ಇಂದಿನಿಂದ ಆನೆ ಗಣತಿ ಆರಂಭ

ಹನೂರು, ಮೇ 15: ನಾಲ್ಕು ದಿನಗಳ ಕಾಲ ನಡೆಯುವ ಆನೆ ಗಣತಿಗೆ ಕಾವೇರಿ ಹಾಗೂ ಮಲೆಮಹದೇಶ್ವರ ವನ್ಯಜೀವಿ ಧಾಮ ಸಜ್ಜುಗೊಂಡಿದ್ದು, ಗಣತಿಗೆ ಅನುಕೂಲವಾಗುವಂತೆ ಸ್ಥಳ ವಿಸ್ತೀರ್ಣ ಹಾಗೂ ಬ್ಲಾಕ್‍ಗಳನ್ನು ನಿರ್ಮಿಸುವ ಕಾರ್ಯ ಅರಣ್ಯದೊಳಗೆ ಭರದಿಂದ ಸಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ವಿಸ್ತೀರ್ಣ ಹೊಂದಿರುವ ವನ್ಯಧಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾವೇರಿ ವನ್ಯಧಾಮ ಹಾಗೂ ಇದಕ್ಕೆ ಹೊಂದಿಕೊಂಡಂತೆ ಇರುವ ಮಲೆಮಹದೇಶ್ವರ ವನ್ಯಧಾಮದಲ್ಲಿ ಇದೇ ಮೇ 16 ರಿಂದ ನಾಲ್ಕು ದಿನಗಳ ಕಾಲ ಆನೆ ಗಣತಿ ನಡೆಯಲಿದೆ. ಆನೆಗಣತಿಯಲ್ಲಿ ಸ್ವಯಂಪ್ರೇರಿತಾಗಿ ಪಾಲ್ಗೊಳ್ಳಲು ಈಗಾಗಲೇ ಸ್ವಯಂ ಸೇವಕರು ನೋಂದಣಿ ಮಾಡಿಕೊಂಡಿದ್ದಾರೆ. ಕಾವೇರಿ ವನ್ಯಧಾಮದಲ್ಲಿ 66 ಬ್ಲಾಕ್‍ಗಳನ್ನು ಗುರುತು ಮಾಡಲಾಗಿದೆ. 5 ಚದರ ಕಿ.ಮೀ. ವಿಸ್ತೀರ್ಣವನ್ನು ಒಳಗೊಂಡಿರುವ ಪ್ರತಿ ಬ್ಲಾಕ್ನಲ್ಲಿಯೂ ಇಬ್ಬರು ಸಿಬ್ಬಂದಿ ಹಾಗೂ ಒಬ್ಬ ಸ್ವಯಂ ಸೇವಕ ಇರಲಿದ್ದಾರೆ. ಕಾವೇರಿ ವನ್ಯಧಾಮದಲ್ಲಿ 52 ಸ್ವಯಂ ಸೇವಕರು, 132 ಸಿಬ್ಬಂದಿಯನ್ನು ಮತ್ತು ಮಲೆಮಹದೇಶ್ವರ ವನ್ಯಧಾಮದಲ್ಲಿ 45 ಸ್ವಯಂ ಸೇವಕರು ಹಾಗೂ 112 ಸಿಬ್ಬಂದಿ ಮತ್ತು 5 ಸಂಪನ್ಮೂಲ ವ್ಯಕ್ತಿಗಳನ್ನು ಇದಕ್ಕಾಗಿ ನಿಯೋಜಿಸಲಾಗಿದೆ.

ಬಿಸಿಯೂಟದಲ್ಲಿ ಹಲ್ಲಿ : 27 ಮಕ್ಕಳು ಅಸ್ವಸ್ಥ

ಪಾಟ್ನಾ, ಮೇ 15: ಹರಿಯಾಣದ ಫರಿದಾಬಾದ್‍ನಲ್ಲಿ ಮಧ್ಯಾಹ್ನದ ಬಿಸಿ ಊಟದಲ್ಲಿ ಹಾವಿನ ಮರಿ ಪತ್ತೆಯಾದ ಬೆನ್ನಲ್ಲೇ ಬಿಹಾರದಲ್ಲಿ ಸೋಮವಾರ ಮಧ್ಯಾಹ್ನ ಬಿಸಿ ಊಟದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದ್ದು, ಊಟ ಮಾಡಿದ 27 ಮಕ್ಕಳು ಅಸ್ವಸ್ಥರಾಗಿದ್ದಾರೆ. ಬಿಹಾರದ ಜಮುಯಿಯಲ್ಲಿ ಇಂದು ಈ ಘಟನೆ ನಡೆದಿದ್ದು, ಅಸ್ವಸ್ಥ ಮಕ್ಕಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಗುರುವಾರ ಫರಿದಾಬಾದ್‍ನ ರಾಜಕೀಯ ಬಾಲಕಿಯರ ಹಿರಿಯ ಮಾಧ್ಯಮಿಕ ಶಾಲೆಯ ಮಕ್ಕಳಿಗೆ ನೀಡಲಾದ ಮಧ್ಯಾಹ್ನದ ಬಿಸಿ ಊಟದಲ್ಲಿ ಹಾವಿನ ಮರಿ ಪತ್ತೆಯಾಗಿತ್ತು. ಆದರೆ, ಅಷ್ಟೊತ್ತಿಗಾಗಾಲೇ ಮಕ್ಕಳಿಗೆ ಈ ಬಿಸಿಯೂಟವನ್ನು ಬಡಿಸಲಾಗಿತ್ತು. ಕೆಲ ಮಕ್ಕಳು ಇದೇ ಬಿಸಿಯೂಟವನ್ನು ಸೇವಿಸಿದ್ದರು. ಆಗ ಶಿಕ್ಷಕರು ತಕ್ಷಣವೇ ಮಕ್ಕಳಿಗೆ ಊಟ ಸೇವಿಸದಂತೆ ತಡೆದಿದ್ದಾರೆ. ಇದರ ಮಧ್ಯೆಯೇ ಕೆಲ ಮಕ್ಕಳು ಈ ವಿಷ ಆಹಾರ ಸೇವಿಸುತ್ತಿದ್ದಂತೆ ವಾಂತಿ ಮಾಡಿಕೊಂಡಿದ್ದರು.

5,300 ಪೆÇಲೀಸ್ ಹುದ್ದೆಗಳಿಗೆ 1 ಲಕ್ಷ ಅರ್ಜಿ

ಶ್ರೀನಗರ, ಮೇ 15 : ಹಿಂಸಾಚಾರ ಪೀಡಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರ ಕಲ್ಲು ತೂರಾಟ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದೆ.ಈ ಮಧ್ಯೆ ಪೆÇಲೀಸರ ಕೊರತೆಯನ್ನು ನೀಗಿಸಿಕೊಳ್ಳಲು ಮುಂದಾಗಿರುವ ಕಾಶ್ಮೀರ ಸರ್ಕಾರ, ಹಿಂಸಾಚಾರ ಪೀಡಿತ ದಕ್ಷಿಣ ಕಾಶ್ಮೀರ ಸೇರಿದಂತೆ ಕಣಿವೆ ರಾಜ್ಯದಲ್ಲಿ ಖಾಲಿ ಇರುವ ಪೆÇಲೀಸ್ ಪೇದೆಗಳ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಒಟ್ಟು 5,300 ಪೆÇಲೀಸ್ ಪೇದೆ ಹುದ್ದೆಗಳಿಗೆ ಒಟ್ಟು 1 ಲಕ್ಷ ಅರ್ಜಿಗಳು ಬಂದಿವೆ. ಈ ಪೈಕಿ ದಕ್ಷಿಣ ಕಾಶ್ಮೀರದಿಂದ ಸುಮಾರು 1,400 ಯುವಕ, ಯುವತಿಯರು ದೈಹಿಕ ಸಾಮಥ್ರ್ಯ ಪರೀಕ್ಷೆಗೆ ಭಾನುವಾರ ಹಾಜರಾಗಿದ್ದಾರೆ. ಪೆÇಲೀಸ್ ನೇಮಕಾತಿಗೆ ಯುವಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜ್ಯದಲ್ಲಿ ಸಶಸ್ತ್ರ ಪೆÇಲೀಸ್ ಪಡೆ ಸೇರಿದಂತೆ ಒಟ್ಟು 5,300 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಪೆÇಲೀಸ್ ನೇಮಕಾತಿ ಮಂಡಳಿಯ ಅಧ್ಯಕ್ಷ ಸುರಿಂದರ್ ಕುಮಾರ್ ಗುಪ್ತಾ ಅವರು ತಿಳಿಸಿದ್ದಾರೆ.

ಐಎಎಸ್ ಗಂಗಾರಾಮ್ ಬಡೇರಿಯಾ ಬಂಧನ

ಬೆಂಗಳೂರು, ಮೇ 15 : ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಎಎಸ್ ಅಧಿಕಾರಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ಅವರನ್ನು ಸೋಮವಾರ ಬಂಧಿಸಲಾಗಿದೆ. ಜಂತಕಲ್ ಮೈನಿಂಗ್ ಕಂಪೆನಿಯ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಇಂದು ವಿಶೇಷ ತನಿಖಾ ತಂಡ(ಎಸ್‍ಐಟಿ)ದ ಮುಂದೆ ವಿಚಾರಣೆಗೆ ಹಾಜರಾಗಿದ್ದ ಬಡೇರಿಯಾ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ. ಇತ್ತೀಚಿಗೆ ಸುಪ್ರೀಂ ಕೋರ್ಟ್, ಜಂತಕಲ್ ಮೈನಿಂಗ್ ಕಂಪೆನಿಯ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ವರದಿಯಲ್ಲಿ ಹೆಸರಿಸಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಎಸ್‍ಐಟಿಗೆ ನಿರ್ದೇಶನ ನೀಡಿತ್ತು. ಸಂತೋಷ್ ಹೆಗ್ಡೆ ಅವರ ವರದಿಯಲ್ಲಿ ಗಂಗಾರಾಮ್ ಬಡೇರಿಯಾ ಅವರ ಹೆಸರಿದ್ದು, ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಅಕ್ರಮ ಗಣಿಗಾರಿಕೆಯ ಐಎಎಸ್ ಅಧಿಕಾರಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಮುಸ್ಲಿಂ ವಿವಾಹಕ್ಕೆ ಹೊಸ ಕಾನೂನು ರಚನೆ

ನವದೆಹಲಿ, ಮೇ 15: ಸುಪ್ರೀಂ ಕೋರ್ಟ್ ತಲಾಖ್ ಅನ್ನು ರದ್ದುಗೊಳಿಸಿದರೆ ಮುಸ್ಲಿಂ ವಿವಾಹ ಹಾಗೂ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ರಚನೆ ಮಾಡುವದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ಸೋಮವಾರ (ಮೇ.15) ರಂದು ತ್ರಿವಳಿ ತಲಾಖ್ ಬಗೆಗಿನ ವಿಚಾರಣೆಯನ್ನು ಮುಂದುವರೆಸಿದ ಸುಪ್ರೀಂ ಕೋರ್ಟ್‍ನ ಪಂಚಸದಸ್ಯ ಪೀಠಕ್ಕೆ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಹೇಳಿಕೆ ನೀಡಿದ್ದು, ಮುಸ್ಲಿಮ್ ಸಮುದಾಯಲ್ಲಿನ ವಿವಾಹ ಹಾಗೂ ವಿಚ್ಛೇದನವನ್ನು ನಿಯಂತ್ರಿಸಲು ಕಾನೂನು ರೂಪಿಸುವದಾಗಿ ತಿಳಿಸಿದೆ. ಒಂದು ವೇಳೆ ತಲಾಖ್ ಪದ್ಧತಿಯನ್ನು ರದ್ದುಗೊಳಿಸಿದರೆ ಮುಸ್ಲಿಮರು ವಿಚ್ಛೇದನ ಪಡೆಯುವದಕ್ಕೆ ಏನು ಮಾಡಬೇಕು, ಪರ್ಯಾಯ ಮಾರ್ಗಗಳೇನು ಎಂದು ಸುಪ್ರೀಂ ಕೋರ್ಟ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರೋಹಟ್ಗಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸಿದರೆ ಮುಸ್ಲಿಮರ ವಿವಾಹ ಹಾಗೂ ವಿಚ್ಛೇದನಕ್ಕೆ ಹೊಸ ಕಾನೂನು ಜಾರಿಗೆ ತರವದಾಗಿ ಹೇಳಿದ್ದಾರೆ.

ಪತ್ರಕರ್ತ ನಾಗೇಶ್ ಹೆಗಡೆಗೆ ಟಿಯೆಸ್ಸಾರ್ ಪ್ರಶಸ್ತಿ

ಬೆಂಗಳೂರು, ಮೇ 15 : 2016ರ ಸಾಲಿನ ‘ಟಿಯೆಸ್ಸಾರ್ ಸ್ಮಾರಕ ಪ್ರಶಸ್ತಿ’ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಅವರಿಗೆ ಹಾಗೂ ‘ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ’ ಗಂಗಾಧರ ಹಿರೇಗುತ್ತಿ ಅವರಿಗೆ ಸಂದಿದೆ. ನಾಗೇಶ್ ಹೆಗಡೆ ಅವರು ‘ಪ್ರಜಾವಾಣಿ’ಯಲ್ಲಿ ಸಹಾಯಕ ಸಂಪಾದಕರಾಗಿದ್ದರು. ಗಂಗಾಧರ ಹಿರೇಗುತ್ತಿ ಅವರು ಕಾರವಾರದ ‘ಕರಾವಳಿ ಮುಂಜಾವು’ ಪತ್ರಿಕೆಯ ಸಂಪಾದಕರಾಗಿದ್ದಾರೆ. ನಿವೃತ್ತ ನ್ಯಾಯಾಧೀಶರಾದ ಇಂದ್ರಕಲಾ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯು ಈ ಹಿರಿಯ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.