ನಾಪೋಕ್ಲು, ಮೇ 19: ಕೊಡಗು ಜಿಲ್ಲಾ ಗೊಲ್ಲ ಸಮಾಜದಿಂದ ಪ್ರತಿವರ್ಷ ನಡೆಸುತ್ತಿರುವ ವಾರ್ಷಿಕ ಕ್ರೀಡಾಕೂಟವು ತಾ. 24 ಮತ್ತು 25 ರಂದು ಸ್ಥಳೀಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಜರುಗಲಿದೆ.ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮವು ತಾ. 24 ರಂದು ಜರುಗಲಿದ್ದು, ಅಂದು ಬೆಳಿಗ್ಗೆ ಕ್ರೀಡಾಂಗಣದಲ್ಲಿ 9 ಗಂಟೆಗೆ ಕ್ರೀಡಾ ಸಮಿತಿ ಅಧ್ಯಕ್ಷರಾದ ಮೇಲಾಟಂಡ ವಿದ್ಯಾಕುಶಾಲಪ್ಪ ನೆರವೇರಿಸಲಿದ್ದಾರೆ.
ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಯನ್ನು ಕ್ರೀಡಾಸಮಿತಿ ಉಪಾಧ್ಯಕ್ಷರು ಹಾಗೂ ಅಯ್ಯಂಗೇರಿ ಗ್ರಾಮ ಪಂಚಾಯ್ತಿಯ ಸದಸ್ಯರೂ ಆದ ಕಡವಡಿರ ಸಂತೋಷ್ ನೆರವೇರಿಸಲಿದ್ದಾರೆ.
ಕ್ರೀಡೋತ್ಸವ ಕಾರ್ಯಕ್ರಮವು ತಾ. 25 ರಂದು ಜರುಗಲಿದ್ದು, ಇದರ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಗೊಲ್ಲ
ಗೊಲ್ಲ ಸಮಾಜದ ಕ್ರೀಡಾಕೂಟ
(ಮೊದಲ ಪುಟದಿಂದ) ಸಮಾಜದ ಅಧ್ಯಕ್ಷ ಆಚೀರ ಎಸ್.ನಾಣಯ್ಯ ಮತ್ತು ಉಪಾಧ್ಯಕ್ಷೆ ಪೊನ್ನುಕಂಡ ಚಿತ್ರಾ ಮೊಣ್ಣಪ್ಪ ನೆರವೇರಿಸಲಿದ್ದು, ಈ ಕ್ರೀಡಾಕೂಟದಲ್ಲಿ ಜನಾಂಗದ ಪ್ರಾಥಮಿಕ ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆ ಹಾಗೂ ಜನಾಂಗದ ಪುರುಷ ಮತ್ತು ಮಹಿಳೆಯರಿಗೆ ಅಂತರ , ಗ್ರಾಮಾಂತರ ಮಟ್ಟದ ಹಗ್ಗಜಗ್ಗಾಟ ನಡೆಯಲಿದೆ.
ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಐ.ಎನ್.ಟಿ.ಯು.ಸಿ. ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ನಾಪೋಕ್ಲು ಗ್ರಾ.ಪಂ. ಅಧ್ಯಕ್ಷ ಇಸ್ಮಾಯಿಲ್, ಬೆಳಗಾವಿ ನಗರ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ಬೆಳಗಾವಿ ನಿವೃತ್ತ ನೌಕರರು, ಜಿಲ್ಲಾಧಿಕಾರಿಗಳ ಕಚೇರಿಯ ಉಲ್ಲಾಸ್ ಚಂಗಪ್ಪ , ಗೋವಾ ಮಡಗಾಂವ್ ಸಿ. ರಾಕ್ ಹೊಟೇಲ್‍ನ ಮ್ಯಾನೇಜಿಂಗ್ ಡೈರಕ್ಟರ್ ಪ್ರದೀಪ್ ನಾಯï್ಕ, ನಾಪೋಕ್ಲು ಕ್ಷೇತ್ರದ ತಾಲೂಕು ಪಂಚಾಯಿತಿ ಸದಸ್ಯೆ ಕೋಡಿಯಂಡ ಇಂದಿರಾ ಹರೀಶ್ ಇನ್ನಿತರರು ಉಪಸ್ಥಿತರಿರುವರು.
ಹೆಚ್ಚಿನ ಮಾಹಿತಿಗೆ ಚೊಕೀರ ವಾಸುದೇವ್ ಮಾದಪ್ಪ, ಮೊ. 9483299256, ಪ್ರತೀಶ್ 9482202672 ಅವರನ್ನು ಸಂಪರ್ಕಿಸಬಹುದು.