ನಕಲಿ ನೋಟು ನೀಡಿ ಚಿನ್ನ ಖರೀದಿಸಿದವರ ಸೆರೆ ಬೆಂಗಳೂರು, ಮೇ 11: ನೂತನ 2 ಸಾವಿರ ರೂ. ಮುಖಬೆಲೆಯ 32 ಲಕ್ಷ ರೂ. ನಕಲಿ ನೋಟು ನೀಡಿ ಒಂದು ಕೆ.ಜಿ. ಬಂಗಾರ ಖರೀದಿಸಿದ ಆರೋಪದ ಮೇಲೆ ಮೈಸೂರು ಮೂಲದ ಮೂವರು ವ್ಯಕ್ತಿಗಳನ್ನು ಹಲಸೂರು ಗೇಟ್ ಪೆÇಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ವಿನೋದ್, ಹೇಮಂತ್ ಹಾಗೂ ಹರೀಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಅವರಿಂದ ನಕಲಿ ನೋಟ್ ಮುದ್ರಿಸುತ್ತಿದ್ದ ಕಲರ್ ಪ್ರಿಂಟರ್ ಅನ್ನು ಸಹ ಪೆÇಲೀಸರು ಜಪ್ತಿ ಮಾಡಿದ್ದಾರೆ. ಹಲಸೂರು ಗೇಟ್ ಪೆÇಲೀಸರ ಪ್ರಕಾರ, ಏಪ್ರಿಲ್ 24 ರಂದು ಜುಗರಾಜ್ ಎಂಬವರು ಚಿನ್ನದ ವ್ಯಾಪಾರಿ ದಿನೇಶ್ ಕುಮಾರ್ ಅವರಿಗೆ ಕರೆ ಮಾಡಿ ತಮ್ಮ ಮಗಳ ಮದುವೆಗೆ 1 ಕೆ.ಜಿ. ಬಂಗಾರ ಬೇಕು ಎಂದು ಹೇಳಿದ್ದಾರೆ. ಅಲ್ಲದೆ ಚಿನ್ನ ತೆಗೆದುಕೊಂಡು ಬರಲು ತಮ್ಮ ಮ್ಯಾನೇಜರ್‍ನನ್ನು ಕಳುಹಿಸುತ್ತಿರುವದಾಗಿ ದಿನೇಶ್‍ಗೆ ತಿಳಿಸಿದ್ದಾರೆ. ದಿನೇಶ್ ಕುಮಾರ್ ಅವರು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಜುಗರಾಜ್ ಮ್ಯಾನೇಜರ್ ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿಗೆ 1 ಕೆ.ಜಿ. ಚಿನ್ನ ನೀಡಿ 32 ಲಕ್ಷ ರೂಪಾಯಿ ಪಡೆದಿದ್ದಾರೆ.

ಬಾಂಬ್ ನಾಗ ಕೊನೆಗೂ ಬಂಧನ

ಬೆಂಗಳೂರು, ಮೇ 11: ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಬಿಬಿಎಂಪಿ ಮಾಜಿ ಕಾಪೆರ್Çೀರೇಟರ್ ಹಾಗೂ ರೌಡಿ ಶೀಟರ್ ಬಾಂಬ್ ನಾಗ ಅಲಿಯಾಸ್ ವಿ. ನಾಗರಾಜ್‍ನನ್ನು ತಮಿಳುನಾಡಿನ ಆರ್ಕಾಟ್‍ನಲ್ಲಿ ಇಂದು ಕರ್ನಾಟಕ ಪೆÇಲೀಸರು ಬಂಧಿಸಿದ್ದಾರೆ. ಕಳೆದ 27 ದಿನಗಳಿಂದ ಪೆÇಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಬಾಂಬ್ ನಾಗ ಮತ್ತು ಆತನ ಮಕ್ಕಳಾದ ಗಾಂಧಿ ಹಾಗೂ ಶಾಸ್ತ್ರಿಯನ್ನು ಇಂದು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಆರ್ಕಾಟ್ ನಲ್ಲಿ ಎಸಿಪಿ ರವಿ ಕುಮಾರ್ ನೇತೃತ್ವದ ವಿಶೇಷ ಪೆÇಲೀಸ್ ತಂಡ ಬಂಧಿಸಿದೆ. ಏಪ್ರಿಲ್ 14 ರಂದು ಶ್ರೀರಾಂಪುರದಲ್ಲಿರುವ ಬಾಂಬ್ ನಾಗನ ಮನೆ ಮೇಲೆ ಪೆÇಲೀಸರು ಧಾಳಿ ನಡೆಸಿದ್ದ ವೇಳೆ ಕೋಟ್ಯಂತರ ರೂಪಾಯಿ ನಿಷೇಧಿತ 500 ಹಾಗೂ 1000 ಮುಖಬೆಲೆಯ ನೋಟುಗಳು ಪತ್ತೆಯಾಗಿದ್ದವು.

ಸೇನಾಧಿಕಾರಿ ಹತ್ಯೆಗೆ ಹಿಜ್ಬುಲ್ ಕಾರಣ

ಶ್ರೀನಗರ, ಮೇ 11: ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರರು ಕಾಶ್ಮೀರದ ಯುವ ಸೇನಾಧಿಕಾರಿ ಲೆಫ್ಟಿನೆಂಟ್ ಉಮರ್ ಫಯಾಜ್ ಅವರನ್ನು ಅಪಹರಿಸಿ, ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಜಮ್ಮು ಮತ್ತು ಕಾಶ್ಮೀರ ಪೆÇಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪೆÇಲೀಸರಿಂದ ಕದ್ದಿದ್ದ ಐಎನ್‍ಎಸ್‍ಎಎಸ್ ರೈಫಲ್‍ನಿಂದ ಸೈನಾಧಿಕಾರಿಯ ಹತ್ಯೆ ಮಾಡಲಾಗಿದೆ. ಅವರ ದೇಹದ ಮೇಲೆ ಕಿರುಕುಳ ನೀಡಿದ ಯಾವದೇ ಗಾಯಗಳಿಲ್ಲ. ಆದರೆ ಹತ್ಯೆಯ ರೀತಿಯನ್ನು ಗಮನಿಸಿದರೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಕೃತ್ಯ ಎಂದು ಕಾಶ್ಮೀರದ ಪೆÇಲೀಸ್ ಮಹಾ ನಿರ್ದೇಶಕ ಎಸ್‍ಜೆಎಂ ಗಿಲಾನಿ ಅವರು ಹೇಳಿದ್ದಾರೆ. ಕಳೆದ ಮಂಗಳವಾರ ಶೋಪಿಯಾನ್ ಜಿಲ್ಲೆಯಲ್ಲಿ ಸಂಬಂಧಿಕರೊಬ್ಬರ ಮದುವೆಗೆಂದು ಉಮರ್ ಫಯಾಜ್ ಹೋಗಿದ್ದ ವೇಳೆ ಮದುವೆ ಮನೆಗೆ ನುಗ್ಗಿರುವ ಶಸ್ತ್ರಧಾರಿ ಉಗ್ರರ ಗುಂಪೆÇಂದು ಈ ಅಧಿಕಾರಿಯನ್ನು ಅಪಹರಿಸಿತ್ತು.

ಆಧಾರ್ ಕಾರ್ಡ್-ಪ್ಯಾನ್ ಕಾರ್ಡ್ ಲಿಂಕ್

ನವದೆಹಲಿ, ಮೇ 11: ಆದಾಯ ತೆರಿಗೆ ಬಗ್ಗೆ ಮಾಹಿತಿ ಸಲ್ಲಿಸುವದು ಕಡ್ಡಾಯವಾಗಿದ್ದು, ಆದಾಯ ತೆರಿಗೆ ಇಲಾಖೆ(ಐಟಿ) ವ್ಯಕ್ತಿಯ ಆಧಾರ್ ಕಾರ್ಡ್‍ನ್ನು ಪ್ಯಾನ್ ಕಾರ್ಡ್‍ನೊಂದಿಗೆ ಲಿಂಕ್ ಮಾಡಲು ಹೊಸ ಇ-ಸೌಲಭ್ಯವನ್ನು ಜಾರಿಗೊಳಿಸಿದೆ. ಐಟಿ ಇಲಾಖೆಯ ಇ-ಫೈಲಿಂಗ್ ವೆಬ್‍ಸೈಟ್‍ನಲ್ಲಿ ಹೊಸ ಲಿಂಗ್‍ನ್ನು ನೀಡಲಾಗಿದ್ದು, ಇದರಲ್ಲಿ ಆಧಾರ್ ಕಾರ್ಡ್‍ನ್ನು ಪ್ಯಾನ್ ಕಾರ್ಡ್‍ನೊಂದಿಗೆ ಲಿಂಕ್ ಮಾಡಲು ಸಾಧ್ಯವಿದೆ. ಆಧಾರ್ ಕಾರ್ಡ್ ನಂಬರ್, ಪ್ಯಾನ್ ಕಾರ್ಡ್ ನಂಬರ್‍ನ್ನು ವೆಬ್‍ಸೈಟ್‍ನಲ್ಲಿ ನಮೂದಿಸುವ ಮೂಲಕ ಆಧಾರ್ ಕಾರ್ಡ್‍ನ್ನು ಪ್ಯಾನ್ ಕಾರ್ಡ್‍ನೊಂದಿಗೆ ಲಿಂಕ್ ಮಾಡಬಹುದಾಗಿದೆ. ಯುಐಡಿಎಐ ನಿಂದ ಪರಿಶೀಲನೆಯ ಬಳಿಕ ಲಿಂಕಿಂಗ್ ಯಶಸ್ವಿಯಾಗಲಿದೆ. ಒಂದು ವೇಳೆ ಗ್ರಾಹಕರು ನೀಡಿರುವ ಮಾಹಿತಿ ಹೊಂದಾಣಿಕೆಯಾಗದೇ ಇದ್ದರೆ, ಒಟಿಪಿ ಅಗತ್ಯವಿರುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಆತ್ಮಾಹುತಿ ಬಾಂಬ್ ಧಾಳಿ : 5 ಸಾವು

ಢಾಕಾ, ಮೇ 11: ಭಯೋತ್ಪಾದಕರು ಆತ್ಮಾಹುತಿ ಬಾಂಬ್ ಧಾಳಿ ನಡೆಸಿದ್ದು ಪರಿಣಾಮ ನಾಲ್ವರು ಉಗ್ರರು ಮತ್ತು ಓರ್ವ ಅಗ್ನಿಶಾಮಕ ಸಿಬ್ಬಂದಿ ಮೃತಪಟ್ಟಿದ್ದಾರೆ. ಬಾಂಗ್ಲಾದೇಶದ ರಾಜ್ಶಾಹಿ ಜಿಲ್ಲೆಯಲ್ಲಿ ಪೆÇಲೀಸರು ಭದ್ರತಾ ತಪಾಸಣೆ ನಡೆಸುತ್ತಿದ್ದ ವೇಳೆ ಭಯೋತ್ಪಾದಕರು ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ. ಈ ವೇಳೆ ನಾಲ್ವರು ಉಗ್ರರು ಮತ್ತು ಓರ್ವ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ. ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಪೆÇಲೀಸರು ಕಾರ್ಯಾಚರಣೆ ಕೈಗೊಂಡಿದ್ದು ಮನೆಯೊಳಗೆ ಅಗ್ನಿಶಾಮಕ ಸಿಬ್ಬಂದಿ ನುಗ್ಗಿದ ಕೂಡಲೇ ಉಗ್ರರು ಬಾಂಬ್ ಸ್ಫೋಟಿಸಿದ್ದಾರೆ. ನಿಯೋ-ಜಮಾತುಲ್ ಮುಜಾಯಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ) ನಿಷೇಧಿತ ಉಗ್ರ ಸಂಘಟನೆಯ ಉಗ್ರರು ಎಂದು ತಿಳಿದುಬಂದಿದೆ.

ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ

ಬೆಂಗಳೂರು, ಮೇ 11: ರಿಯಲ್ ಎಸ್ಟೇಟ್ ನಡೆಸುತ್ತಿದ್ದ ಉದ್ಯಮಿಯೊಬ್ಬರನ್ನು ಆತನ ಅಪಾರ್ಟ್‍ಮೆಂಟ್‍ನಲ್ಲೇ ಕತ್ತು ಸೀಳಿ ಕೊಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜಯನಗರ 7ನೇ ಬ್ಲಾಕ್ ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಸವಾಗಿದ್ದ ಕುಂದಾಪುರ ಮೂಲದ ಸುರೇಶ್ ಪೂಜಾರಿ ಅಲಿಯಾಸ್ ಗೋಲ್ಡನ್ ಸುರೇಶ್ ಕೊಲೆಯಾದ ವ್ಯಕ್ತಿ. ಜಯನಗದರ ಜೆಎಸ್‍ಎಸ್ ಸರ್ಕಲ್ ಬಳಿಯಿರುವ ಅಪಾರ್ಟ್‍ಮೆಂಟ್‍ನಲ್ಲಿ ಸುರೇಶ್ ಕಳೆದ ಒಂದೂವರೆ ವರ್ಷದಿಂದ ಬಾಡಿಗೆಗಿದ್ದರು. ಇಲ್ಲಿಯೇ ತಮ್ಮ ಹಣಕಾಸು ವ್ಯವಹಾರ ಮತ್ತು ರಿಯಲ್ ಎಸ್ಟೇಟ್ ನಡೆಸುತ್ತಿದ್ದರು. ಸುರೇಶ್ ಸಹೋದರಿ ಸತತ ಕರೆ ಮಾಡಿದರೂ ಕರೆ ಸ್ವೀಕರಿಸದ ಹಿನ್ನೆಲೆ ಆಕೆ ಅಪಾರ್ಟ್‍ಮೆಂಟ್‍ಗೆ ಬಂದಿದ್ದಾರೆ. ಮನೆಯ ಒಳಗೆ ಮೊಬೈಲ್ ರಿಂಗ್ ಆಗುತ್ತಿತ್ತು, ನಂತರ ನೆರೆಹೊರೆಯವರ ಸಹಾಯದಿಂದ ಬಾಗಿಲು ತೆರೆದು ನೋಡಿದಾಗ ಸುರೇಶ್ ಮೃತ ದೇಹ ಪತ್ತೆಯಾಗಿದೆ.

ತ್ರಿವಳಿ ತಲಾಖ್ ವಿಚಾರಣೆ ಆರಂಭ

ನವದೆಹಲಿ, ಮೇ 11: ತ್ರಿವಳಿ ತಲಾಖ್, ವಿಚ್ಛೇದಿತ ಮಹಿಳೆಯರ ಮರು ಮದುವೆ ನಿಯಮಗಳು (ನಿಖಾ ಹಲಾಲ) ಮತ್ತು ಬಹುಪತ್ನಿತ್ವ ಪದ್ಧತಿಗಳ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆಯು ಸುಪ್ರೀಂಕೋರ್ಟ್‍ನಲ್ಲಿ ಆರಂಭವಾಗಿದೆ. ಐದು ಮಂದಿ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಲ್ಲಿ ತ್ರಿವಳಿ ತಲಾಖ್ ಅರ್ಜಿಯ ವಿಚಾರಣೆ ಆರಂಭವಾಗಿದೆ. ತ್ರಿವಳಿ ತಲಾಖ್ ಪದ್ಧತಿಯ ಮಾನ್ಯತೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುವದು ಎಂದು ನ್ಯಾಯಪೀಠ ತಿಳಿಸಿದೆ. ತ್ರಿವಳಿ ತಲಾಖ್, ವಿಚ್ಛೇದಿತ ಮಹಿಳೆಯರ ಮರು ಮದುವೆ ನಿಯಮಗಳು (ನಿಖಾ ಹಲಾಲ) ಮತ್ತು ಬಹುಪತ್ನಿತ್ವ ಪದ್ಧತಿಗಳ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ 7 ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಎತ್ತಿಕೊಂಡಿದೆ.

ತಲಾಖ್ ಬೇಡವೆಂದು ಹನುಮಾನ್ ಚಾಲೀಸ್ ಪಠಣ

ವಾರಣಾಸಿ, ಮೇ 11: ತ್ರಿವಳಿ ತಲಾಖ್ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿರುವ ಹಿನ್ನೆಲೆ, ತ್ರಿವಳಿ ತಲಾಖ್ ಸಂಕಷ್ಟ ದೂರಾಗುವಂತೆ ಕೋರಿ ವಾರಣಾಸಿಯಲ್ಲಿರುವ ಕೆಲವು ಮುಸ್ಲಿಂ ಮಹಿಳೆಯರು ಹನುಮಾನ್ ಚಾಲೀಸ್ ಪಠಣ ಮಾಡಿದ್ದಾರೆ. ವಾರಣಾಸಿಯ ಹನುಮಂತನ ದೇಗುಲದಲ್ಲಿ ಸೇರಿದ್ದ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ಸೇರಿದಂತೆ ಮಹಿಳೆಯರ ವಿರುದ್ಧ ಇರುವ ಎಲ್ಲಾ ಅನಿಷ್ಠ ಪದ್ಧತಿಗಳು ನಿರ್ಮೂಲನೆಯಾಗಬೇಕೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮಂದಿರದಲ್ಲಿ ಸೇರಿದ್ದ ಮುಸ್ಲಿಂ ಮಹಿಳೆಯರು 100 ಬಾರಿ ಹನುಮಾನ್ ಚಾಲೀಸ ಪಠಿಸಿದರು. ತ್ರಿವಳಿ ತಲಾಖ್ ಪದ್ಧತಿಯಿಂದ ಮುಕ್ತಿ ಪಡೆಯುವ ಸಲುವಾಗಿ ನಾವು ಹನುಮಾನ್ ಚಾಲೀಸ್’ನ್ನು ಪಠಣ ಮಾಡುತ್ತಿದ್ದೇವೆಂದು ಮುಸ್ಲಿಂ ಮಹಿಳೆಯರು ಹೇಳಿಕೊಂಡಿದ್ದಾರೆ. ಶಭಾನಾ ಎಂಬ ಹೆಣ್ಣು ಮಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದೇವರು ಮತ್ತು ಅಲ್ಲಾಹ್ ಎಲ್ಲಾ ಒಂದೇ. ಭೂಮಿ ಮೇಲಿರುವ ಮನುಷ್ಯರು ಅದನ್ನು ವಿಂಗಡಿಸಿದ್ದಾರೆಂದು ಹೇಳಿದ್ದಾರೆ.