ಕುಶಾಲನಗರ, ಮೇ 19: ಕುಶಾಲನಗರದ ಬೈಚನಹಳ್ಳಿಯ ಶ್ರೀ ಆದಿಶಕ್ತಿ ಅಂತರಘಟ್ಟೆ ಅಮ್ಮನ 2ನೇ ವಾರ್ಷಿಕೋತ್ಸವ ಹಾಗೂ ಶ್ರೀ ಭಗೀರಥ ಮಹರ್ಷಿಯವರ ಜಯಂತಿ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.
ಪೂಜಾ ಕಾರ್ಯಕ್ರಮದ ಅಂಗವಾಗಿ ದೇವಿಗೆ ಪಂಚಾಮೃತ ಅಭಿಷೇಕ, ಗಣಪತಿ ಹೋಮ, ದುರ್ಗಾ ಹೋಮ, ಮಹಾಪೂಜೆ, ಮಂಗಳಾರತಿ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು. ಸುತ್ತಮುತ್ತಲಿನ ಭಕ್ತಾದಿಗಳು ಪಾಲ್ಗೊಂಡಿದ್ದರು. ಅರ್ಚಕರಾದ ಪರಮೇಶ್ವರ ಭಟ್ ಪೂಜಾ ವಿಧಿ ನೆರವೇರಿಸಿದರು.
ಭಗೀರಥ ಮಹರ್ಷಿ ಜಯಂತಿ ಅಂಗವಾಗಿ ಭಾವಚಿತ್ರ ಅನಾವರಣ ಗೊಳಿಸಿ ಪುಷ್ಪಾರ್ಚನೆ ನಡೆಯಿತು. ವಾರ್ಷಿಕೋತ್ಸವ ಹಿನ್ನೆಲೆ ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಫಲಪುಷ್ಪ-ತಾಂಬೂಲದೊಂದಿಗೆ ಆಗಮಿಸಿ ಸಾಮೂಹಿಕ ಪೂಜೆ ಸಲ್ಲಿಸಿದರು.
ಒಕ್ಕೂಟದ ಅಧ್ಯಕ್ಷ ಎಂ.ಕೆ. ದಿನೇಶ್, ಗೌರವಾಧ್ಯಕ್ಷ ಕೆ.ಆರ್. ಶಿವಾನಂದನ್, ಉಪಾಧ್ಯಕ್ಷ ಕೆ. ರಾಮದಾಸ್, ಪ್ರಧಾನ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್, ಖಜಾಂಚಿ ಎಸ್.ಕೆ. ಶ್ರೀನಿವಾಸರಾವ್, ಗೌರವ ಸಲಹೆಗಾರರಾದ ವಿ.ಎನ್. ವಸಂತಕುಮಾರ್, ಡಿ.ವಿ. ರಾಜೇಶ್, ವಿವಿಧ ದೇವಾಲಯ ಪ್ರತಿನಿಧಿಗಳಾದ ವಿ.ಪಿ. ನಾಗೇಶ್, ಎಸ್.ಎನ್. ಶ್ಯಾಮ ಸುಂದರ, ಹೆಚ್.ಎನ್. ರಾಮಚಂದ್ರ, ಡಿ.ಆರ್. ಸೋಮಶೇಖರ್, ಆದಿಶಕ್ತಿ ಅಂತರ ಘಟ್ಟೆಯಮ್ಮ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಗೋವಿಂದರಾಜ್, ಕಾರ್ಯದರ್ಶಿ ಜಗದೀಶ್, ಖಜಾಂಚಿ ಗಜೇಂದ್ರ, ಬಿ.ಎಸ್. ಪರಮೇಶ್ ಮತ್ತು ಪದಾಧಿಕಾರಿಗಳು ಇದ್ದರು.