ಮಡಿಕೇರಿ, ಮೇ 19: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೊಂಪುಳೀರ, ದೇವಜನ, ಪಾಣತ್ತಲೆ, ಬೆಪ್ಪುರನ ತಂಡಗಳು ಪ್ರಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿವೆ.

ಇಂದು ನಡೆದ ಪಂದ್ಯಾವಳಿಯಲ್ಲಿ ಪಾಣತ್ತಲೆ ತಂಡ ದಾಯನ ತಂಡದೆದರು 5-1 ಗೋಲುಗಳ ಅಂತರದಿಂದ ಗೆಲವು ಸಾಧಿಸಿವೆ. ಪಾಣತ್ತಲೆ ಸಹೋದರರಾದ ಜಗ 3 ಗೋಲು ಬಾರಿಸಿದರೆ, ಮಧು 1 ಗೋಲು ಬಾರಿಸಿ ಗಮನ ಸೆಳೆದರು. ದಾಯನ ನಿತಿನ್ 1 ಗೋಲು ಬಾರಿಸಿದರು. ಕೂರನ ತಂಡ ಕುಟ್ಟನ ತಂಡದೆದರು 3-0 ಗೋಲಿನಿಂದ ಜಯ ಗಳಿಸಿತು. ಕೊಂಬನ ದರ್ಶನ್ 3 ಗೋಲು ಬಾರಿಸಿದರು. ಬಳಪದ ತಂಡ ಕೋಳಿಬೈಲು ತಂಡವನ್ನು 2-1 ಗೋಲಿನಿಂದ ಮಣಿಸಿತು. ಬಳಪದ ಯಕ್ಷಿ 2 ಗೋಲು ಬಾರಿಸಿದರೆ, ಕೋಳಿಬೈಲು ಹರ್ಶಿತ್ 1 ಗೋಲು ಗಳಿಸಿದರು.

ಪಾಣತ್ತಲೆ ಹಾಗೂ ಕೆದಂಬಾಡಿ ನಡುವಿನ ಪಂದ್ಯದಲ್ಲಿ ಪಾಣತ್ತಲೆ ತಂಡ 3-0 ಗೋಲಿನಿಂದ ಜಯ ಗಳಿಸಿತು. ಪಾಣತ್ತಲೆ ಜಗ 3 ಗೋಲು ಬಾರಿಸುವದರೊಂದಿಗೆ ಹ್ಯಾಟ್ರಿಕ್ ಸಾಧನೆ ಮಾಡಿದರು. ಕೊಂಬನ ತಂಡ ಬಳಪದ ತಂಡವನ್ನು 2-1 ಗೋಲಿನಿಂದ ಸೋಲಿಸಿತು. ಕೊಂಬನ ಕಿರಣ್ ಹಾಗೂ ದರ್ಶನ್ ಗೋಲು ಗಳಿಸಿದರೆ, ಬಳಪದ ಅಯ್ಯಪ್ಪ 1 ಗೋಲು ಬಾರಿಸಿದರು. ಕೊಂಪುಳಿರ ತಂಡ ಕಾಂಗಿರ ತಂಡವನ್ನು 1-0 ಗೋಲಿನಿಂದ ಮಣಿಸಿತು. ಕೊಂಪುಳಿರ ಜಗ 1 ಗೋಲು ಬಾರಿಸಿದರು. ಬೆಪ್ಪುರನ ತಂಡ ಪಟ್ಟೆಮನೆ ತಂಡವನ್ನು 5-0 ಗೋಲುಗಳ ಅಂತರದಿಂದ ಸೋಲಿಸಿತು. ಬೆಪ್ಪುರನ ಜೀವನ್ 2, ಸುಮಂತ್ 2 ಹಾಗೂ ಭರತ್ 1 ಗೋಲು ಬಾರಿಸಿದರು.

ಮತ್ತೊಂದು ಪಂದ್ಯದಲ್ಲಿ ಪಾಣತ್ತಲೆ ತಂಡ ಕಲ್ಲುಮುಟ್ಲು ತಂಡವನ್ನು 6-0 ಗೋಲುಗಳ ಅಂತರದಿಂದ ಸೋಲಿಸಿತು. ಪಾಣತ್ತಲೆ ಸಹೋದರರಾದ ಜಗ 4 ಹಾಗೂ ಮಧು 2 ಗೋಲು ಬಾರಿಸಿ ತಂಡಕ್ಕೆ ಜಯ ತಂದಿತ್ತರು. ದೇವಜನ ತಂಡ ಕೊಂಬನ ತಂಡವನ್ನು 5-0 ಗೋಲುಗಳಿಂದ ಸೋಲಿಸಿತು. ದೇವಜನ ಪುನಿತ್ 3 ಹಾಗೂ ಕಾರ್ತಿಕ 2 ಗೋಲು ಬಾರಿಸಿದರು.