ಸಿದ್ದಾಪುರ, ಮೆ 19: ಯುನೈಟೆಡ್ ಮುಸ್ಲಿಂ ಅಸೋಸಿಯೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಜೀವನೋಪಾಯದ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ಕಾರ್ಯಾಗಾರ ನಡೆಯಿತು.

ಇಲ್ಲಿನ ಇಕ್ರಾ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರಿನ ಕೆರಿಯರ್ ಗೈಡೆನ್ಸ್ ಮತ್ತು ಇನ್ಫಾರ್ಮೇಶನ್ ಸೆಂಟರ್ ಮುಖ್ಯಸ್ಥ ಯು.ಎಚ್ ಉಮ್ಮರ್ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯಗಳನ್ನು ಬೋಧಿಸುವ ಶಾಲೆಗಳು ಉತ್ತಮವಾಗಲಿವೆ ಎಂದು ಉಮ್ಮರ್ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸಂದರ್ಭ ಸಿದ್ದಾಪುರದ ಯುನೈಟೆಡ್ ಮುಸ್ಲಿಂ ಅಸೋಸಿಯೇಶನ್ ಅಧ್ಯಕ್ಷ ಪೋಕರ್ ಹಾಜಿ, ಮುಖಂಡರಾದ ಕೆ.ಯು ಅಬ್ದುಲ್ ಮಜೀದ್, ವಿ.ಕೆ ಬಶೀರ್, ಎ.ಎಸ್ ಮುಸ್ತಫಾ, ಅಸ್ಕರ್ ಮತ್ತು ಇತರರು ಇದ್ದರು.