಡಿಮೆಗೊಳಿಸಿದರು. ಮಂಡೇಪಂಡ ಮತ್ತು ಚಂದುರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮಂಡೇಪಂಡ ತಂಡವು 5-1 ಗೋಲಿನ ಅಂತರದಿಂದ ಚಂದುರ ತಂಡವನ್ನು ಮಣಿಸಿತು. ಚಂದುರ ತಂಡದ ಪರ ಪೆÇನ್ನಣ್ಣ 36ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸಿದರೆ, ಮಂಡೇಪಂಡ ತಂಡದ ಪರ ಬೋಪಣ್ಣ 25 ಮತ್ತು 29ನೇ ನಿಮಿಷದಲ್ಲಿ, ಚಂದನ್ 23 ಮತ್ತು 34ನೇ ನಿಮಿಷದಲ್ಲಿ ತಲಾ ಎರಡೆರಡು ಗೋಲು, ಅಚ್ಚಯ್ಯ 32ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಕರಿನೆರವಂಡ ಮತ್ತು ಪುದಿಯೊಕ್ಕಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕರಿನೆರವಂಡ ತಂಡವು 7-6 ಗೋಲಿನ ಅಂತರದಿಂದ ಪುದಿಯೊಕ್ಕಡ ತಂಡವನ್ನು ಮಣಿಸಿತು. ಪುದಿಯೊಕ್ಕಡ ವಿಪಿನ್ ಸೋಮಯ್ಯ 8 ಮತ್ತು 14ನೇ ನಿಮಿಷದಲ್ಲಿ ಒಂದೊಂದು ಗೋಲು ದಾಖಲಿಸಿದರೆ, ಕರಿನೆರವಂಡ ದಿವಿನ್ ಕುಟ್ಟಪ್ಪ 18 ಮತ್ತು ನಿತೇಶ್ ಬಿದ್ದಯ್ಯ 53ನೇ ನಿಮಿಷದಲ್ಲಿ ದಾಖಲಿಸಿದ ಗೋಲಿನಿಂದ ಪಂದ್ಯ ಡ್ರಾಗೊಂಡಿತು. ನಂತರ ನಡೆದ ಟೈಬ್ರೇಕರ್ನಲ್ಲಿ ಕರಿನೆರವಂಡ ತಂಡವು ಪುದಿಯೊಕ್ಕಡ ತಂಡವನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.