ವೀರಾಜಪೇಟೆ, ಮೇ 19: ಇಂದಿನ ಮಕ್ಕಳಿಗೆ ಪರಿಸರದೊಂದಿಗೆ ಒಡನಾಟವಿಲ್ಲದ್ದರಿಂದ ಅವರಿಗೆ ಪರಿಸರದ ಮಹತ್ವ ಮತ್ತು ಅರಿವು ಆಗದು. ಬಾಲ್ಯದ ದಿನಗಳಿಂದಲೇ ಪರಿಸರದೊಂದಿಗೆ ಬೆರೆತು ಬದುಕಿದವರು ಇಂದು ಮಕ್ಕಳಿಗೆ ಪರಿಸರದ ಮಹತ್ವ ಮತ್ತು ಒಡನಾಟದ ಅರಿವು ಮೂಡಿಸಿದರೆ ಮಾತ್ರ ಪರಿಸರ ಉಳಿಯಲು ಸಾಧ್ಯ ಎಂದು ಪೊನ್ನಂಪೇಟೆಯ ನಿವೃತ್ತ ಶಿಕ್ಷಕಿ ಪ್ರೇಮಲತಾ ಅಪ್ಪಯ್ಯ ಹೇಳಿದರು.

ವೀರಾಜಪೇಟೆ ಸರಕಾರಿ ಜೂನಿಯರ್ ಕಾಲೇಜು ಮತ್ತು ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಿದ್ದ ಹಳೆ ವಿದ್ಯಾರ್ಥಿಗಳ “ಸ್ನೇಹ ಮಿಲನ”À ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳು ಓದಿನೊಂದಿಗೆ ಪಠ್ಯೇತರ ಚಟುವಟಕೆಯಲ್ಲಿ ತೊಡಗಿಸಿಕೊಂಡರೆ ಮನೋಸ್ಥೈರ್ಯ ಬೆಳೆಸಿಕೊಳ್ಳಲು ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಬೆಂಗಳೂರು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ವಿ.ಜಿ. ತಿಮ್ಮಯ್ಯ ಮಾತನಾಡಿ, ಈಗಿನ ವಿದ್ಯಾರ್ಥಿಗಳು ಬುದ್ದಿವಂತಿಕೆಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಬದಕು ರೂಪಿಸಿಕೊಳ್ಳಬೇಕು ಎಂದರು. ಅತಿಥಿಯಾಗಿ ಭಾಗವಹಿಸಿದ್ದ ನಿವೃತ ಡಿ.ಸಿ.ಪಿ. ಬಿ.ಎಂ. ನಾಣಯ್ಯ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಜಿ.ಪಂ. ಮಾಜಿ ಸದಸ್ಯ ದೇವ ಲಿಂಗಯ್ಯ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಸಂಚಾಲಕ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಮುಕ್ಕಾಟಿರ ಚೋಟು ಅಪ್ಪಯ್ಯ, ಉಪನ್ಯಾಸಕ ಚಾಲ್ರ್ಸ್ ಡಿಸೋಜ, ಉಪ ಪ್ರಾಂಶುಪಾಲೆ ಕೆ.ಕೆ. ಅಂಬುಜ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಮತ್ತು ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಆರ್. ಮೊಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಕ್ಕಾಟಿರ ಕಸ್ತೂರಿ ಅಪ್ಪಯ್ಯ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.