ಕಾಲ್ಕಿತ್ತ ಬಾಲಕ
ಮಡಿಕೇರಿ, ಮೇ 11: ನಗರದ ಬಾಲಕಿಯರ ಬಾಲಮಂದಿರದಿಂದ ತಾ. 8 ರಂದು ತಪ್ಪಿಸಿಕೊಂಡಿದ್ದ ಬಾಲೆಯರಿಬ್ಬರೂ ಪತ್ತೆಯಾಗಿದ್ದು, 12 ವರ್ಷದ ಬಾಲಕ ಮತ್ತೆ ತಪ್ಪಿಸಿಕೊಂಡಿದ್ದಾನೆ.
ಅಮ್ಮತ್ತಿ ಹೊಸೂರು ಗ್ರಾಮದ ತೋಟವೊಂದರ ಮನೆಯಲ್ಲಿ ಕಾಣೆಯಾಗಿದ್ದ ಮೂವರು ಮಕ್ಕಳು ಸಂಬಂಧಿಕರೊಂದಿಗೆ ಇರುವ ಸುಳಿವಿನ ಮೇರೆಗೆ ಇಂದು ಬೆಳಗಿನ ಜಾವ ಬಾಲಮಂದಿರ ಸಿಬ್ಬಂದಿ ಪೊಲೀಸರ ನೆರವಿನೊಂದಿಗೆ ತೆರಳಿದ್ದರು. ಅನತಿ ದೂರದಲ್ಲಿ ವಾಹನ ನಿಲ್ಲಿಸಿ ಮಕ್ಕಳಿದ್ದ ಮನೆಗೆ ಧಾವಿಸುವಷ್ಟರಲ್ಲಿ ಮೂವರು ಓಡಲು ಮುಂದಾಗಿದ್ದು, ಆ ವೇಳೆ ಬಾಲಕಿಯರಿಬ್ಬರನ್ನು ಹಿಡಿದುಕೊಳ್ಳುವಲ್ಲಿ ಈ ತಂಡ ಸಫಲವಾಗಿದೆ. ಆದರೆ 12ರ ಪೋರ ಮಾತ್ರ ಇವರುಗಳಿಗೆ ಸಿಕ್ಕದೆ ತೋಟದ ನಡುವೆ ತಪ್ಪಿಸಿಕೊಂಡಿದ್ದಾನೆ.
ಕೊನೆಗೂ ಬಾಲೆಯರನ್ನು ಮರಳಿ ಬಾಲಮಂದಿರಕ್ಕೆ ಕರೆತಂದಿರುವ ಸಿಬ್ಬಂದಿ, ಬಾಲಕನು ಸಂಬಂಧಿಕ ರೊಂದಿಗೆ ಇರುವದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.