ಶನಿವಾರಸಂತೆ, ಮೇ 19: ಶನಿವಾರಸಂತೆ ವಿಭಾಗದ ಅರಣ್ಯ ಇಲಾಖೆಯ ವತಿಯಿಂದ ಅರಣ್ಯ ಇಲಾಖೆಯ ತಂಡ ಅರಣ್ಯ ವಲಯಾಧಿಕಾರಿ ಸ್ವಯಂ ಸೇವಕರುಗಳ ತಂಡ, ಗಂಗಾವರ, ಕಟ್ಟೆಪುರ, ಮಾಲಂಬಿ, ಆಲೂರುಸಿದ್ದಾಪುರ, ಕೂಗೂರು, ಅರಣ್ಯ ವಲಯಗಳಲ್ಲಿ ಕಾಡಾನೆಗಳ ಗಣತಿಯ ಕಾರ್ಯ ಆರಂಭಿಸಿದೆ ಎಂದು ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಕೆ. ಕೊಟ್ರೇಶ್ ಮಾಹಿತಿ ನೀಡಿದ್ದಾರೆ. ತಾ. 17 ರಂದು ನಡೆದ ಕಾರ್ಯಾಚರಣೆ ಯಲ್ಲಿ ಅರಣ್ಯದಲ್ಲಿ ಬಿದ್ದಿರುವ ಲದ್ದಿಯನ್ನು ಪರೀಕ್ಷಿಸಿ ಅದರ ಆಧಾರದ ಮೇಲೆ ಆನೆಗಳನ್ನು ಲೆಕ್ಕ ಹಾಕುವ ಕಾರ್ಯ ನಡೆಯಿತು. ಕಾಡಾನೆಗಳು ತಾ. 18 ರಂದು ಕುಡಿಯುವ ನೀರಿಗಾಗಿ ಕೆರೆ ಕುಂಟೆಗಳಿಗೆ ಬರಲಿವೆ ತಿಳಿಯ ಲಾಯಿತು. ಆಲೂರು ಸಿದ್ದಾಪುರ, ಮಾಲಂಬಿ ವ್ಯಾಪ್ತಿಯಲ್ಲಿ ಒಟ್ಟು 9 ಕಾಡಾನೆಗಳಲ್ಲಿ 2 ಮರಿಯಾನೆಗಳು ಇರುವಿಕೆ ದೃಢಪಟ್ಟಿದೆ ಎಂದು ತಿಳಿಸಿದರು.ಕಾರ್ಯಾಚರಣೆಯಲ್ಲಿ ಶನಿವಾರಸಂತೆಯ ನೂತನ ಅರಣ್ಯ ವಲಯಾಧಿಕಾರಿ ಕೆ. ಕೊಟ್ರೇಶ್ , ಕೊಡ್ಲಿಪೇಟೆ, ಶನಿವಾರಸಂತೆ, ಮಾಲಂಬಿ, ಫಾರೆಸ್ಟರುಗಳಾದ ಸುಕ್ಕೂರ್, ಆರ್. ಶ್ರೀನಿವಾಸ್, ಗೋವಿಂದರಾಜ್, ಅರಣ್ಯ ಸಿಬ್ಬಂದಿಗಳಾದ ರಾಮಕೃಷ್ಣ ಶೆಟ್ಟಿ, ಶಿವರಾಜ್, ಪ್ರಕಾಶ್, ವಿಜೇಂದ್ರ ಕುಮಾರ್, ಬಿ. ರುಕ್ಮಯ್ಯ, ವೆಂಕಟೇಶ್, ಕುಮಾರಿ ತನುಜ, ರಮೇಶ್, ಲೋಹಿತ್, ಚಾಲಕರುಗಳಾದ ಹರೀಶ್‍ಕುಮಾರ್ , ಭರತ್ ಪಾಲ್ಗೊಂಡಿದ್ದರು.