ಮಡಿಕೇರಿ, ಮೇ 15: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಮುಖ್ಯ ಮಂತ್ರಿಯವರ ಕೌಶಲ್ಯ ಕರ್ನಾಟಕ ಯೋಜನೆ ಕಾರ್ಯಕ್ರಮದಡಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರು ಯುವ ಜನರ ಬೇಡಿಕೆ ಸಮೀಕ್ಷೆ ಮತ್ತು ಕೌಶಲ್ಯಾಭಿವೃದ್ಧಿ ನೋಂದಣಿ ಕಾರ್ಯಕ್ಕಾಗಿ ಕೌಶಲ್ಯಾಭಿವೃದ್ಧಿ ವೆಬ್ ಪೋರ್ಟಲ್‍ಗೆ ಚಾಲನೆ ನೀಡಿದರು. ಜಿಲ್ಲೆಯಲ್ಲಿ 18 ರಿಂದ 35 ವರ್ಷ ವಯೋಮಾನದ ಉದ್ಯೋಗ ಬಯಸುವ ನಿರುದ್ಯೋಗಿ ಯುವ ಜನರು ಆನ್‍ಲೈನ್ ಮೂಲಕ ಕೌಶಲ್ಯಾಭಿವೃದ್ಧಿ ವೆಬ್ ಪೋರ್ಟಲ್ ತಿತಿತಿ.ಞಚಿushಚಿಟಞಚಿಡಿ.ಛಿom ನಲ್ಲಿ ನೋಂದಣಿಯನ್ನು ಮಾಡಿಕೊಂಡು ಅದರ
(ಮೊದಲ ಪುಟದಿಂದ) ಸದುಪಯೋಗವನ್ನು ಪಡೆದುಕೊಳ್ಳು ವಂತೆ ನಿರುದ್ಯೋಗಿಗಳಿಗೆ ಕರೆ ನೀಡಿದರು.
ಈ ನೋಂದಣಿ ಅಭಿಯಾನ ಮೇ, 15 ರಿಂದ 22 ರವರೆಗೆ ಕಂದಾಯ ನಿರೀಕ್ಷಕರ ಕಚೇರಿ, ಕೋಟೆ ಆವರಣ, ಮಡಿಕೇರಿ, ತಹಶೀಲ್ದಾರರ ಕಚೇರಿ, ಸೋಮವಾರಪೇಟೆ ಮತ್ತು ಪಟ್ಟಣ ಪಂಚಾಯಿತಿ, ವೀರಾಜಪೇಟೆಯಲ್ಲಿ ನಡೆಯಲಿದ್ದು, ಅದರ ಸದುಪಯೋಗವನ್ನು ಪಡೆದುಕೊಳ್ಳುವದು ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ವರ್ಷ ಪೂರ್ತಿ ನಡೆಯುವ ಕೌಶಲ್ಯಾಕಾಂಕ್ಷಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸೆÀ್ಯ ವೀಣಾ ಅಚ್ಚಯ್ಯ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕೆÀ್ಷ ಪದ್ಮಿನಿ ಪೊನ್ನಪ್ಪ, ನಗರಸಭೆ ಅಧ್ಯಕೆÀ್ಷ ಕಾವೇರಮ್ಮ ಸೋಮಣ್ಣ, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪಂಚಾಯತ್ ಸಿಇಒ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಜಿ.ಪಂ.ಯೋಜನಾ ನಿರ್ದೇಶಕ ಸಿದ್ದಲಿಂಗಮೂರ್ತಿ, ನಾನಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿ ನಿಲಯ ಉದ್ಘಾಟನೆ
ಕುಶಾಲನಗರ : ವಿದ್ಯಾರ್ಥಿಗಳಿಗೆ ಸರಕಾರ ಒದಗಿಸುತ್ತಿರುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಕೊಳ್ಳುವಂತೆ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ತಿಳಿಸಿದ್ದಾರೆ.
ಬೈಚನಹಳ್ಳಿಯ ಗುಂಡೂರಾವ್ ಬಡಾವಣೆಯಲ್ಲಿ ರೂ 2.79 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಗೊಂಡ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಉದ್ಘಾಟಿಸಿ ಫಲಾನುಭವಿಗಳಿಗೆ ಸಚಿವರು ಹಕ್ಕುಪತ್ರ ವಿತರಿಸಿದರು.
ಈ ಸಂದರ್ಭ ಕರ್ನಾಟಕ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್, ಕೊಡಗು ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ವಿಜು ಸುಬ್ರಮಣಿ, ಸದಸ್ಯೆ ಕೆ.ಪಿ.ಚಂದ್ರಕಲಾ, ಕುಡಾ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಕೊಡಗು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಯಾದೇವಿ ಗಲಗಲಿ, ಉಪ ವಿಭಾಗಾಧಿಕಾರಿ ನಂಜುಂಡೇ ಗೌಡ, ಕೊಡಗು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಆರ್.ಜಿ.ಸಚಿನ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಂ.ಎ.ರಾಮೇಗೌಡ ಮತ್ತಿತರರು ಇದ್ದರು.
ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಬೇಕಿದ್ದ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಪಟ್ಟಣಪಂಚಾಯ್ತಿ ಅಧ್ಯಕ್ಷ ಎಂ.ಎಂ.ಚರಣ್, ಸ್ಥಳೀಯ ವಾರ್ಡ್ ಸದಸ್ಯೆ ಕೆ.ಆರ್.ರೇಣುಕಾ ಸೇರಿದಂತೆ ಗಣ್ಯ ಅತಿಥಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು.
ಸಚಿವರಿಂದ ಹಕ್ಕುಪತ್ರ
ಕುಟ್ಟ ಗ್ರಾ.ಪಂ. ವ್ಯಾಪ್ತಿಯ 159 ಅರ್ಹ ಫಲಾನುಭವಿಗಳಿಗೆ ವಸತಿ ನಿವೇಶನದ ಹಕ್ಕು ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಮ್ ಅವರು ವಿತರಿಸಿದರು.
ಕುಟ್ಟ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ 94ಸಿ ಮೂಲಕ 135, ಹಾಗೂ ಇತರ 24 ಸೇರಿ ಒಟ್ಟು 159 ವಸತಿ ರಹಿತ ಫಲಾನುಭವಿಗಳಿಗೆ ಸಚಿವರು ಹಕ್ಕುಪತ್ರ ವಿತರಿಸಿದರು.
ಈ ಸಂದರ್ಭ ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,, ಬಹುವರ್ಷದ ಬೇಡಿಕೆಯಂತೆ 94ಸಿ.ಯಡಿ ಹಕ್ಕುಪತ್ರ ಫಲಾನುಭವಿಗಳಿಗೆ ವಿತರಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಿರುವ ಸಿದ್ದರಾಮಯ್ಯ ಸರಕಾರ, ಉಸ್ತುವಾರಿ ಸಚಿವ ಸೀತಾರಾಮ್ ಅವರ ಮುತುವರ್ಜಿ ಪ್ರಶಂಸನೀಯ, ಫಲಾನುಭವಿಗಳ ಹಕ್ಕುಪತ್ರ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ಅರಣ್ಯ ಕೈಗಾರಿಕೆ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ತಾ.ಪಂ. ಸದಸ್ಯ ಪಲ್ವೀನ್ ಪೂಣಚ್ಚ, ಕುಟ್ಟ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ರಮೇಶ್ ಉತ್ತಪ್ಪ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಕೃಷ್ಣ, ಜಿಲ್ಲಾಧಿಕಾರಿ ಡಾ. ಆರ್.ವಿ. ಡಿಸೋಜ, ಲೋಕೋಪಯೋಗಿ ಎಂಜಿನಿಯರ್ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ಸೇತುವೆ ಉದ್ಘಾಟನೆ
ಶ್ರೀಮಂಗಲದಿಂದ ಕುಟ್ಟ ಮೂಲಕ ಅಂತರ್ ರಾಜ್ಯ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಗೆ ಕುಟ್ಟ ಸಮೀಪ ಪೂಜೆಕಲ್ಲ್‍ನಲ್ಲಿ ರಾಮತೀರ್ಥ ನದಿಗೆ ನೂತನವಾಗಿ ರೂ. 1.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆಯನ್ನು ಉಸ್ತುವಾರಿ ಸಚಿವ ಸೀತಾರಾಮ್ ಉದ್ಘಾಟಿಸಿದರು.
ಈ ಸಂದÀರ್ಭ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಪ್ರಮುಖ ರಸ್ತೆ-ಅಗತ್ಯವಿರುವಲ್ಲಿಗೆ ಸೇತುವೆ ನಿರ್ಮಿಸಿ ಜನರಿಗೆ ಸೌಲಭ್ಯ ಕಲ್ಪಿಸಲು ಅನುದಾನ ಬಿಡುಗಡೆ ಮಾಡಿ ಅಭಿವೃದ್ದಿ ಮಾಡಲಾಗಿದೆ. ಬಹುತೇಕ ದು:ಸ್ಥಿತಿಯಲ್ಲಿದ್ದ ರಸ್ತೆಗಳು ಸುಧಾರಣೆ ಪಡಿಸಲಾಗಿದೆ ಎಂದರು.
ರಾಜ್ಯ ಸರಕಾರದ 150 ಲಕ್ಷ ಅನುದಾನದಲ್ಲಿ ಈ ಸೇತುವೆಯನ್ನು ಲೋಕೋಪಯೋಗಿ ಇಲಾಖೆ ಮೂಲಕ ಗುತ್ತಿಗೆದಾರ ಮೈಸೂರಿನ ಭಾಸ್ಕರ್‍ರಾವ್ ಕಾಮಗಾರಿ ಮಾಡಿದ್ದಾರೆ.
ಯೋಗ್ಯರನ್ನು ತಿಳಿಸಿ
ಕುಶಾಲನಗರ : ಎಲ್ಲರಿಗೂ ಮೆಚ್ಚುಗೆಯಾಗುವ ಯೋಗ್ಯ ಡಿಎಫ್‍ಒ ಒಬ್ಬರನ್ನು ಆಯ್ಕೆ ಮಾಡಿ ತನಗೆ ತಿಳಿಸಿದಲ್ಲಿ ಮಡಿಕೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ವರ್ಗಾವಣೆಗೆ ಕ್ರಮಕೈಗೊಳ್ಳ ಲಾಗುವದು! ಇದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಸೋಮವಾರ ಪೇಟೆ ತಾಲೂಕು ಸೌದೆ ಮಾರಾಟ ಸಂಘದ ಪದಾಧಿಕಾರಿಗಳು ಮಡಿಕೇರಿ ವಿಭಾಗದ ಡಿಎಫ್‍ಒ ಓರ್ವರ ಮೇಲೆ ದೂರು ಸಲ್ಲಿಸಿದ ಸಂದರ್ಭ ನೀಡಿದ ಭರವಸೆ.
ಕುಶಾಲನಗರದ ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರಿಗೆ ಸೌದೆ ಮಾರಾಟ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ಮತ್ತು ಸದಸ್ಯರು ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಪಿ.ಚಂದ್ರಕಲಾ ಅವರ ಮುಖಾಂತರ ಭೇಟಿ ಮಾಡಿ ದೂರು ಸಲ್ಲಿಸಿದರು. ಡಿಎಫ್‍ಒ ಅವರು ಸೌದೆ ಮಾರಾಟಗಾರರಿಗೆ ಹಾಗೂ ಸ್ವಂತ ಉಪಯೋಗಕ್ಕೆ ಬಳಕೆಗೆ ಅಗತ್ಯವಿರುವ ಅನುಮತಿ ನೀಡಲು ಕಿರುಕುಳ ನೀಡುತ್ತಿದ್ದಾರೆ. ಅಧಿಕಾರಿಗಳು ಕಛೇರಿಯಲ್ಲಿರುವದಿಲ್ಲ. ಕಾಫಿ ತೋಟದಿಂದ ಸೌದೆ ಸಾಗಾಟ, ಆನೆ ಪರಿಹಾರ ನೀಡುವ ಸಂದರ್ಭ ಹಲವು ರೀತಿಯಲ್ಲಿ ತೊಂದರೆ ಉಂಟುಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ಸಚಿವರ ಮುಂದಿಟ್ಟ ಸಂದರ್ಭ ನೂತನ ಡಿಎಫ್‍ಒ ಒಬ್ಬರನ್ನು ಹುಡುಕಿ ಮಾಹಿತಿ ನೀಡಿದರೆ ಬದಲಾವಣೆ ಮಾಡುವ ಭರವಸೆಯನ್ನು ಸಚಿವರು ನೀಡಿದರು.