ಮಡಿಕೇರಿ, ಮೇ 10: ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಮಹನೀಯರ ಜೀವನವನ್ನು ಅನುಕರಣೆ ಮಾಡಿ ಅವರಂತೆ ಉತ್ತಮ ಗುಣ ಅಳವಡಿಸಿಕೊಳ್ಳುವಂತಾಗಬೇಕು ಎಂದು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣ ದಲ್ಲಿ ನಡೆದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹೇಮರೆಡ್ಡಿ ಮಲ್ಲಮ್ಮ ಅವರ ಜೀವನ ಸರ್ವರಿಗೂ ಅನುಕರಣೀಯ ವಾದದ್ದು, ಅವರ ಸರಳತೆ, ಶಿವಭಕ್ತಿಯಿಂದ ಸಮಾಜದಲ್ಲಿನ ನಾನಾ ಸಮಸ್ಯೆಗಳನ್ನು ಪರಿಹರಿಸಿದರು ಮತ್ತು ಜನರಲ್ಲಿ ಆಧ್ಯಾತ್ಮ ಭಾವನೆ ಮೂಡಿಸಿದರು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಗರಸಭೆ ಅಧ್ಯಕೆÀ್ಷ ಕಾವೇರಮ್ಮ ಸೋಮಣ್ಣ ಅವರು ಹೇಮರೆಡ್ಡಿ ಮಲ್ಲಮ್ಮ ಅವರು ಆಂಧ್ರಪ್ರದೇಶದಲ್ಲಿ ಜನಿಸಿ ಚನ್ನಮಲ್ಲಿಕಾರ್ಜುನ ಸ್ವಾಮಿಯ ಭಕ್ತೆಯಾಗಿ ತನ್ನ ಶ್ರೀಮಂತಿಕೆಯನ್ನು ದಾನ ಧರ್ಮದಲ್ಲಿ ತೊಡಗಿಸಿಕೊಂಡು ಭಗವಂತನನ್ನು ಧ್ಯಾನಿಸುತ್ತಾ ಸಮಾಜದಲ್ಲಿನ ಬಡತನ ಹೋಗಲಾಡಿಸಲು ಪ್ರಯತ್ನಿಸಿದರು ಎಂದರು.

ಕಾನ್‍ಬೈಲು ಪ್ರೌಢಶಾಲೆ ಶಿಕ್ಷಕಿ ಎನ್.ಕೆ. ಮಾಲಾದೇವಿ ಅವರು ಮಾತನಾಡಿ ಹೇಮರೆಡ್ಡಿ ಮಲ್ಲಮ್ಮ ನವರು 1422 ರಲ್ಲಿ ಆಂಧ್ರಪ್ರದೇಶದ ಶ್ರೀಶೈಲದ ರಾಮಪುರದಲ್ಲಿ ರಾಮರೆಡ್ಡಿ ಗೌರಮ್ಮ ದಂಪತಿಯ ಪುತ್ರಿಯಾಗಿ ಜನಿಸಿದರು ಎಂದರು.

“ತನ್ನ ಮುನಿದವರಿಗೆ ತಾನೆಕೇ ಮುನಿಯಲಯ್ಯಾ” ಎಂಬಂತ ವ್ಯಕ್ತಿತ್ವವನ್ನು ಹೊಂದಿದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರು ತಮ್ಮನ್ನು ತಾವು ಶಿವಭಕ್ತಿಯಲ್ಲಿ ದಾನ, ಧರ್ಮಗಳಲ್ಲಿ ಲೋಕಕಲ್ಯಾಣಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟು ಬಡವರ ಉದ್ದಾರಕ್ಕಾಗಿ ಶ್ರಮಿಸಿದರು. ಸಮಾಜದಲ್ಲಿ ಅವರನ್ನು ಅನುಕರಣೆ ಮಾಡುವಂತ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು. ಬಡವರು, ಬಿಕ್ಷುಕರಿಗೆ ದಾನ ಧರ್ಮ ಮಾಡುವದರಲ್ಲಿ ಮುಂದೆ ಇದ್ದು ಶಿವ ಭಕ್ತಿಯಿಂದ ಪ್ರಸಿದ್ದಿಯಾಗಿದ್ದರು ಎಂದು ವಿವರಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ ಹೇಮರೆಡ್ಡಿ ಮಲ್ಲಮ್ಮನವರು ಶಿವಭಕ್ತಿಯಿಂದ ದಾನ ಧರ್ಮಗಳಿಂದ ಪ್ರಸಿದ್ಧರಾದರು. ಸಮಾಜದ ಪರಿವರ್ತನೆಗೆ ಮುನ್ನುಡಿ ಬರೆದರು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಯೋಜನಾಧಿಕಾರಿ ಸತ್ಯನ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಎಲ್.ಎನ್. ಕುಳ್ಳಯ್ಯ, ಇತರರು ಇದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಂಜುನಾಥ ಸ್ವಾಗತಿಸಿದರು, ಶಿಕ್ಷಣ ಇಲಾಖೆ ಪರಿವೀಕ್ಷಕಿ ಸಾವಿತ್ರಿ ನಿರೂಪಿಸಿದರು, ಮುಖ್ಯ ಯೋಜನಾಧಿಕಾರಿ ಸತ್ಯನ್ ವಂದಿಸಿದರು.