ವೀರಾಜಪೇಟೆ, ಮೇ 18: ಜಿಲ್ಲಾ ಬಂಟರ ಸಂಘದ ಸಹಯೋಗದಲ್ಲಿ ಸಮುದಾಯದ ಒಗ್ಗಟ್ಟು ಹಾಗೂ ಸಾಮರಸ್ಯವನ್ನು ವೃದ್ಧಿಮಾಡಲು ತಾ. 20 ಹಾಗೂ 21 ರಂದು ಮೂರ್ನಾಡು ಕಾಲೇಜು ಮೈದಾನದಲ್ಲಿ ಮೂರ್ನಾಡು ಹೋಬಳಿ ಘಟಕದ ವತಿಯಿಂದ ಬಂಟರ ಸ್ವಜಾತಿಗಾಗಿ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಹಾಗೂ ವಿವಿಧ ರೀತಿಯ ಕ್ರೀಡಾಕೂಟಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಕುಶನ್ ರೈ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಶನ್ ರೈ ಅವರು ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು 24 ತಂಡಗಳು ಭಾಗವಹಿಸಲಿದ್ದು, ವಿಜೇತ ತಂಡಗಳಿಗೆ ನಗದು ಹಾಗೂ ಟ್ರೋಫಿಗಳನ್ನು ವಿತರಿಸಲಾಗುವದು. ಕ್ರಿಕೆಟ್ ಪಂದ್ಯಾಟವನ್ನು ಮಡಿಕೇರಿಯ ಉದ್ಯಮಿ ಬಿ.ಡಿ. ಜಗದೀಶ್ ರೈ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮೂರ್ನಾಡು ಬಂಟರ ಸಂಘದ ಅಧ್ಯಕ್ಷ ಬಿ.ಬಿ ಗಿರೀಶ್ ವಹಿಸಲಿರುವರು. ಸಮಾರೋಪ ಸಮಾರಂಭ ತಾ. 21 ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಅಧ್ಯಕ್ಷತೆಯನ್ನು ಜಿಲ್ಲಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ವಕೀಲ ಬಿ. ರತ್ನಾಕರ ಶೆಟ್ಟಿ ವಹಿಸಲಿದ್ದಾರೆ. ಬಂಟರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಿ.ಡಿ. ನಾರಾಯಣ್ ರೈ ಅಂತಿಮ ಪಂದ್ಯದ ಉದ್ಘಾಟನೆ ನಡೆಸಲಿದ್ದಾರೆ. ತಾಲೂಕು, ಹೋಬಳಿ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿರುವರು.

ಸಂಘಟನೆಯ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಸಿ. ಶಭರೀಶ್ ಮತನಾಡಿ ಮಹಿಳೆಯರು ಹಾಗೂ ಪರುಷರಿಗೆ ಹಗ್ಗಜಗ್ಗಾಟ, ಮಹಿಳೆಯರಿಗೆ ಥ್ರೋಬಾಲ್ ಸೇರಿದಂತೆ ವಿವಿಧ ಕ್ರೀಡಾಕೂಟಗಳು ನಡೆಯಲಿವೆ.

(ಮೊದಲ ಪುಟದಿಂದ) ಇದೇ ಸಂದÀರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿದ ಹಿರಿಯ ಸಾಧಕರಾದ ಸುಂಟಿಕೊಪ್ಪದ ಕೃಷಿಕ ಡಿ.ಜೆ ಮಂಜುನಾಥ ರೈ, ಸಿದ್ದಾಪುರದ ದೇವಿ ನರ್ಸರಿ ಬಿ.ಎಸ್ ವೆಂಕಪ್ಪ ರೈ, ವೀರಾಜಪೇಟೆ ಗಾಂಧಿನಗರದ ರಾಮಣ್ಣ ಶೆಟ್ಟಿ, ಗೋಣಿಕೊಪ್ಪದ ಆರ್ ಬಾಲಕೃಷ್ಣ ರೈ, ಮೂರ್ನಾಡುವಿನ ಕರಿಯಪ್ಪ ರೈ, ಭಾಗಮಂಡಲದ ಭಾಸ್ಕರ್ ಶೆಟ್ಟಿ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಗುವದು ಎಂದು ಹೇಳಿದರು.

ಗೋಷ್ಠಿಯಲ್ಲಿ ಕೋಶಾಧಿಕಾರಿ ಜಯರಾಂ ರೈ, ಮೂರ್ನಾಡು ಮಹಿಳಾ ಘಟಕದ ಅಧ್ಯಕ್ಷೆ ವಾಣಿ ಶಬರೀಶ್, ಮಡಿಕೇರಿ ತಾಲೂಕು ಕಾರ್ಯದರ್ಶಿ ರುಕ್ಮಿಣಿ ರೈ ಉಪಸ್ಥಿತರಿದ್ದರು.