ಮಡಿಕೇರಿ, ಮೇ 11: ಮಡಿಕೇರಿ ತಾಲೂಕಿನ ಕೊಳಗದಾಳು ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಭಗವತಿ ದೇವಸ್ಥಾನದ ಪÀÅನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ತಾ. 16 ರಿಂದ 21 ರವರೆಗೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಬಾಚರಣಿಯಂಡ ಗಣಪತಿ ಅವರು ಮಾಹಿತಿ ನೀಡಿ, ಕೆÉೀರಳದ ಜ್ಯೋತಿಷಿ ಬಾಲಕೃಷ್ಣ ಕಲ್ಲಾರ ಅವರಿಂದ ನಡೆಸಿದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ಲೋಪಗಳ ನಿವಾರಣೆÉಯ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಅಂದಾಜು ರೂ. 80 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದ್ದು, ಇದೀಗ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.

ತಾ. 16 ರಂದು ಸಂಜೆ 7 ಗಂಟೆಗೆ ತಂತ್ರಿಗಳ ಆಗಮನ, ಪ್ರಾರ್ಥನೆ, ಪ್ರಸಾದ ಪರಿಗ್ರಹ, ಪುಣ್ಯಾಹಶುದ್ಧಿ, ಪ್ರಸಾದ ಶುದ್ಧಿ, ವಾಸ್ತು ರಕ್ಷೋಘ್ನ ಹೋಮ, ವಾಸ್ತುಬಲಿ ಅಂಕುರಾರ್ಪಣೆ ನಡೆಯಲಿದೆ. ತಾ. 17 ರಂದು ಗಣಪತಿ ಹೋಮ, ಅಂಕುರ ಪೂಜೆ, ಬಿಂಬಶುದ್ಧಿ, ದ್ವಾರ ಪ್ರಾಯಶ್ಚಿತ ಹೋಮಗಳು, ಹೋಮ ಕಲಶಾಭಿಷೇಕ, ರಾತ್ರಿ ಅಂಕುರ ಪೂಜೆ, ದುರ್ಗಾ ನಮಸ್ಕಾರ ಪÀÇಜಾ ಕಾರ್ಯಗಳು ನಡೆಯಲಿವೆ. ತಾ. 18 ರಂದು ಶಾಂತಿ ಹೋಮ, ಅಂಕುರ ಪÀÇಜೆ, ಮಂಟಪ ಸಂಸ್ಕಾರ, ತ್ರಿಕಾಲ ಪೂಜೆ, ದುರ್ಗಾ ನಮಸ್ಕಾರ ಪÀÇಜೆ, ತಾ. 19 ರಂದು ತತ್ವ ಹೋಮ, ತತ್ವ ಕಲಶ ಪೂಜೆ, ತತ್ವ ಕಲಶಾಭಿಷೇಕ, ನಾಗ ಪ್ರತಿಷ್ಠೆ, ಶಾಸ್ತಾವು ಪ್ರತಿಷ್ಠೆಗಳು ನಡೆಯಲಿವೆ. ತಾ. 20 ರಂದು ತತ್ವ ಹೋಮ, ಸಂಹಾರ ತತ್ವ ಕಲಶ ಪೂಜೆ, ಶಯ್ಯಾಪೂಜೆ, ಜೀವಕಲಶ ಪÀÇಜೆ, ಜೀವೋದ್ವಾಸನೆ, ಜೀವಕಲಶ, ಶಯ್ಯಾಗಮನ, ರಾತ್ರಿ ಧ್ಯಾನಾದಿವಾಸ ಅದಿವಾಸ ಹೋಮ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಕಲಶಾದಿವಾಸ ಪÀÇಜಾ ಕಾರ್ಯಗಳು ನಡೆಯಲಿದೆ ಎಂದರು.

ತಾ. 21 ರಂದು ಬೆಳಿಗ್ಗೆ ಗಣಪತಿ ಹೋಮ. ಬೆಳಿಗ್ಗೆ 11.22 ಗಂಟೆಗೆ ಶ್ರೀ ಭಗವತಿ ದೇವರ ಪುನರ್ ಪ್ರತಿಷ್ಠೆ, ಜೀವಕಲಶಾಭಿಷೇಕ, ಪರಿ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ 2 ಕ್ಕೆ ಮಹಾ ಪೂಜೆ, ಸಂಜೆ 5 ರಿಂದ ಬಲಿ ಉತ್ಸವ, ಪ್ರಸಾದ ವಿತರಣೆ, ಮಂತ್ರಾಕ್ಷತೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ದೇವಸ್ಥಾನ ಸಮಿತಿ ಕಾರ್ಯದರ್ಶಿ ಬಾಚರಣಿಯಂಡ ಸುಮನ್, ಉಪಾಧ್ಯಕ್ಷ ಅಯ್ಯಂಡ್ರ ಸತೀಶ್ ಬೆಳ್ಯಪ್ಪ ಉಪಸ್ಥಿತರಿದ್ದರು.