ಮಡಿಕೇರಿ, ಮೇ 10: ದೇಶದಲ್ಲಿ ನಿರಂತರವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮಾನವ ಹಕ್ಕುಗಳ ಜಾಗೃತಿ ಸಮಿತಿ ನಿರ್ಧರಿಸಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಡಾ. ಲಕ್ಷ್ಮಣಸಿಂಗ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಮಾನವ ಹಕ್ಕುಗಳ ಉಲ್ಲಂಘನೆ ನ್ಯಾಯಾಲಯದ ಅಂಗಳವನ್ನೂ ಬಿಟ್ಟಿಲ್ಲ ಎಂದು ವಿಷಾದಿಸಿದರು. ಸಮಿತಿಯ ಜಿಲ್ಲಾ ಗೌರವಾಧ್ಯಕ್ಷ ರಾಗಿ ಬಿ.ಸಿ. ಬೋರಯ್ಯ, ಉಪಾಧ್ಯಕ್ಷ ರಾಗಿ ಎಂ.ಆರ್. ಪ್ರಸನ್ನ, ಪ್ರಧಾನ ಕಾರ್ಯದರ್ಶಿಯಾಗಿ ಕರ್ತಮಾಡ ಗಿರೀಶ್, ಕಾರ್ಯದರ್ಶಿ ಯಾಗಿ ಡಿ. ಕೃಷ್ಣ ಚೈತನ್ಯ, ಸಹ ಕಾರ್ಯದರ್ಶಿ ಯಾಗಿ ಎ.ವೈ. ರಫೀಕ್, ಖಜಾಂಚಿ ಯಾಗಿ ಕುಂಞಂಗಡ ಅರುಣ್ ತಮ್ಮಯ್ಯ, ಸಂಘಟನಾ ಕಾರ್ಯದರ್ಶಿ ಗಳಾಗಿ ಎ.ಎ. ರಶೀದ್, ವೈ.ವೈ. ಅಮೀರ್, ಜಿಲ್ಲಾ ಯುವ ಸಮಿತಿ ಪ್ರಮುಖರಾಗಿ ಎಂ. ಬಶೀರ್, ತೀತಿರ ಎಸ್. ಕುಟ್ಟಪ್ಪ, ರೈತ ಸಮಿತಿ ಪ್ರಮುಖರಾಗಿ ತೀತಮಾಡ ಕೆ. ಉತ್ತಯ್ಯ, ವಿದ್ಯಾರ್ಥಿ ಸಮಿತಿ ಪ್ರಮುಖರಾಗಿ ಬಿ.ಎಸ್. ಪುಷ್ಪರಾಜ್, ಕಾರ್ಮಿಕ ಸಮಿತಿ ಪ್ರಮುಖರಾಗಿ ಎಂ.ಎಂ. ಚನ್ನನಾಯಕ್, ವೀರಾಜ ಪೇಟೆ ತಾಲೂಕು ಕಾರ್ಮಿಕ ಸಮಿತಿ ಪ್ರಮುಖರಾಗಿ ಹೆಚ್.ಸಿ.ಅರುಣ್ ಅಯ್ಯಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಮಹಿಳಾ ಸಮಿತಿ ರಚನೆ

ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಜಿಲ್ಲಾ ಪದಾಧಿಕಾರಿ ಗಳನ್ನೂ ನೇಮಕ ಮಾಡಲಾಗಿದ್ದು, ಅಧ್ಯಕ್ಷರಾಗಿ ಪಡಿಕಲ್ ಕುಸುಮಾವತಿ ಚಂದ್ರಶೇಖರ್, ಉಪಾಧ್ಯಕ್ಷರಾಗಿ ಚೆಪ್ಪುಡಿರ ಸುಮತಿ ಪೂವಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ. ಜಯಂತಿ, ಕಾರ್ಯದರ್ಶಿಯಾಗಿ ಗಾಯತ್ರಿ, ಸಹ ಕಾರ್ಯದರ್ಶಿಯಾಗಿ ಸುಶೀಲಾ ಅಪ್ಪಾಜಿ, ಸಂಘಟನಾ ಕಾರ್ಯದರ್ಶಿ ಯಾಗಿ ಟಿ.ಟಿ. ಪುಟ್ಟಮ್ಮ, ಹೆಚ್.ಎಂ. ಪೂವಿ, ಎಂ.ಯು. ಜೈನಬಿ, ಖಜಾಂಚಿ ಯಾಗಿ ಎಂ.ಜಿ. ವಾಣಿ, ವಿದ್ಯಾರ್ಥಿ ಸಮಿತಿ ಪ್ರಮುಖರಾಗಿ ಎಸ್.ಎಸ್. ನಾಜಿರಾ ಅವರನ್ನು ನೇಮಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಉಪಾಧ್ಯಕ್ಷ ಜಿ. ಮುನಿಕೃಷ್ಣ, ಪ್ರಧಾನ ಕಾರ್ಯದರ್ಶಿ ಬಿ.ಆರ್. ಮಂಜುನಾಥ್, ಯುವ ಸಮಿತಿ ಅಧ್ಯಕ್ಷ ಟಿ.ವೈ. ಮಂಜುನಾಥ್, ಜಿಲ್ಲಾ ಗೌರವಾಧ್ಯಕ್ಷ ಬಿ.ಸಿ. ಬೋರಯ್ಯ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಪಡಿಕಲ್ ಕುಸುಮಾವತಿ ಚಂದ್ರಶೇಖರ್ ಉಪಸ್ಥಿತರಿದ್ದರು.