ಸಿದ್ದಾಪುರ, ಮೇ 11: ದಿಡ್ಡಳ್ಳಿಯ ಆಶ್ರಮ ಶಾಲೆಯ ಮುಂಭಾಗದಲ್ಲಿ ಅಳವಡಿಸಲಾಗಿದ್ದ 4 ಸಿ.ಸಿ ಕ್ಯಾಮರಾಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.ಈ ಹಿಂದೆ ದಿಡ್ಡಳ್ಳಿಯಲ್ಲಿ ಗುಡಿಸಲು ನಿರ್ಮಿಸಿದ ಆದಿವಾಸಿಗಳನ್ನು ತೆರವು ಮಾಡಿದ ಸಂದರ್ಭ ರಾಜ್ಯದ ವಿವಿಧೆಡೆಗಳಿಂದ ಹೋರಾಟಗಾರರು ದಿಡ್ಡಳ್ಳಿಗೆ ಆಗಮಿಸಿದ ಹಿನ್ನೆಲೆ ನಕ್ಸಲ್ ಚಟುವಟಿಕೆ ನಡೆಯುತ್ತಿರುವ ಸಂಶಯದೊಂದಿಗೆÀ ಜಿಲ್ಲಾಡಳಿತ ಸಿಸಿ ಕ್ಯಾಮರಾ ಅಳವಡಿಸಿತ್ತು. ಇದೀಗ ದಿಡ್ಡಳ್ಳಿಯ ಆದಿವಾಸಿಗಳನ್ನು ಬ್ಯಾಡಗೊಟ್ಟಕ್ಕೆ ಸ್ಥಳಾಂತರಿಸಿದ್ದು, ಆಶ್ರಮ ಶಾಲೆಯ ಮುಂಭಾಗ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾವನ್ನು ಐ.ಟಿ.ಡಿ.ಪಿ ಅಧಿಕಾರಿಗಳು ತೆಗೆಯಲು ತೆರಳಿದ ಸಂದರ್ಭ ಕಳ್ಳತನವಾಗಿರುವದು ಪತ್ತೆಯಾಗಿದೆ. ಇದೇ ಸಂದರ್ಭ ಸಿಸಿಟಿವಿಯ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇಬ್ಬರು ಯುವಕರ ದೃಶ್ಯ ಸೆರೆಯಾಗಿದೆ. ಆ ಮೇರೆಗೆ ಸಿದ್ದಾಪುರ ಪೊಲೀಸರು ಮುತ್ತಮ್ಮ ಅವರ ಪುತ್ರರಾದ ದಿನು ಹಾಗೂ ಹರೀಶರನ್ನು ವಿಚಾರಣೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.ಸ್ಥಳಕ್ಕೆ ತೆರಳಿದ ಪೊಲೀಸ್ ಠಾಣಾಧಿಕಾರಿ ಸುಬ್ರಮಣಿ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಯತ್ನ ನಡೆಸಿರುವದಾಗಿ ತಿಳಿದು ಬಂದಿದೆ.