ಮಡಿಕೇರಿ, ಮೇ 10: ತಾ. 9ರಂದು ಶಕ್ತಿ ದಿನಪತ್ರಿಕೆಯಲ್ಲಿ ಪ್ರಕಟವಾದ ‘ಸಂಪಿಗೆಕಟ್ಟೆಯಲ್ಲಿ ರಸ್ತೆ - ನೀರಿಲ್ಲ' ಎಂಬ ವರದಿಯು ವೈಯಕ್ತಿಕ ಕಾರಣ ಹಾಗೂ ಸಂಗೀತ ಪ್ರಸನ್ನ ಅವರ ಅಭಿವೃದ್ಧಿಯನ್ನು ಸಹಿಸದವರ ದೂರಾಗಿದ್ದು, ಚೋಂದಮ್ಮ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಸಂಪಿಗೆಕಟ್ಟೆ ನಿವಾಸಿಗಳು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಸಾರ್ವಜನಿಕರು, ಚೋಂದಮ್ಮ ಅವರು ಇತ್ತೀಚೆಗೆ ನಡೆದ ಸರಕಾರಿ ಕಡಂಗ ಸರ್ವೆ ಕಾರ್ಯದ ನಂತರ ಹಾಗೂ ದೂರುದಾರರು ನಡೆಸುತ್ತಿರುವ ಹೋಂ ಸ್ಟೇಯು ಒಂದು ಮನೆಗೆ ನಗರಸಭೆಯಿಂದ ಪರವಾನಗಿ ಪಡೆದು 3 ಮನೆಗಳಲ್ಲಿ ಹೋಂ ಸ್ಟೇಯನ್ನು ಅಕ್ರಮವಾಗಿ ನಡೆಸುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದ ಕಾರಣದಿಂದಾಗಿ ವೈವಕ್ತಿಕ ದ್ವೇಷವನ್ನು ಈ ರೀತಿಯ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಕೇವಲ ದೂರುದಾರರ ಒಂದು ಮನೆಯ ಸದಸ್ಯರ ಅಭಿಪ್ರಾಯವಾಗಿದ್ದು, ಸಾರ್ವಜನಿಕರೆಲ್ಲರ ಅಭಿಪ್ರಾಯವಲ್ಲ ವೆಂದು ಸ್ಪಷ್ಟಪಡಿಸಿದ್ದಾರೆ.

ವಾರ್ಡ್ ನಂ. 23ರಲ್ಲಿ ಕಳೆದ 20 ವರ್ಷಗಳಿಂದ ನಡೆಯುದ ಅಭಿವೃದ್ಧಿ ಕಾರ್ಯವು ಸಂಗೀತ ಪ್ರಸನ್ನ ಅವರ ಆಯ್ಕೆಯ ನಂತರ ನಡೆದಿ ರುತ್ತದೆ. ವಾರ್ಡ್‍ನ ನಾಗರೀಕರಿಗೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗುತ್ತಿದೆ. ಸಂಪಿಗೆಕಟ್ಟೆಯಲ್ಲಿ ಇರುವ ಒಂದು ಕೊಳವೆ ಬಾವಿಯಿಂದ ಕಳೆದ ಸುಮಾರು 35 ವರ್ಷಗಳಿಂದ ನಾಗರೀಕರಿಗೆ ನೀರು ಪೂರೈಸುತ್ತಿದ್ದು, ಪ್ರಸ್ತುತ ಮನೆಗಳ ಸಂಖ್ಯೆ ಅಧಿಕವಾದರೂ ದೈನಂದಿನ ಕಾರ್ಯಗಳ ಅನುಕೂಲಕ್ಕೆ ತಕ್ಕಂತೆ ನೀರನ್ನು ಪೂರೈಸಲಾಗುತ್ತಿದ್ದು, ಸಂಪಿಗೆಕಟ್ಟೆ ಹಾಗೂ ಕನ್ನಂಡಬಾಣೆಯ ಸುಮಾರು 350 ಮನೆ ಹಾಗೂ ನೀರಿನ ಟ್ಯಾಂಕ್‍ಗೆ ಕೂಡ ಈ ಒಂದೇ ಕೊಳವೆ ಬಾವಿಯಿಂದ ನೀರು ಒದಗಿಸಲಾಗು ತ್ತಿದೆ. ದೂರುದಾರರು ಇಷ್ಟು ವರ್ಷಗಳ ಕಾಲ ಈ ಕೊಳವೆ ಬಾವಿಯ ನೀರನ್ನೇ ಉಪಯೋಗಿಸುತ್ತಿದ್ದು, ಇಷ್ಟು ವರ್ಷಗಳು ಇಲ್ಲದ ಸಮಸ್ಯೆ ಪ್ರಸ್ತುತ ಅಕ್ರಮ ಹೋಂ ಸ್ಟೇಯ ವಿರುದ್ಧ ಪ್ರಶ್ನಿಸಿದಾಗ ಉದ್ಭವಿಸಿರುವದು ವಿಪರ್ಯಾಸವಾಗಿದೆ ಎಂದು ಹೇಳಿದ್ದಾರೆ.

ದೂರಿನಲ್ಲಿ ಉಲ್ಲೇಖಿಸಿರುವಂತೆ ಬೀದಿ ದೀಪದ ಸಮಸ್ಯೆಯು ಅಸತ್ಯವಾಗಿದೆ. ಕಳೆದ 25 ವರ್ಷಗ ಳಿಂದ ಸಂಪಿಗೆಕಟ್ಟೆಯ ವ್ಯಾಪ್ತಿಗೆ ಬರುವ ಶ್ರೀ ರಾಜರಾಜೇಶ್ವರಿ ವಿದ್ಯಾಲ ಯದ ಮುಖ್ಯ ರಸ್ತೆಯಲ್ಲಿ ಬೀದಿ ದೀಪದ ಸೌಲಭ್ಯವಿಲ್ಲದೆ ಕತ್ತಲೆಯ ಕೂಪವಾಗಿದ್ದ ಹಾದಿಯು ಸಂಗೀತ ಪ್ರಸನ್ನ ಅವರ ಆಯ್ಕೆಯ ನಂತರ ನಗರಸಭೆಯ ಕೌನ್ಸಿಲರ್ ಮನ್ಸೂರ್ ಅವರೊಂದಿಗೆ ಒಡಗೂಡಿ ಬೀದಿ ದೀಪದ ವ್ಯವಸ್ಥೆಯನ್ನು ಕಲ್ಪಿಸಿರುತ್ತಾರೆ. ಹಾಗೂ ಪೂರ್ಣ ವಾರ್ಡ್‍ನಲ್ಲಿಯೂ ಬೀದಿ ದೀಪದ ವ್ಯವಸ್ಥೆಯನ್ನು ಕಲ್ಪಿಸಿರುತ್ತಾರೆ. ಮಾತ್ರವಲ್ಲದೆ ದೂರಿನಲ್ಲಿ ಉಲ್ಲೇಖಿಸಿ ರುವ ಕಚ್ಚಾ ರಸ್ತೆಯು ನಗರಸಭೆಯ 3ನೇ ಹಂತದ ಕಾಮಗಾರಿಯಲ್ಲಿ ಮಂಜೂರಾತಿ ಯಾಗಿದ್ದು, ಸರ್ವೆ ಕಾರ್ಯ ನಡೆದಿದೆ. ನಗರಸಭೆಯಿಂದ ಪ್ರತಿನಿತ್ಯ ಬರುವ ಟ್ರ್ಯಾಕ್ಟರ್ ವ್ಯವಸ್ಥೆಯು ವಾರ್ಡ್‍ನಲ್ಲಿ ಸಮರ್ಪಕವಾಗಿದೆ ಎಂದು ತಿಳಿಸಿದ್ದಾರೆ.