ಮಡಿಕೇರಿ ಮೇ 10: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಪುರಸ್ಕøತ ಯೋಜನೆಯಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ತೆರೆಯಲಾದ ಅಂಗನವಾಡಿ ಕೇಂದ್ರಗಳಲ್ಲಿ ಯೋಜನೆಯ ಎಲ್ಲಾ ಸೇವಾ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಒದಗಿಸುವದು ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಮುಖ್ಯ ಕರ್ತವ್ಯವಾಗಿರುತ್ತದೆ.

ಸರ್ಕಾರದ ಮಾರ್ಗಸೂಚಿಯನ್ವಯ, ವರ್ಷದಲ್ಲಿ 300 ದಿನಗಳವರೆಗೆ ಪೂರಕ ಪೌಷ್ಟಿಕ ಆಹಾರ ನೀಡುವ ದಿನಗಳಲ್ಲಿ ವ್ಯತ್ಯಯ ಉಂಟಾಗದಂತೆ, ಅಗತ್ಯಕ್ಕನುಗುಣವಾಗಿ ಸಾರ್ವತ್ರಿಕ ರಜಾ ದಿನಗಳನ್ನು ಆಹಾರ ವಿತರಣೆಗಾಗಿ ನಿಗದಿಪಡಿಸಿ, 15 ದಿನಗಳ ಪೂರಕ ಪೌಷ್ಟಿಕ ಆಹಾರ ವಿತರಣೆಗೆ ಅಡಚಣೆಯಾಗದಂತೆ ಎಲ್ಲಾ ಫಲಾನುಭವಿಗಳಿಗೆ ಮನೆಗೆ ವಿತರಿಸುವ ಆಹಾರವನ್ನು ನೀಡಬೇಕೆಂಬ ಷರತ್ತಿಗೆ ಒಳಪಟ್ಟಂತೆ, ಅಂಗನವಾಡಿ ಕೇಂದ್ರಗಳಿಗೆ 2017-18ನೇ ಸಾಲಿನಲ್ಲಿ ತಾ. 8 ರಿಂದ 22 ರವರೆಗೆ 15 ದಿನಗಳ ಬೇಸಿಗೆ ರಜೆ ನೀಡಲಾಗಿದೆ.

ಮಾತೃಪೂರ್ಣ ಬಿಸಿಯೂಟ ಯೋಜನೆಯನ್ನು ಗರ್ಭಿಣಿ-ಬಾಣಂತಿಯರಿಗೆ ನೀಡುತ್ತಿರುವ ಬಿಸಿಯೂಟಕ್ಕೆ ತೊಂದರೆಯಾಗದಂತೆ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಅನುಕೂಲವಾಗುವಂತೆ ಮಿನಿ ಅಂಗನವಾಡಿ ಕೇಂದ್ರಗಳಿಗೆ ರಜೆ ಇರುವದಿಲ್ಲ. ಸಾಮಾನ್ಯ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರು 15 ದಿನಗಳ ಬೇಸಿಗೆ ರಜೆಯನ್ನು ನಂತರ ಸಹಾಯಕಿಯರು 15 ದಿನಗಳ ಬೇಸಿಗೆ ರಜೆಯನ್ನು ತೆಗೆದುಕೊಳ್ಳಲು ಕ್ರಮ ಕೈಗೊಳ್ಳುವದು.

ಬೇಸಿಗೆ ರಜೆಯನ್ನು ಕಾರ್ಯಕ್ರಮಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲು ತಿಳಿಸಿದೆ. ಯಾವದೇ ಕಾರಣಕ್ಕೆ ಇಂದ್ರಧನುಷ್ ಚುಚ್ಚು ಮದ್ದು ಕಾರ್ಯಕ್ರಮಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.