ನಾಪೋಕ್ಲು, ಮೇ 11: 21 ವರ್ಷಗಳ ಇತಿಹಾಸ ಹೊಂದಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವ ಈ ಬಾರಿ ಹಾಕಿ ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸುತ್ತಿದೆ. ಈ ತನಕದ ಉತ್ಸವಗಳಲ್ಲಿ ಕೆಲವೇ ಕೆಲವು ತಂಡಗಳು ಮಾತ್ರ ‘ಕೊಡಗಿನ ವಿಶ್ವಕಪ್’ ಎಂಬ ರೀತಿಯಲ್ಲಿ ಪ್ರತಿಬಿಂಬಿತ ವಾಗಿರುವ ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಪಾರುಪತ್ಯ ಮೆರೆದಿವೆ. ಪ್ರಸಕ್ತ ವರ್ಷ ಈ ತನಕ ಪಾರುಪತ್ಯ ಮೆರೆದಿರುವ ತಂಡಗಳಿಗೆ ಹೊಸ ಕುಟುಂಬಗಳು ಸಡ್ಡು ಹೊಡೆದಿರುವದು ವಿಶೇಷ.ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿದ್ದಾಟಂಡ ಕಪ್ ಹಾಕಿ ಉತ್ಸವ ಹೊಸತನಕ್ಕೆ ಸಾಕ್ಷಿಯಾಗುತ್ತಿದೆ. ಈ ಪಂದ್ಯಾವಳಿ ನಾಲ್ಕರ ಘಟಕ್ಕೆ ತಲುಪಿದ್ದು, ತಾ. 12 ರಂದು (ಇಂದು) ಅಂತಿಮ ಎರಡು ತಂಡಗಳ ನಿರ್ಧಾರವಾಗಲಿದೆ.

ಹಲವು ಬಾರಿಯ ಚಾಂಪಿಯನ್, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಪಳಂಗಂಡ ಈ ಬಾರಿ ಕ್ವಾರ್ಟರ್ ಫೈನಲ್‍ನಲ್ಲಿ ಮುಗ್ಗರಿಸಿದರೆ, ಈ ಹುಲಿಗಳನ್ನು ಮೆಟ್ಟಿರುವ ಪರದಂಡ ಕುಟುಂಬ ಚೊಚ್ಚಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ. ಮಾಜಿ ಚಾಂಪಿಯನ್ ನೆಲ್ಲಮಕ್ಕಡ ತಂಡವನ್ನು ಚೇಂದಂಡ ತಂಡ ಮಣಿಸಿದೆ. ಮಾಜಿ ಚಾಂಪಿಯನ್‍ಗಳಾದ ಕೂತಂಡ ಹಾಗೂ ಮಂಡೇಪಂಡ ಶತಪ್ರಯತ್ನದ ನಡುವೆ ತಮ್ಮ ಪ್ರಶಸ್ತಿ ಕನಸು ಉಳಿಸಿಕೊಂಡಿದ್ದರೆ, 2015ರ ಕುಪ್ಪಂಡ ಕಪ್‍ನಲ್ಲಿ ವೀರೋಚಿತ ಸೋಲು ಕಂಡಿದ್ದ ಚೇಂದಂಡ ಕುಟುಂಬ ಈ ಬಾರಿ ಮತ್ತೆ ಪ್ರಶಸ್ತಿಯತ್ತ ದೃಢ ಹೆಜ್ಜೆಯಿರಿಸಿದೆ. ಚೇಂದಂಡ ಹಾಗೂ ಪರದಂಡ ತಂಡಗಳಿಗೆ ಹೆಚ್ಚಿನ ಬೆಂಬಲ ವ್ಯಕ್ತಗೊಳ್ಳುತ್ತಿದ್ದರೆ, ಮಾಜಿ ಚಾಂಪಿಯನ್

ಕೊಡವ ಕೌಟುಂಬಿಕ ಹಾಕಿ ನಮ್ಮೆ ಬಿದ್ದಾಟಂಡ ಕಪ್ ಅಂತಿಮ ಹಂತ ತಲುಪಿದ್ದು, ತಾ. 14ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಎಲ್ಲಾ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಬಿದ್ದಾಟಂಡ ಕಪ್ ಹಾಕಿ ನಮ್ಮೆಯ ತಾಂತ್ರಿಕ ನಿರ್ದೇಶಕ ಬಿ.ಎಸ್.ತಮ್ಮಯ್ಯ ಹೇಳಿದರು.

ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿದ್ದಾಟಂಡ ಕಪ್ ಹಾಕಿ ನಮ್ಮೆಯಲ್ಲಿ 306 ತಂಡಗಳು ಭಾಗವಹಿಸಿವೆ. ಸೆಮಿಫೈನಲ್‍ಗೆ ನಾಲ್ಕು ತಂಡಗಳು ಅರ್ಹತೆ ಪಡೆದಿವೆ. ಅಂತಿಮವಾಗಿ ಜಯಗಳಿಸಿದ ಎರಡು ತಂಡಗಳ ನಡುವೆ ಮೇ. 14ರಂದು ಫೈನಲ್ ಪಂದ್ಯ ನಡೆಯಲಿದೆ. ಕೊಡವ ಹಾಕಿ ಪಂದ್ಯಾಟದಲ್ಲಿ ಮೊದಲ ಬಾರಿ ಎಂಬಂತೆ ಪ್ರೀ ಕ್ವಾರ್ಟರ್ ಫೈನಲ್‍ಗೆ ಪ್ರವೇಶಿಸಿದ ಎಂಟು ತಂಡಗಳಿಗೆ ನಗದು ಬಹುಮಾನವನ್ನು ನೀಡಲಾಗುವದು ಎಂದರು.

ಫೈನಲ್ ಪಂದ್ಯದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿದ್ದಾಟಂಡ ಕುಟುಂಬದ ಪಟ್ಟೇದಾರ ಪೆÇ್ರ. ಸಿ.ಪೆÇನ್ನಪ್ಪ ವಹಿಸಲಿರುವರು. ಈ ಸಂದರ್ಭ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಎಂ.ಕುಟ್ಟಪ್ಪ ಉಪಸ್ಥಿತರಿರುವರು. ಫೈನಲ್ ಪಂದ್ಯಾಟವನ್ನು ಲೆಫ್ಟಿನೆಂಟ್ ಕರ್ನಲ್ ಬಿ.ಕೆ.ಸುಬ್ರಮಣಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್, ರಾಜ್ಯ ಸಭಾ ಸದಸ್ಯ ಬಿ.ಕೆ.ಹರಿ ಪ್ರಸಾದ್, ಮಾಜಿ ಮಂತ್ರಿ ಎಂ.ಸಿ.ನಾಣಯ್ಯ, ಎಂ.ಎಲ್.ಸಿ ವೀಣಾ ಅಚ್ಚಯ್ಯ, ಚೇರಂಡ ಕಿಶನ್, ವಿ.ಆರ್.ಸುದರ್ಶನ್, ಎಸ್.ಪಿ. ರಾಜೇಂದ್ರ ಪ್ರಸಾದ್, ಹಾಕಿ ಕೂರ್ಗ್ ಸಂಸ್ಥೆಯ ಅಧ್ಯಕ್ಷ ಪೈಕೇರ ಕಾಳಯ್ಯ, ಕೇಂದ್ರ ಮಂತ್ರಿ ಡಿ.ವಿ.ಸದಾನಂದ ಗೌಡ, ಕ್ರೀಡಾ ಮಂತ್ರಿ ವಿಜಯ ಗೋಹೆಲ್, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಎಂ.ಎಲ್.ಸಿ ಸುನಿಲ್ ಸುಬ್ರಮಣಿ, ಪಳಂಗಂಡ ಪೆÇನ್ನಪ್ಪ, ಜಿಲ್ಲಾಧಿಕಾರಿ ಡಾ. ವಿನ್ಸೆಂಟ್ ಡಿಸೋಜ ಸೇರಿದಂತೆ ಜಿಲ್ಲೆಯ ವಿವಿಧ ರಾಜಕೀಯ ದುರೀಣರು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ಫೈನಲ್ ಪಂದ್ಯದಲ್ಲಿ ವಿಶೇಷ ಕಾರ್ಯಕ್ರಮವಾಗಿ ಚೇಂದಿರ ನಿರ್ಮಲಾ ಬೋಪಣ್ಣ ಹಾಗೂ ತಾತಂಡ ಪ್ರತಾಪ್ ನಿರ್ದೇಶನದ ನೃತ್ಯ ರೂಪಕ, ಮೈಸೂರು ಅರಮನೆಯ ಇಂಗ್ಲಿಷ್ ಬ್ಯಾಂಡ್ ತಂಡದಿಂದ ಆಕರ್ಷಕ ಕಾರ್ಯಕ್ರಮ, ಕೊಡಗಿನ ವಿಶಿಷ್ಟ ಜಾನಪದ ನೃತ್ಯ ಪ್ರದರ್ಶನ, 2018ರ ಹಾಕಿ ಪಂದ್ಯಾಟದ ಉಸ್ತುವಾರಿ ವಹಿಸಿರುವ ಕುಲ್ಲೇಟಿರ ಕುಟುಂಬಕ್ಕೆ ಸ್ವಾಗತ, ಧ್ವಜ ಹಸ್ತಾಂತರ, ಸಂಜೆ ವಿವಿಧ ಕೊಡವ ಆಟ್, ಪಾಟ್ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಫೈನಲ್ ಪಂದ್ಯಾಟದ ನಂತರ ಬಿಟ್ಟಂಗಾಲದ ಯುವಕ ಸಂಘದ ವತಿಯಿಂದ ಬೈಕ್ ಸ್ಟಂಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಬಿದ್ದಾಟಂಡ ಕಪ್ ಹಾಕಿ ನಮ್ಮೆಯ ಅಧ್ಯಕ್ಷ ರಮೇಶ್ ಚಂಗಪ್ಪ ಮಾತನಾಡಿ ಬಿದ್ದಾಟಂಡ ಕಪ್ ಹಾಕಿ ನಮ್ಮೆಯು ಕ್ರೀಡಾ ಪ್ರೇಮಿಗಳಲ್ಲಿ ಶಾಶ್ವತವಾಗಿ ಉಳಿಯುವ ನಿಟ್ಟಿನಲ್ಲಿ ಪೆÇೀಸ್ಟ್ ಕಾರ್ಡ್ ಬಿಡುಗಡೆ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಗೋಷ್ಠಿಯಲ್ಲಿ ಪಂದ್ಯಾಟದ ಕಾರ್ಯದರ್ಶಿ ಬಿದ್ದಾಟಂಡ ರೋಜಿ ಚಿಣ್ಣಪ್ಪ, ಮೈದಾನ ಸಮಿತಿ ಅಧ್ಯಕ್ಷ ಬಿ.ಬಿ.ಬೆಳ್ಯಪ್ಪ, ಸದಸ್ಯರಾದ ಸುಜಾ ನಂಜಪ್ಪ, ಸುಮನ್ ಪ್ರದೀಪ್, ಮೇರಿ ಚಿಟ್ಟಿಯಪ್ಪ, ಸೋನಾ ಪೊನ್ನಮ್ಮ ಇದ್ದರು. - ಪಿ.ವಿ. ಪ್ರಭಾಕರ್(ಮೊದಲ ಪುಟದಿಂದ) ಅಂಜಪರವಂಡ ನಿರಾಶೆ ಅನುಭವಿಸಿದೆ. ಇನ್ನೊಂದು ಮಾಜಿ ಚಾಂಪಿಯನ್ ಮಂಡೇಪಂಡ ಕರಿನೆರವಂಡ ವಿರುದ್ಧ ಪ್ರಯಾಸದ ಜಯಗಳಿಸಿತು. ಇವು ಬಿದ್ದಾಟಂಡ ಕಪ್ 2017ರ ಕ್ವಾರ್ಟರ್ ಫೈನಲ್‍ನ ಘಟನಾವಳಿ.

ಬಿದ್ದಾಟಂಡ ಕಪ್‍ನ ಸೆಮಿಫೈನಲ್ ಹಂತಕ್ಕೆ ಹೊಸ ತಂಡವಾಗಿ ಪರದಂಡ ಕುಟುಂಬ ರಹದಾರಿ ಪಡೆದಿದೆ. ಇದರೊಂದಿಗೆ ಈ ಹಿಂದಿನ ವರ್ಷದಲ್ಲಿ ರನ್ನರ್ಸ್ ಪ್ರಶಸ್ತಿ ಪಡೆದಿರುವ ಚೇಂದಂಡ ಹಾಗೂ ಮಾಜಿ ಚಾಂಪಿಯನ್‍ಗಳಾದ ಕೂತಂಡ ಹಾಗೂ ಮಂಡೇಪಂಡ ತಲುಪಿವೆ. ಪಳಂಗಂಡ, ಅಂಜಪರವಂಡ, ನೆಲ್ಲಮಕ್ಕಡ (ಮಾಜಿ ಚಾಂಪಿಯನ್‍ಗಳು) ಬಿದ್ದಾಟಂಡ ಕಪ್‍ನಿಂದ ಹೊರಬಿದ್ದಿವೆ. ಮತ್ತೊಂದು ಅಚ್ಚರಿದಾಯಕ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಹಾಕಿ ಅಭಿಮಾನಿಗಳಿಗೆ ಮಾಜಿ ಚಾಂಪಿಯನ್ ಮಂಡೇಪಂಡ ಸಡ್ಡು ಹೊಡೆದಿದೆ. ಪ್ರಶಸ್ತಿ ಸುತ್ತಿನ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಬಲಿಷ್ಠ ಕರಿನೆರವಂಡ ತಂಡ ಮುಗ್ಗರಿಸುವ ಮೂಲಕ ಪ್ರಸಕ್ತ ವರ್ಷದ ಪ್ರಶಸ್ತಿಯ ಹಾದಿಯಲ್ಲಿ ಒಂದು ಹೊಸತಂಡ, 2015ರಲ್ಲಿ ಫೈನಲ್‍ನಲ್ಲಿ ಮುಗ್ಗರಿಸಿದ್ದ ಮತ್ತೊಂದು ತಂಡ ಹಾಗೂ ಎರಡು ಮಾಜಿ ಚಾಂಪಿಯನ್ ತಂಡಗಳು ಕಣದಲ್ಲಿ ಉಳಿದಿದ್ದು, ತಾ. 12 ರಂದು (ಇಂದು) ಫೈನಲ್ ತಲುಪುವ ಎರಡು ತಂಡಗಳ ನಿರ್ಧಾರವಾಗಲಿದೆ.

ರೋಮಾಂಚಕ ಕ್ವಾರ್ಟರ್ ಫೈನಲ್

306 ತಂಡಗಳು ಪಾಲ್ಗೊಂಡಿದ್ದ ಬಿದ್ದಾಟಂಡ ಹಾಕಿ ಉತ್ಸವದ ಕ್ವಾರ್ಟರ್ ಫೈನಲ್ ಇಂದು ರೋಮಾಂಚಕಾರಿಯಾಗಿ ನಡೆಯಿತು. ಕ್ರೀಡಾಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಪಳಂಗಂಡ ಹಾಗೂ ಪರದಂಡ ಕುಟುಂಬದ ನಡುವಿನ ಪಂದ್ಯದಲ್ಲಿ ತೂಗುಯ್ಯಾಲೆಯಾಡಿದ ವಿಜಯಲಕ್ಷ್ಮಿ ಕೊನೆ ಗಳಿಗೆಯಲ್ಲಿ ಪರದಂಡ ಪರ ವಾಲಿತು. ಈ ಪಂದ್ಯದಲ್ಲಿ ಪರದಂಡ ತಂಡ ಪಳಂಗಂಡ ತಂಡವನ್ನು 3-2 ಗೋಲಿನಿಂದ ಸೋಲಿಸಿತು. ಪರದಂಡ ಪರ ಪ್ರಜ್ವಲ್ ಪೂವಣ್ಣ, ಕೀರ್ತನ್ ಮೊಣ್ಣಪ್ಪ ಹಾಗೂ ರಂಜನ್ ಅಯ್ಯಪ್ಪ ಗೋಲು ಗಳಿಸಿದರು. ಪಳಂಗಂಡ ಪರ ಪ್ರಜ್ವಲ್ ಬೆಳ್ಳಿಯಪ್ಪ ಹಾಗೂ ಅಜಯ್ ಅಯ್ಯಪ್ಪ ಗೋಲು ಗಳಿಸಿದರು.

ಕೂತಂಡ ಗಿ/s ಅಂಜಪರವಂಡ

ಮಾಜಿ ಚಾಂಪಿಯನ್‍ಗಳಾದ ಕೂತಂಡ ಹಾಗೂ ಅಂಜಪರವಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೂತಂಡ ತಂಡ 2-0 ಗೋಲಿನಿಂದ ಜಯಗಳಿಸಿತು. ವಿಜೇತ ತಂಡದ ಪರ ಕೆ.ಸಿ. ಬೋಪಣ್ಣ 2 ಗೋಲು ಬಾರಿಸಿದರು. ಅಂಜಪರವಂಡ ತಂಡದ ಹೋರಾಟವನ್ನು ಕೂತಂಡ ಆಟಗಾರರು ಯಶಸ್ವಿಯಾಗಿ ನಿಭಾಯಿಸಿದರು.

ಚೇಂದಂಡ ಗಿ/s ನೆಲ್ಲಮಕ್ಕಡ

ಮಾಜಿ ಚಾಂಪಿಯನ್ ನೆಲ್ಲಮಕ್ಕಡ ವಿರುದ್ಧ ಸೆಣಸಿದ ಚೇಂದಂಡ ತಂಡ 4-1 ಗೋಲಿನ ಅಂತರದಿಂದ ನಿರಾಯಾಸವಾಗಿ ಜಯಗಳಿಸಿತು. ಚೇಂದಂಡ ಪರ ಮೋಕ್ಷಿತ್ (2) ತಮ್ಮಯ್ಯ ಹಾಗೂ ಬೋಪಣ್ಣ ತಲಾ ಒಂದು ಗೋಲು ಗಳಿಸಿದರು. ನೆಲ್ಲಮಕ್ಕಡ ಪರ ಸಚಿನ್ ಏಕೈಕ ಗೋಲು ಗಳಿಸಿದರು.

ಕರಿನೆರವಂಡ ಗಿ/s ಮಂಡೇಪಂಡ

ರೋಮಾಂಚಕಾರಿಯಾಗಿ ನಡೆದ ಕೊನೆಯ ಕ್ವಾರ್ಟರ್ ಫೈನಲ್‍ನಲ್ಲಿ ಕರಿನೆರವಂಡ ತಂಡದ ಹೋರಾಟವನ್ನು ಬದಿಗೊತ್ತಿದ ಮಾಜಿ ಚಾಂಪಿಯನ್ ಮಂಡೇಪಂಡ ವಿಜಯ ಮಾಲೆ ಧರಿಸಿತು. ಮಂಡೇಪಂಡ ಪರ ಸಜನ್, ದಿಲನ್ ಹಾಗೂ ಬೋಪಣ್ಣ ಗೋಲುಗಳಿಸಿದರೆ, ಕರಿನೆರವಂಡ ಪರ ಲಿತೇಶ್ ಬಿದ್ದಪ್ಪ ಹಾಗೂ ಸೋಮಣ್ಣ ಗೋಲು ಬಾರಿಸಿದರು. ಸೆಮಿಫೈನಲ್ ಪಂದ್ಯ ತಾ. 12 ರಂದು (ಇಂದು) ನಡೆಯಲಿದೆ.