ಮಡಿಕೇರಿ, ಮೇ 19: ಸ್ವಾರ್ಥ ಮನೋಭಾವನೆಗೆ ಜೀವನದಲ್ಲಿ ಕೊನೆಯ ಸ್ಥಾನ ನೀಡಿ, ದೇಶರಕ್ಷಣೆಯ ಧ್ಯೇಯಕ್ಕೆ ಮೊದಲ ಸ್ಥಾನ ನೀಡಿ ಎಂದು ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಕರೆ ನೀಡಿದ್ದಾರೆ.

ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಆಯೋಜಿತ ಭಾರತೀಯ ವಿದ್ಯಾಭವನ ಶಾಲೆಗಳ ರಾಷ್ಟ್ರೀಯ 8 ನೇ ಭಾವೈಕ್ಯತಾ ಏಕತಾ ಸಮಾವೇಶದಲ್ಲಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಕೆ.ಸಿ.ಕಾರ್ಯಪ್ಪ, ಭಾರತೀಯ ಸೈನ್ಯ ನೈಜ ಭಾವೈಕ್ಯತೆಗೆ ಅತ್ಯುತ್ತಮ ಉದಾಹರಣೆಯಾಗಿದ್ದು, ಸೈನಿಕರಲ್ಲಿ ರಾಜ್ಯ, ಜಾತಿ, ಧರ್ಮ, ಲಿಂಗ, ಬಣ್ಣಗಳ ಭೇದವಿಲ್ಲದೇ ಮೊದಲು ಭಾರತ, ಭಾರತೀಯ ಎಂಬ ಹೆಮ್ಮೆಯ ಮನಸ್ಥಿತಿಯಿದೆ. ದೇಶಕ್ಕಾಗಿ ಪ್ರಾಣ ನೀಡಬೇಕಾದ ಅನಿವಾರ್ಯ ಸಂದರ್ಭದಲ್ಲಿಯೂ ಸ್ವಾರ್ಥ ಮನೋಭಾವ ಬಿಟ್ಟು ದೇಶಕ್ಕಾಗಿ ನಾನು ಎಂಬ ತ್ಯಾಗ ಮನಸ್ಥಿತಿಯನ್ನು ಭಾರತೀಯ ಸೈನಿಕ ಹೊಂದಿರುವದು ಪ್ರತಿಯೋರ್ವ ಭಾರತೀಯರಿಗೂ ಮಾದರಿಯಾಗಬೇಕು. ಬದುಕಿನ ಸುಖ, ನೆಮ್ಮದಿಗಿಂತ ಭಾರತ ದೇಶದ ರಕ್ಷಣೆ ಮುಖ್ಯ ಎಂದು ಸೈನಿಕರು ದೇಶಕ್ಕಾಗಿ ಎಲ್ಲ ಸೌಕರ್ಯಗಳನ್ನೂ ತ್ಯಾಗ ಮಾಡಿದ್ದಾರೆ. ದೇಶ ರಕ್ಷಣೆಯೇ ಅವರ ಮುಖ್ಯ ಗುರಿಯಾಗಿದ್ದು, ಸೈನಿಕರ ಜೀವನದ ಈ ಆದರ್ಶ ಭಾರತೀಯರಿಗೆ ಆದರ್ಶಪ್ರಾಯವಾಗಬೇಕಾಗಿದೆ ಎಂದು ಹೇಳಿದರು. ನಾನು ಮೊದಲು ಭಾರತೀಯ ಎಂಬ ಧೋರಣೆಯನ್ನು ಜೀವನದಲ್ಲಿ ಮೊದಲು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿ ವೃಂದಕ್ಕೆ ಕರೆ ನೀಡಿದ ಏರ್ ಮಾರ್ಷಲ್ ಕಾರ್ಯಪ್ಪ, ಜಾತಿ,ಧರ್ಮ, ಭಾಷೆ, ರಾಜ್ಯಗಳೆಂಬ ವಿಭಿನ್ನತೆಯ ಚೌಕಟ್ಟಿನಲ್ಲಿ ಬಂಧಿಯಾಗುತ್ತಿರುವ ಭಾರತದ ಒಗ್ಗಟ್ಟು, ಭಾವೈಕ್ಯತೆ ಇದೇ ಕಾರಣದಿಂದ ಕುಸಿಯುತ್ತಿದೆ ಎಂದು ವಿಷಾದಿಸಿದರು.

ಇತ್ತೀಚಿನ ವರ್ಷಗಳಲ್ಲಿ ಯುವಜನಾಂಗ ಐಟಿ ಉದ್ಯಮ ಸೇರಲು ಕಾತುರರಾಗಿದ್ದಾರೆಯೇ ವಿನಾ ಸೈನ್ಯ ಸೇರಲು ಹಿಂಜರಿಯುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಅವರು ಪೆÇೀಷಕರು ತಮ್ಮ ಮಕ್ಕಳಲ್ಲಿ ಸೈನ್ಯ ಸೇರುವ ಬಗ್ಗೆ ಹೆಚ್ಚಿನ ಪೆÇ್ರೀತ್ಸಾಹ ನೀಡುತ್ತಿಲ್ಲ. ಸೈನ್ಯದಲ್ಲಿ ವೇತನ ಕಡಿಮೆಯಿದೆ ಎಂಬ ತಪ್ಪು ನಂಬಿಕೆಯೂ ಇದೆ. ವರ್ಗಾವಣೆಯಿಲ್ಲದ ಉದ್ಯೋಗ ಸೂಕ್ತ ಎಂಬ ಮನೋಭಾವ ಕೂಡ ಹಲವರಲ್ಲಿದೆ. ಆದರಿದೆಲ್ಲಾ ತಪ್ಪು ಕಲ್ಪನೆ, ಭಾರತೀಯ ಸೈನ್ಯದಲ್ಲಿ ಅತ್ಯುತ್ತಮವಾದ ಉದ್ಯೋಗಾವಕಾಶಗಳು ಲಭ್ಯವಿದ್ದು, ಯೋಗ್ಯ ಜೀವನಶೈಲಿಯೂ ಸೈನಿಕನಿಂದ ಪ್ರಸ್ತುತ ದಿನಗಳಲ್ಲಿ ಸಾಧ್ಯವಾಗುತ್ತಿದೆ ಎಂದು ಮಾಹಿತಿ ನೀಡಿದರು. ಯಾವದೇ ಐಷಾರಾಮಿ ಉದ್ಯೋಗದಲ್ಲಿ ದೊರಕದ ಭಾರತ ದೇಶದ ರಕ್ಷಣೆ ಮಾಡುವ ಯೋಗ ಸೈನ್ಯದಲ್ಲಿ ದೊರಕುತ್ತದೆ. ಇದಕ್ಕಿಂತ ದೊಡ್ಡ ಮನ ತೃಪ್ತಿ ಯಾವುದಿದೆ ಎಂದೂ ಕಾರ್ಯಪ್ಪ ಪ್ರಶ್ನಿಸಿದರು.

ಭಾರತದಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಕಂಡಕಂಡಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ. ವಾಯು ಮಾಲಿನ್ಯವೂ ದೇಶದ ಮತ್ತೊಂದು ಪಿಡುಗಾಗುತ್ತಿದೆ. ಮೂಲತ ಭಾರತೀಯರು ಮಹಾ ಅಶಿಸ್ತಿನ ಮನುಷ್ಯರಾಗಿದ್ದು, ಜೀವನಕ್ರಮದಲ್ಲಿ ಶಿಸ್ತು, ಪರಿಸರ ಪ್ರಜ್ಞೆಯನ್ನು ರೂಡಿಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಆಂದೋಲನವೇ ಜರುಗಬೇಕಾಗಿದೆ. ವಿದ್ಯಾರ್ಥಿಗಳು ತಮ್ಮ ಗ್ರಾಮವ್ಯಾಪ್ತಿಯಲ್ಲಿ ಸ್ವಚ್ಛತೆ ಮತ್ತು ನಿಸರ್ಗ ಸಂರಕ್ಷಣೆಯ ಅಭಿಯಾನ ಪ್ರಾರಂಭಿಸಲು ಮಡಿಕೇರಿಯಿಂದಲೇ ಪಣ ತೊಡಿ ಎಂದು ಅಭಿಪ್ರಾಯಪಟ್ಟರು.

ರೈಲ್ವೇ ಮಾರ್ಗ ಯೋಜನೆ ಜಾರಿಯಾದಲ್ಲಿ ಕೊಡಗಿನ ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ ಕೆ.ಎಂ. ಕಾರ್ಯಪ್ಪ, ಈಗಾಗಲೇ ಕೊಡಗಿನಲ್ಲಿ ತಲೆ ಎತ್ತಿರುವ ನೂರಾರು ರೆಸಾರ್ಟ್‍ಗಳು ನಮ್ಮ ನೆಲವನ್ನು ಹಾಳುಗೆಡವಿದೆ. ರೈಲು ಮಾರ್ಗದಿಂದ ಕೊಡಗಿನ ನಿಸರ್ಗ ಮತ್ತಷ್ಟು ಸಮಸ್ಯೆಯ ಸುಳಿಗೆ ಸಿಲುಕಲಿದೆ ಎಂದು ಹೇಳಿದರು.

ತನ್ನ ತಂದೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಜೀವನದ ಕೆಲವು ಅಪರೂಪದ ಕ್ಷಣಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ವಿದ್ಯಾರ್ಥಿಗಳ ಅನೇಕ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ ಸೈನ್ಯಕ್ಕೆ ಆಡಳಿತದ ಚುಕ್ಕಾಣಿ ನೀಡಿದರೆ ಬಹಳ ವರ್ಷಗಳ ಸಂಘರ್ಷ ಕೊನೆಯಾದೀತು. ಶೂಟ್ ಫಸ್ಟ್, ಕ್ವೆಶ್ಚನ್ ನೆಕ್ಟ್ ಎಂಬ ಧೋರಣೆಯನ್ನು ತಾಳಲೇಬೇಕಾದ ಅನಿವಾರ್ಯತೆ ಈಗಿನ ಉದ್ವಿಗ್ನ ಪರಿಸ್ಥಿತಿಯಲ್ಲಿ ಕಾಶ್ಮೀರದಲ್ಲಿದೆ. ಮಾಧ್ಯಮಗಳು ಕೂಡ ನೀತಿ ಸಂಹಿತೆಯನ್ನು ಪಾಲಿಸಿ ಸಂಯಮ ತಾಳಿ ದೇಶಜಾಗೃತಿಯ ನಿಟ್ಟಿನಲ್ಲಿಯೇ ವರದಿಗಾರಿಕೆ ಮಾಡಬೇಕಾಗಿದೆ ಎಂದೂ ಅನಿಸಿಕೆ ವ್ಯಕ್ತಪಡಿಸಿದರು.

ಮಡಿಕೇರಿಯ ಕೆ.ಜಿ.ಪ್ರೇಮ್ ನಾಥ್,ಲಾಮಾಂಟ ಹುಲ್ಲು ಕೃಷಿ ಬಗ್ಗೆ ಮಾಹಿತಿ ನೀಡಿ, ಪರಿಸರಕ್ಕೆ ಪೂರಕವಾದ ಈ ಹುಲ್ಲಿಗೆ ದಕ್ಷಿಣ ಭಾರತದ ಹವಾಮಾನಕ್ಕೆ ಅತ್ಯಂತ ಸೂಕ್ತವಾಗಿದೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಶಿಬಿರಾರ್ಥಿಗಳಿಗೆ ಸಂಚಾರ ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಿ, ಅತೀ ವೇಗ ಕಾನೂನು ನಿಯಮದ ಉಲ್ಲಂಘನೆ ಮಾತ್ರವಲ್ಲ ಜೀವಕ್ಕೂ ಅಪಾಯ ತಂದೊಡ್ಡುತ್ತದೆ. ವೇಗದಿಂದ ಜೀವನಕಾಲವನ್ನೇ ಅಂತ್ಯಗೊಳಿಸದಿರಿ ಎಂದು ಕಿವಿ ಮಾತು ಹೇಳಿದರು.

ರಾಷ್ಟ್ರೀಯ ಭಾವೈಕ್ಯತಾ ಸಮಾವೇಶದ ಹಿನ್ನೆಲೆಯಲ್ಲಿ ಏರ್ ಮಾರ್ಷಲ್ ಕಾರ್ಯಪ್ಪ ಅವರನ್ನು ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಪರವಾಗಿ ಕೆ.ಎಸ್.ದೇವಯ್ಯ, ಸಿ.ಬಿ.ದೇವಯ್ಯ, ಬಿ.ಬಿ.ಬೆಳ್ಯಪ್ಪ, ಬಾಲಾಜಿ ಕಾಶ್ಯಪ್, ಪ್ರಾಂಶುಪಾಲ ಇ. ಶ್ರೀನಿವಾಸನ್ ಸನ್ಮಾನಿಸಿ ಗೌರವಿಸಿದರು.