ವೀರಾಜಪೇಟೆ, ಮೇ 18: ‘ತಾಲೂಕು ಕೆರೆ ಸಂಜೀವಿನಿ ಯೋಜನೆಯ 1ರಲಿ’್ಲ ಕೆರೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರ ವೀರಾಜಪೇಟೆ ತಾಲೂಕಿಗೆ ಬರಪೀಡಿತ ಯೋಜನೆಯಡಿಯಲ್ಲಿ 9 ಕೆರೆಗಳ ಅಭಿವೃದ್ಧಿಗಾಗಿ ರೂ. 25 ಲಕ್ಷ ಮಂಜೂರು ಮಾಡಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಮಾಡು ದೇವರ ಕೆರೆ ಹೂಳೆತ್ತುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಬೋಪಯ್ಯ ಅವರು, ಜಿಲ್ಲಾ ಪಂಚಾಯತ್‍ರಾಜ್ ಇಂಜಿನಿಯರಿಂಗ್ ವಿಭಾಗದಿಂದ ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮ ಪಂಚಾಯಿತಿ ಗ್ರಾಮಸ್ಥರ ಕೆರೆ, ಕಾರ್ಮಾಡು ದೇವರ ಕೆರೆ, ಹಾಗೂ ಕಕ್ಕಪಾಡು ಕೆರೆ, ಕಣ್ಣಂಗಾಲ ಗ್ರಾ.ಪಂ. ವ್ಯಾಪ್ತಿಯ ಆಸ್ಪತ್ರೆ ಹಿಂಬಾಗ, ಕಿರುಗೂರು ಗ್ರಾ.ಪಂ.ವ್ಯಾಪ್ತಿಯ ಮಹಾದೇವರ ಕೆರೆ, ಮತ್ತು ಪೈಸಾರಿ ಕೆರೆ, ಬಿಳುಗುಂದದ ದೇವರ ಕೆರೆ, ಹಾಗೂ ಸಾರ್ವಜನಿಕರ ಕೆರೆ, ಹೊಸೂರು ಗ್ರಾ. ಪಂ.ಯ ಗೊಟ್ಟಡ ಚಾಮುಂಡಿ ಕೆರೆಗಳನ್ನು ಅಭಿವೃದ್ಧಿಗೊಳಿಸಲು ಈ ಅನುದಾನವನ್ನು ಬಳಸಲಾಗುವದು. ವೀರಾಜಪೇಟೆ ತಾಲೂಕಿನ ಇತರ ಗ್ರಾಮಗಳಲ್ಲಿಯೂ ಕೆರೆಗಳ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿ ಕಾರ್ಯಗತ ಮಾಡ ಲಾಗುವದು. ಹೆಚ್ಚುವರಿ ಕಾಮಗಾರಿಗಳಿಗಾಗಿ ಹಂತ ಹಂತವಾಗಿ ಸರಕಾರದಿಂದ ಅನುದಾನ ಬರಲಿದೆ ಎಂದು ಬೋಪಯ್ಯ ಹೇಳಿದರು.

ಈ ಸಂದರ್ಭ ಜಿಲ್ಲಾ ಪಂಚಾಯತ್‍ನ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ, ಜಿ.ಪಂ.ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಗೋಣಿಕೊಪ್ಪಲು ಆರ್.ಎಂ.ಸಿ. ಅಧ್ಯಕ್ಷ ಸುವಿನ್ ಗಣಪತಿ, ಬಿ.ಜೆ.ಪಿ. ತಾಲೂಕು ಅಧ್ಯಕ್ಷ ಅರುಣ್ ಭೀಮಯ್ಯ, ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಪಿ.ರಘುನಾಣಯ್ಯ, ಕಾರ್ಯದರ್ಶಿ ಕಿಲನ್ ಗಣಪತಿ, ಕಾರ್ಮಾಡು ಸ್ಥಾನೀಯ ಸಮಿತಿ ಅಧ್ಯಕ್ಷ ಮಾಚಿಮಂಡ ವಸಂತ್, ರೈತ ಸಂಘದ ಅಧ್ಯಕ್ಷ ಕೆ.ಯು.ಗಣಪತಿ, ಕಾರ್ಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋನಾ ಬೀಮಯ್ಯ, ಉಪಾಧ್ಯಕೆÀ್ಷ ಬಿ.ಸುನೀತ, ಸದಸ್ಯ ಮುಕ್ಕಾಟಿರ ಸಂತೋಷ್, ಕೆ.ನಿರು ನಾಣಯ್ಯ, ಕಾವಡಿಚಂಡ ನಾಚಪ್ಪ, ಹಾಗೂ ಪ್ರಕಾಶ್, ಸುಬ್ರಮಣಿ, ಮಧು ದೇವಯ್ಯ, ಮುಂತಾದವರು ಇದ್ದರು.