ಮಡಿಕೇರಿ, ಮೇ. 16 : ಕೊಡಗು ಜಿಲ್ಲಾ ಪಂಚಾಯತ್ ಕೈಗಾರಿಕಾ ವಿಭಾಗದ ಮೂಲಕ ತಾ. 22 ರಂದು ಭಾಗಮಂಡಲದಲ್ಲಿರುವ ಗೌಡ ಸಮಾಜದ ಸಭಾಂಗಣದಲ್ಲಿ ಒಂದು ದಿನದ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಜಾಗೃತಿ ಶಿಬಿರ ಏರ್ಪಡಿಸಲಾಗಿದೆ. ಹಾಲಿ ಕಾರ್ಯನಿರ್ವಹಿಸುತ್ತಿರುವ ಉದ್ದಿಮೆದಾರರು, ಸ್ವ-ಸಹಾಯ ಸಂಘದವರು ಸ್ತ್ರೀ-ಶಕ್ತಿ ಸಂಘದವರು ಉತ್ಪಾದಿಸುವ ಉತ್ಪನ್ನಗಳನ್ನು ಹಾಗೂ ಸೇವಾ ಚಟುವಟಿಕೆಗಳ ಬಗ್ಗೆ ಮಾಹಿತಿ ಉಚಿತವಾಗಿ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಸಹ ಮಾಡಿದೆ. ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರು (ಖಾಗ್ರಾ) ಕೈಗಾರಿಕಾ ವಿಭಾಗ, ಕೊಡಗು ಜಿಲ್ಲಾ ಪಂಚಾಯತ್, ಮಡಿಕೇರಿ ಇವರನ್ನು ಹಾಗೂ ದೂರವಾಣಿ: 08272-228431, 08272-228113, ಮೊ: 9739030598 ನ್ನು ಸಂಪರ್ಕಿಸಬಹುದು