ಮಡಿಕೇರಿ, ಮೇ 19 : ಡಾ.ಬಿ.ಆರ್.ಅಂಬೇಡ್ಕರ್ ಅವರ 125 ನೇ ಜನ್ಮದಿನ ಹಾಗೂ ಬುದ್ಧ ಜಯಂತಿ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ನಗರದ ಶ್ರೀಶಕ್ತಿ ವ್ರದ್ಧಾಶ್ರಮದಲ್ಲಿ ತಾ. 20 ರಂದು (ಇಂದು) ಸಂಜೆ 4 ಗಂಟೆಗೆ ಸಂಧ್ಯಾಕಾಲದ ಬಂಧುಗಳಿಗೆ ಉಚಿತವಾಗಿ ವಸ್ತ್ರಗಳನ್ನು ವಿತರಿಸಲಾಗುವದೆಂದು ಸಮಿತಿಯ ಜಿಲ್ಲಾ ಸಂಚಾಲಕÀ ಹೆಚ್.ಎಲ್. ದಿವಾಕರ್ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಆರ್ಆರ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಪ್ರಜಾಸತ್ಯ ದಿನಪತ್ರಿಕೆಯ ಸಂಪಾದಕ ಬಿ.ಸಿ.ನವೀನ್ ಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸೌಮ್ಯ, ದಾನಿಗಳು ಹಾಗೂ ಗಾಳಿಬೀಡಿನ ಬೆಳೆಗಾರ ಟಿ.ಆರ್. ವಾಸುದೇವ್ ಪಾಲ್ಗೊಳ್ಳಲಿದ್ದಾರೆ.