ಸುಂಟಿಕೊಪ್ಪ, ಮೇ 19: ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಡಿ.ವಿನೋದ್ ಶಿವಪ್ಪ ಅವರ ತಂದೆ ದಿವಂಗತ ಡಿ.ಶಿವಪ್ಪ ಸ್ಮಾರಕ 22ನೇ ವರ್ಷದ ರಾಜ್ಯ ಮಟ್ಟದ ಪುಟ್ಬಾಲ್ ಪಂದ್ಯಾಟಕ್ಕೆ ಹಾಸನ ಗ್ರಾಹಕರ ವ್ಯಾಜ್ಯ ವೇದಿಕೆಯ ಅಧ್ಯಕ್ಷÀ ಎ.ಲೋಕೇಶ್ ಕುಮಾರ್ ಚೆಂಡನ್ನು ಒದೆಯುವ ಮೂಲಕ ಚಾಲನೆ ನೀಡಿದರು.
ಸುಂಟಿಕೊಪ್ಪ ಸರಕಾರಿ ಮಾದರಿ ಶಾಲಾ ಮೈದಾನದಲ್ಲಿ ಪ್ರತಿವರ್ಷ ಮೇ ತಿಂಗಳಿನಲ್ಲಿ ಪುಟ್ಬಾಲ್ ಪಂದ್ಯಾಟದ ಕಲರವ ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡುತ್ತದೆ. ಈಗಾಗಲೇ ಸೂಪರ್ ಸವೆನ್ಸ್ ಪುಟ್ಟಬಾಲ್ ಪಂದ್ಯಾಟ ತಾ. 12 ರಿಂದ 14 ರವರೆಗೆ ನಡೆದಿದ್ದು, ಇದೀಗ ಬ್ಲೂಬಾಯ್ಸ್ ಕ್ಲಬ್‍ನ ಆಶ್ರಯದಲ್ಲಿ ಡಿ.ಬಸಪ್ಪ ಜ್ಞಾಪಕಾರ್ಥವಾಗಿ 22ನೇ ವರ್ಷದ ಪುಟ್ಭಾಲ್ ಪಂದ್ಯಾಟ ನಡೆಯುತ್ತಿದೆ. 22 ತಂಡಗಳು ಹೆಸರು ನೊಂದಾಯಿಸಿಕೊಂಡಿವೆ ಎಂದು ಬ್ಲೂಬಾಯ್ಸ್ ಕ್ಲಬ್‍ನ ನೂತನ ಅಧ್ಯಕ್ಷ ಬಿ.ಬಿ.ಮೊಣಪ್ಪ ಪೂಜಾರಿ ಹೇಳಿದರು.
ಉದ್ಘಾಟನಾ ಪಂದ್ಯದಲ್ಲಿ ಮುಖ್ಯ ಅತಿಥಿಗಳಾಗಿ ಕಂಬಿಬಾಣೆ ಗ್ರಾ.ಪಂ. ಮಾಜಿ ಅಧ್ಯಕ್ಷ ಡಾ. ಶಶಿಕಾಂತ ರೈ ಧ್ವಜಾರೋಹಣ ನೇರವೇರಿಸಿದರು.
ಸುಂಟಿಕೊಪ್ಪ ಆತಿಥೇಯ ಬ್ಲೂಬಾಯ್ಸ್ ಹಾಗೂ ಪನ್ಯ ಎಫ್.ಸಿ. ತಂಡದ ನಡುವೆ ಪ್ರಥಮ ಪಂದ್ಯಾವಳಿ ನಡೆದು 7-0 ಗೋಲುಗಳಿಂದ ಪನ್ಯ ಎಫ್.ಸಿ. ತಂಡವು ಜಯಗಳಿಸಿತು.
ದ್ವಿತೀಯ ಪಂದ್ಯಾವಳಿಯು ಕೂರ್ಗ್ ಇಲವೆನ್ ಕೊಡಗು ಹಾಗೂ ಚೇತನ ಎಫ್.ಸಿ. ಚೆಟ್ಟಳ್ಳಿ ತಂಡಗಳ ನಡುವೆ ನಡೆದು ಪ್ರಮಾರ್ಧದಲ್ಲಿ 1-0 ಕೂರ್ಗ್ ಇಲವೆನ್ ತಂಡದವರು ಮುನ್ನಡೆ ಕಾಯ್ದುಕೊಂಡರು.
ಈ ಸಂದರ್ಭ ಪಂಚಾಯಿತಿ ಮಾಜಿ ಸದಸ್ಯ ಅಂಬಚ್ಚು, ಬ್ಲೂಬಾಯ್ಸ್ ಯೂತ್ ಕ್ಲಬ್ ಅಧ್ಯಕ್ಷÀ ಮೊಣ್ಣಪ್ಪ ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯ ಟಿ.ವಿ ಪ್ರಸನ್ನ, ಮಾಜಿ ಅಧ್ಯಕ್ಷ ಆಲಿಕುಟ್ಟಿ, ಕಾರ್ಯದರ್ಶಿ ಸೂರ್ಯಕುಮಾರ್, ಸದಸ್ಯರಾದ ಅನಿಲ್, ಬಿ.ಕೆ. ಪ್ರಶಾಂತ್, ಟಿ.ಯು. ಜಾನ್, ಹಮೀದ್ ಮತ್ತಿತರರು ಉಪಸ್ಥಿತರಿದ್ದರು.