ಕೊಡ್ಲಿಪೇಟೆ, ಮೇ 19: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡ ಅರ್ಹ ಫಲಾನುಭವಿಗಳಿಗೆ ಪಂಚಾಯಿತಿಯ ಶೇ. 25ರ ಅನುದಾನದಲ್ಲಿ ಗ್ಯಾಸ್ ಸ್ಟೌವ್ ಮತ್ತು ಸಿಲಿಂಡರ್‍ಗಳನ್ನು ಪಂಚಾಯಿತಿ ಸಭಾಂಗಣದಲ್ಲಿ ನೀಡಲಾಯಿತು.ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ಅನಸೂಯ ಹೇಮರಾಜ್, ವಿಜಯ್, ಹೇಮಲತ, ದಿವಾಕರ, ಹೊನ್ನಮ್ಮ, ವೀಣಾ, ಗೀತಾ, ರೋಹಿಣಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧನಂಜಯ್, ಪಂಚಾಯಿತಿ ಲೆಕ್ಕಾಧಿಕಾರಿ ಶರಣಪ್ಪ ಶನದಿ ಮುಂತಾದವರಿದ್ದರು.