ಮಡಿಕೇರಿ ಮೇ 18 : ಕೊಡಗು ಜಿಲ್ಲಾ ಮರಾಠ, ಮರಾಠಿ ಸಮಾಜ ಸೇವಾ ಸಂಘದ ವತಿಯಿಂದ 21ನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ 4ನೇ ವರ್ಷದ ಕ್ರೀಡಾಕೂಟ ತಾ. 27 ಮತ್ತು 28ರಂದು ಮೂರ್ನಾಡು ವಿದ್ಯಾಸಂಸ್ಥೆಯ ಮೈದಾನದಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ಎಂ.ಟಿ.ದೇವಪ್ಪ, ಮಹಾಸಭೆ ಹಾಗೂ ಜಿಲ್ಲಾ ಅಂಬಾಭವಾನಿ ಯುವಕ, ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಕ್ರೀಡಾಕೂಟದ ಕುರಿತು ಮಾಹಿತಿ ನೀಡಿದರು. ತಾ. 27ರಂದು 4ನೇ ವರ್ಷದ ಕ್ರೀಡೋತ್ಸವ ನಡೆಯಲಿದ್ದು, ಸಭಾ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಉದ್ಘಾಟಿಸಲಿದ್ದಾರೆ. ಕ್ರೀಡಾಕೂಟಕ್ಕೆ ರಾಷ್ಟ್ರಮಟ್ಟದ ಬಾಕ್ಸಿಂಗ್ ಕ್ರೀಡಾಪಟು ಎಂ.ಇ. ನಾರಾಯಣ ಚಾಲನೆ ನೀಡಲಿದ್ದಾರೆ. ಪುರುಷರಿಗಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ಹಾಗೂ ಮಹಿಳೆಯರಿಗಾಗಿ ಥ್ರೋಬಾಲ್ ನಡೆಯಲಿದೆ. ಕ್ರಿಕೆಟ್ ಪಂದ್ಯಾಟ ನಾಕೌಟ್ ನಿಯಮಕ್ಕೆ ಒಳಪಟ್ಟಿದ್ದು, ಹಗ್ಗಜಗ್ಗಾಟ ಸ್ಪರ್ಧೆಯನ್ನು ಕೂಡಾ ಆಯೋಜಿಸಲಾಗಿದೆ. ಇದರೊಂದಿಗೆ ಇತರ ವೈವಿಧ್ಯಮಯ ಮನೋರಂಜ ನಾತ್ಮಕ ಕ್ರೀಡಾಕೂಟಗಳು ನಡೆಯಲಿವೆ.

ತಾ. 28 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಮಹಾಸಭೆ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಭಾರತೀಯ ಅನಿಲ ಪ್ರಾಧಿಕಾರದ

(ಮೊದಲ ಪುಟದಿಂದ) ಪ್ರಧಾನ ವ್ಯವಸ್ಥಾಪಕ ಎಸ್. ವಿಜಯಾನಂದ ಉದ್ಘಾಟಿಸಲಿದ್ದಾರೆ. ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಎಂ.ಟಿ. ಮೋನಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗುವದೆಂದು ಎಂ.ಟಿ.ದೇವಪ್ಪ ತಿಳಿಸಿದರು.

ಮುಂದಿನ ದಿನಗಳಲ್ಲಿ ಸಂಘದ ಮೂಲಕ ತಾಳತ್ತಮನೆಯಲ್ಲಿ ಕಲ್ಯಾಣ ಮಂಟಪ ಅಥವಾ ಸಭಾಭವನ ನಿರ್ಮಿಸಲು ನಿರ್ಧರಿಸಲಾಗಿದೆ. ಮಹಿಳಾ ಸಂಘಟನೆ ಹಾಗೂ ಯುವವೇದಿಕೆ ಮೂಲಕ ಸಂಘವನ್ನು ಬಲಿಷ್ಠಗೊಳಿಸಲಾಗುತ್ತಿದೆÉ ಎಂದರು.

ದೃಢೀಕರಣದಲ್ಲಿ ಗೊಂದಲ : ಸಂಘ ನಡೆಸಿದ ಜನಗಣತಿಯ ಆಧಾರದಲ್ಲಿ ಜಿಲ್ಲೆಯಲ್ಲಿ ಸುಮಾರು 5 ಸಾವಿರ ಮಂದಿ ಮರಾಠ, ಮರಾಠಿಗರು ಇದ್ದಾರೆ ಎಂದು ತಿಳಿದು ಬಂದಿದೆ. ಜಾತಿ ದೃಢೀಕರಣ ಪತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಾಠಿ ಎಂದು ನಮೂದಿಸುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಮರಾಠ ಎಂದು ನಮೂದಿಸಬೇಕಾಗುತ್ತದೆ. ಎರಡು ಜಿಲ್ಲೆಗಳಲ್ಲಿ ವಿಭಿನ್ನ ನಿಯಮ ಗಳಿರುವದರಿಂದ ಗೊಂದಲವು ಸೃಷ್ಟಿಯಾಗಿದೆ ಎಂದು ದೇವಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೀರಾಜಪೇಟೆ ಸಂಘಟನಾ ಕಾರ್ಯದರ್ಶಿ ಎಂ.ಎಂ .ಪರಮೇಶ್ವರ, ಮಾಜಿ ಜಿಲ್ಲಾಧ್ಯಕ್ಷ ಚನಿಯಪ್ಪ, ಯುವ ಕಾರ್ಯದರ್ಶಿ ತೇಜಸ್ವಿ ಹಾಗೂ ಖಜಾಂಚಿ ಎಂ.ಬಿ. ಸಂಪತ್‍ಕುಮಾರ್ ಉಪಸ್ಥಿತರಿದ್ದರು.