ಮಡಿಕೇರಿ ಮೇ 18 : ಆದಿಪರಾಶಕ್ತಿ ಸೇವಾ ಟ್ರಸ್ಟ್ ವತಿಯಿಂದ ತಾ. 22ರಿಂದ 25ರವರೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾ ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‍ನ ಪದಾಧಿಕಾರಿಗಳು ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿದರು. ಜನಪದೀಯ ಸ್ಪರ್ಶವನ್ನು ಹೊಂದಿರುವ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿರುವ ಈ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ವೈವಿಧ್ಯಮಯ ಕ್ರೀಡೆಗಳನ್ನು ಆಯೋಜಿಸಿರುವದಾಗಿ ತಿಳಿಸಿದರು.

ತಾ. 22ರಂದು ಹುಲ್ಲು ಕಂತೆ ಕಟ್ಟುವದು, ಒಂಟಿಕಾಲಿನ ಓಟ, ಗೋಣಿ ಚೀಲದ ಓಟ, ಕಪ್ಪೆ ಓಟದ ಸ್ಪರ್ಧೆ ನಡೆಯಲಿದೆ. ತಾ. 23ರಂದು ತೆಂಗಿನಕಾಯಿಗೆ ಕಲ್ಲು ಹೊಡೆಯುವದು, ಮೂರು ಕಾಲಿನ ಓಟ, ಬಾತುಕೋಳಿ ನಡಿಗೆ, ಕಣ್ಣಿಗೆ ಬಟ್ಟೆ ಕಟ್ಟಿ ಓಡುವದು, ಕೋಳಿ ಕಾಳಗ ಮತ್ತಿತರ ಪಂದ್ಯಗಳು ನಡೆಯಲಿವೆ. ತಾ. 24 ರಂದು ತೆಂಗಿನಕಾಯಿಗೆ ಗುಂಡು ಹೊಡೆಯುವದು, ಭಾರದ ಗುಂಡು ಎಸೆತ, ಹಗ್ಗ ಜಗ್ಗಾಟ, ಭಾರದ ಮೂಟೆ ಹೊರುವದು, ಹೆಂಡತಿಯನ್ನು ಗಂಡ ಹೊತ್ತುಕೊಂಡು ಓಡುವದು, ಷಟಲ್ ರಿಲೇ ಮುಂತಾದ ಪಂದ್ಯಾವಳಿಗಳು ನಡೆಯಲಿವೆ ಎಂದು ಪದಾಧಿಕಾರಿಗಳು ಮಾಹಿತಿ ನೀಡಿದರು.

ಇದೇ ಸಂದರ್ಭ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯಲಿದೆ. ಕ್ರೀಡಾಕೂಟದಲ್ಲಿ ಗ್ರಾಮೀಣ ಭಾಗದ ಹೆಚ್ಚಿನ ಸಂಖ್ಯೆಯ ಕ್ರೀಡಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಅಧ್ಯಕ್ಷ ನಾಪಂಡ ಪೂವಯ್ಯ, ಕ್ರೀಡಾಕೂಟದ ಸಂಚಾಲಕÀ ಕೆ.ಕಿಟ್ಟು ಕಾಳಪ್ಪ, ಸಲಹೆಗಾರÀ ಹರೀಶ್ ಸರಳಾಯ, ಪ್ರಮುಖರಾದ ನಾಪಂಡ ಕಾವೇರಪ್ಪ, ರಘು ಕಾರ್ಯಪ್ಪ ಹಾಗೂ ನಾಗಯ್ಯ ಶೆಟ್ಟಿ ಉಪಸ್ಥಿತರಿದ್ದರು.