ಅವರ ಗದ್ದೆಯಲ್ಲಿರುವ ಕೆರೆಯಲ್ಲಿ ಮೀನುಗಳು ಸಾವನಪ್ಪಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ.
ಒಂದು ವರ್ಷದ ಹಿಂದೆ ನವೀನ್ ಅಯ್ಯಮ್ಮ ಅವರು ಕೆರೆಗೆ ಸಾವಿರಾರು ಸಂಖ್ಯೆಯಲ್ಲಿ ಮೀನು ಮರಿಗಳನ್ನು ಬಿಟ್ಟು ಸಾಕುತ್ತಿದ್ದರು. ಈ ಮೀನುಗಳು ಒಂದೂವರೆಯಿಂದ ಎರಡು ಕೆ.ಜಿ.ಯಷ್ಟು ಬೆಳೆದಿದ್ದವು. ಮಂಗಳವಾರ ವಾಡಿಕೆಯಂತೆ ಕೆರೆಗೆ ತೆರಳಿ ಪರಿಶೀಲಿಸುವ ಸಂದÀರ್ಭ ಮೀನುಗಳು ಸತ್ತು ತೇಲುತ್ತಿರುವದು ಗೋಚರಿಸಿದೆ. ಕೆರೆಯಲ್ಲಿ ಇನ್ನೂ ಜೀವಂತ ಮೀನುಗಳು ಇದ್ದು, ಹಲವು ಮೀನುಗಳು ಭಾಗಶಃ ನಿತ್ರಾಣ ಗೊಂಡಿರುವದು ಕಂಡುಬಂದಿದೆ
ಈ ಬಗ್ಗೆ ರೈತ ನವೀನ್ ಅಯ್ಯಮ್ಮ ಅವರು ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರ ಹಾಗೂ ಪೊನ್ನಂಪೇಟೆ ಮೀನುಗಾರಿಕಾ ಕೇಂದ್ರಕ್ಕೆ ದೂರು ನೀಡಿದ್ದಾರೆ.
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರಿಯಾ ಗಣಪತಿ ಅವರು ತೆರಳಿ ಪರಿಶೀಲಿಸಿದ್ದಾರೆ. ಕೆರೆಯಲ್ಲಿ ಮೀನುಗಳಿಗೆ ಆಮ್ಲಜನಕ ಕೊರತೆ ಅಥವಾ ಕೆರೆಗೆ ವಿಷ ಬೆರೆಸಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪರೀಕ್ಷೆ ನಡೆಸಲು ಮಾದರಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.ಶ್ರೀಮಂಗಲ, ಮೇ 10: ಶ್ರೀಮಂಗಲ ಠಾಣಾ ವ್ಯಾಪ್ತಿಯ ತೂಚಮಕೇರಿ ಗ್ರಾಮದ ಖಾಸಗಿ ಕೆರೆಯಲ್ಲಿ ಸಾಕಿದ್ದ ನೂರಾರು ಸಂಖ್ಯೆಯ ಮೀನುಗಳು ಮಾರಣ ಹೋಮವಾಗಿವೆ. ಗ್ರಾಮದ ರೈತ ಚಿಂಡಾಮಾಡ ನವೀನ್ ಅಯ್ಯಮ್ಮ