ಸೋಮವಾರಪೇಟೆ, ಮೇ 15: ಸಮೀಪದ ತಾಕೇರಿ ಗ್ರಾಮದ ಉಮಾಮಹೇಶ್ವರ ಗ್ರಾಮಾಭಿವೃಧ್ದಿ ಮಂಡಳಿ, ತಾಕೇರಿ ವಾಲಿಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ಗ್ರಾಮದ ಸಮುದಾಯ ಭವನದ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ವೀರಾಜಪೇಟೆಯ ಗುಂಡಿಗೇರಿ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಸಿದ್ದಾಪುರ ರ್ಯಾಂಬೋ ತಂಡ ದ್ವಿತೀಯ ಸ್ಥಾನ ಪಡೆದರೆ, ಸಿದ್ದಲಿಂಗಪುರ ಫ್ರೆಂಡ್ಸ್ ತೃತೀಯ ಸ್ಥಾನ ಗಳಿಸಿತು. ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ತಾಕೇರಿ ಈಶ್ವರಿ ಯುವತಿ ಮಂಡಳಿ ಪ್ರಥಮ, ಮಲ್ಲಾಜ್ಜಿರ ಮಹಿಳಾ ತಂಡ ದ್ವಿತೀಯ ಸ್ಥಾನ ಗಳಿಸಿತು. ಪುರುಷರ ಹಗ್ಗಜಗ್ಗಾಟದಲ್ಲಿ ಮಲ್ಲಾಜ್ಜಿರ ಫ್ರೆಂಡ್ಸ್ ಪ್ರಥಮ, ತಾಕೇರಿ ಪ್ಲಾಂಟರ್ಸ್ ಕ್ಲಬ್ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ ವಿಭಾಗದಲ್ಲಿ ತಾಕೇರಿ ನಾಡಮ್ಮ ಸ್ವಸಹಾಯ ಸಂಘ ಪ್ರಥಮ, ಮಲ್ಲಾಜ್ಜಿರ ಮಹಿಳಾ ತಂಡ ದ್ವಿತೀಯ ಸ್ಥಾನ ಗಳಿಸಿತು. ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ತಾಕೇರಿ ಗ್ರಾಮದ ಪ್ರಜ್ವಲ್ ಪ್ರಥಮ, ಹೃಷಿಕೇಶ್ ದ್ವಿತೀಯ, ಧನುಷ್ ತೃತೀಯ, ಪ್ರತಿಕ್ ನಾಲ್ಕನೇ ಸ್ಥಾನ ಗಳಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಗಳು, ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.