ಮಡಿಕೇರಿ, ಮೇ 11: ಪಿ.ಯು.ಸಿ. ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆಯಲ್ಲಿ ಕಲಾ ವಿಭಾಗದಲ್ಲಿ ಮದೆ ಮಹೇಶ್ವರ ಕಾಲೇಜಿನ ಕೆ. ಹೇಮಂತ್ (558), ವಾಣಿಜ್ಯ ವಿಭಾಗದಲ್ಲಿ ಪೊನ್ನಂಪೇಟೆ ಸೆಂಟ್ ಅಂಥೋಣಿ ಕಾಲೇಜಿನ ಕೆ.ಜೆ. ಕಾವೇರಮ್ಮ (585) ವಿಜ್ಞಾನ ವಿಭಾಗದಲ್ಲಿ ವೀರಾಜಪೇಟೆ ಸೆಂಟ್ ಆ್ಯನ್ಸ್ ಕಾಲೇಜಿನ ಎನ್.ಎಸ್. ಮುತ್ತಮ್ಮ (584) ಪ್ರಥಮ ಸ್ಥಾನ ಗಳಿಸಿದ್ದಾರೆ. ಉಳಿದಂತೆ ಕಲಾ ವಿಭಾಗದಲ್ಲಿ ಶನಿವಾರಸಂತೆ ಕಾವೇರಿ ಕಾಲೇಜಿನ ಪಿ.ವಿ. ನಿತೀಶ್ (551) ದ್ವಿತೀಯ, ವೀರಾಜಪೇಟೆ ಕಾವೇರಿ ಕಾಲೇಜಿನ ಸಿ.ಎ. ಸುಬ್ರಮಣಿ (540) ಹಾಗೂ ಕೊಡ್ಲಿಪೇಟೆ ಪಿ.ಯು. ಕಾಲೇಜು ಜಿ.ಎನ್. ಗಾನವಿ (540) ತೃತೀಯ ಸ್ಥಾನ ಪಡೆದಿದ್ದಾರೆ.

ಹೊರ ಜಿಲ್ಲೆಯಲ್ಲಿ ವ್ಯಾಸಂಗ: ಕೊಡಗಿಗೆ ಹೆಮ್ಮೆಮಡಿಕೇರಿ, ಮೇ 11: ಹೊರ ಜಿಲ್ಲೆಯಲ್ಲಿ ಪಿ.ಯು.ಸಿ. ವ್ಯಾಸಂಗ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ಕೊಡಗಿನ ಮಡಿಕೇರಿಯ ನಿವಾಸಿಗಳ ಪುತ್ರಿ ಯರಾಗಿದ್ದು, ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಅಂಕ ಗಳಿಸಿ ಕೊಡಗು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ಬ್ಯಾಂಕಿಂಗ್ ಉದ್ಯೋಗ : ವಾಣಿಜ್ಯ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದ ಚಂದನಾಳಿಗೆ ಬಿಬಿಎಂ ಪದವಿಯೊಂದಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಆಸೆ. ಈಕೆ ಮಡಿಕೇರಿ ಕೆ. ನಿಡುಗಣೆಯ ಬಿ.ಕೆ. ಮುತ್ತಪ್ಪ - ಸವಿತಾ ದಂಪತಿಯ ಪುತ್ರಿ.

ಐಎಎಸ್ ಮಾಡುತ್ತೇನೆ : ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಹೇಮಂತ್‍ಗೆ ಐಎಎಸ್ ಮಾಡುವ ಬಯಕೆ. ಈತ ಕಾಟಕೇರಿಯ ಕೆ. ಕೇಶವ - ಲೀಲಾವತಿ ದಂಪತಿಯ ಪುತ್ರ.

ಇಂಜಿನಿಯರಿಂಗ್ ಬಯಕೆ : ವಿಜ್ಞಾನ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದ ಅಯ್ಯಪ್ಪಗೆ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ತೊಡಗಿಸುವಾಸೆ. ಈತ ಅಮ್ಮತ್ತಿಯ ಡಿ.ಎ. ಗಣಪತಿ - ದೇಚಮ್ಮ ದಂಪತಿಯ ಪುತ್ರ.

ಇಂಜಿನಿಯರಿಂಗ್ : ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಲುಬ್ನಾ ತರನಮ್‍ಗೂ ಇಂಜಿನಿಯರಿಂಗ್ ಮಾಡುವ ಕನಸು. ಈಕೆ ವೀರಾಜಪೇಟೆಯ ಅಬ್ದಲು ಜಲೀಲ್ - ಇರ್ಫಾನ್ ದಂಪತಿಯ ಪುತ್ರಿ.

ಸಿ.ಎ. ಮಾಡುವಾಸೆ : ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಹರ್ಷಿತಾಗೆ ಸಿಎ ಮಾಡುವಾಸೆ. ಈಕೆ ಮಡಿಕೇರಿ ಸುದರ್ಶನ ಬಡಾವಣೆಯ ಎನ್.ಎ. ಸೋಮಯ್ಯ - ಪಾರ್ವತಿ ದಂಪತಿಯ ಪುತ್ರಿ.

ಇಂಜಿನಿಯರಿಂಗ್ : ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಪೂಜಾಳಿಗೆ ಇಂಜಿನಿಯರಿಂಗ್ ಮಾಡುವ ಬಯಕೆ. ಈಕೆ ಕುಶಾಲನಗರ ಇಂದಿರಾ ಬಡಾವಣೆಯ ಎಂ.ಎಂ. ಕುಶಾಲಪ್ಪ - ಲಲಿತಾ ದಂಪತಿಯ ಪುತ್ರಿ.

ಉಪನ್ಯಾಸಕನಾಗುವೆ : ಕಲಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದ ಸುಬ್ರಮಣಿಗೆ ಉಪನ್ಯಾಸಕನಾಗುವ ಆಸೆ. ಈತ ಬೇಟೋಳಿಯ ಚೇಂದ್ರಿಮಾಡ ಹರೀಶ್ ಅಪ್ಪಯ್ಯ - ಸುಶೀಲ ದಂಪತಿಯ ಪುತ್ರ.

ಬಿ.ಕಾಂ. ಮಾಡುವೆ : ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕಾವೇರಮ್ಮಗೆ ಬಿ.ಕಾಂ. ಮಾಡುವ ಆಶಯ. ಈಕೆ ಕಿರುಗೂರಿನ ಕೆ.ಸಿ. ಜಯ - ಪಾರ್ವತಿ ದಂಪತಿಯ ಪುತ್ರಿ.

ಐಎಎಸ್ ಆಗುವ ಗುರಿ : ಕಲಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿರುವ ನಿತೀಶ್‍ಗೆ ಐ.ಎ.ಎಸ್. ಆಗುವ ಗುರಿಯಿದೆ.

ಈತ ಅಬ್ಬೂರುಕಟ್ಟೆಯ ಪಿ.ಡಿ. ವಿಜಯ ಶೋಭಾ ದಂಪತಿಯ ಪುತ್ರ.

ತಹಶೀಲ್ದಾರ್ ಆಗುವಾಸೆ : ಕಲಾ ವಿಭಾಗದಲ್ಲಿ ಜಿಲ್ಲೆಗೆ ತೃತೀಯ ಸ್ಥಾನಗಳಿಸಿರುವ ಗಾನವಿಗೆ ಕೆ.ಎ.ಎಸ್. ವ್ಯಾಸಂಗ ಮಾಡಿ ತಹಶೀಲ್ದಾರ್ ಆಗುವ ಆಶಯ. ಈಕೆ ಹಾಸನ ಜಿಲ್ಲೆಯ ಶುಕ್ರವಾರಸಂತೆಯ ಗೌಡ್ರು ಬಯಲಿನ ಜಿ.ವೈ. ನಾಗರಾಜ್ ರುಕ್ಮಿಣಿ ದಂಪತಿಯ ಪುತ್ರಿ.

(ಮೊದಲ ಪುಟದಿಂದ) ವಾಣಿಜ್ಯ ವಿಭಾಗದಲ್ಲಿ ಮಡಿಕೇರಿ ಸಂತ ಮೈಕಲರ ಕಾಲೇಜಿನ ಎನ್.ಎಸ್. ಹರ್ಷಿತ್ (582) ದ್ವಿತೀಯ, ಮಡಿಕೇರಿ ಸಂತ ಜೋಸೆಫರ ಕಾಲೇಜಿನ ಕಾಲೇಜಿನ ಬಿ.ಎಂ. ಚಂದನ (581) ತೃತೀಯ ಸ್ಥಾನ ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಮಡಿಕೇರಿ ಸಂತ ಮೈಕಲರ ಕಾಲೇಜಿನ ಎಂ.ಕೆ. ಪೂಜಾ (581) ಹಾಗೂ ವೀರಾಜಪೇಟೆ ಸೆಂಟ್ ಆ್ಯನ್ಸ್ ಕಾಲೇಜಿನ ಲೋರ್ನಾ ತರನಾಮ್ (581) ದ್ವಿತೀಯ, ಗೋಣಿಕೊಪ್ಪ ವಿದ್ಯಾನಿಕೇತನ ಕಾಲೇಜಿನ ಡಿ.ಜಿ. ಅಯ್ಯಪ್ಪ (580) ತೃತೀಯ ಸ್ಥಾನ ಪಡೆದಿದ್ದಾರೆ.

ಕೊಡಗಿನಲ್ಲಿ ಒಟ್ಟು 6648 ಮಂದಿ ಪರೀಕ್ಷೆ ಬರೆದಿದ್ದು, 4638 ಮಂದಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ 2166 ಮಂದಿ ಪರೀಕ್ಷೆ ಬರೆದಿದ್ದು, 1163 ಮಂದಿ ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 3235 ಮಂದಿ ಪರೀಕ್ಷೆ ಬರೆದು 2481 ಮಂದಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 1247 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 994 ಮಂದಿ ಉತ್ತೀರ್ಣರಾಗಿದ್ದಾರೆ.

3188 ಬಾಲಕರು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 1906 ಮಂದಿ ಉತ್ತೀರ್ಣರಾಗಿದ್ದಾರೆ. 3560 ಬಾಲಕಿಯರಲ್ಲಿ 2732 ಮಂದಿ ತೇರ್ಗಡೆ ಹೊಂದಿದ್ದಾರೆ. ರಾಜ್ಯದ 132 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.

ರಾಜ್ಯ ವ್ಯಾಪ್ತಿ 997 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, 48 ಕೇಂದ್ರಗಳಲ್ಲಿ ಮೌಲ್ಯ ಮಾಪನ ನಡೆಯಿತು. 17,422 ಉಪನ್ಯಾಸಕರು ಮೌಲ್ಯಮಾಪನ ಮಾಡಿದ್ದಾರೆ. ಜೂನ್ 28 ರಿಂದ ಜುಲೈ 8ರವರೆಗೆ ಪೂರಕ ಪರೀಕ್ಷೆಗಳು ನಡೆಯಲಿವೆ.

ವರದಿ: ಉಜ್ವಲ್ ರಂಜಿತ್, ಬಿ.ಜಿ. ರವಿಕುಮಾರ್.

ಸಹಕಾರ : ವಿಜಯ್, ಡಿ.ಎಂ.ಆರ್., ಎನ್.ಎನ್. ದಿನೇಶ್, ರಫೀಕ್.