ಸೋಮವಾರಪೇಟೆ, ಮೇ 15: ವಿವಾಹಿತ ಮಹಿಳೆಯೋರ್ವರು ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲೂಕಿನ ಜಂಬೂರು ಗ್ರಾಮ ನಿವಾಸಿ ಮಹೇಶ್ ಅವರ ತಾಯಿ ಗಂಗು(46) ಎಂಬವರು ಕಳೆದ ತಾ. 12ರಂದು ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಹೊರ ಹೋದವರು ನಂತರ ಮನೆಗೆ ವಾಪಸ್ ಆಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಾಣೆಯಾಗಿರುವ ಗಂಗು ಅವರು ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, 5 ಅಡಿ ಎತ್ತರವಿದ್ದಾರೆ. ನೀಲಿ ಬಣ್ಣದ ಸೀರೆ ಧರಿಸಿದ್ದು, ಕನ್ನಡ ಭಾಷೆ ಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ಲಭಿಸಿದಲ್ಲಿ ಸೋಮವಾರಪೇಟೆ ಪೊಲೀಸ್ ಠಾಣಾ ದೂರವಾಗಿ 08276 282040 ಸಂಖ್ಯೆಗೆ ತಿಳಿಸುವಂತೆ ಠಾಣಾಧಿಕಾರಿ ಶಿವಣ್ಣ ಅವರು ಮನವಿ ಮಾಡಿದ್ದಾರೆ.