ಮಡಿಕೇರಿ, ಮೇ 20: ಸುದೀರ್ಘ ರಜೆಯ ಬಳಿಕ ಶಾಲೆಗಳು ತಾ. 29 ರಿಂದ ಪುನರಾರಂಭಗೊಳ್ಳಲಿದೆ. ಈ ಬಗ್ಗೆ ಮಾಹಿತಿ ನಿಡಿರುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಬಾರ ಉಪನಿರ್ದೇಶಕ ಮಲ್ಲೇಸ್ವಾಮಿ ತಾ. 29ರಿಂದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಪುನರಾರಂಭಗೊಳ್ಳಲಿದೆ. ಶಾಲೆ ಪುನರರಾಂಭವನ್ನು ಆರಂಭೋತ್ಸವವನ್ನಾಗಿ ಆಚರಿಸಲಾಗುತ್ತಿದ್ದು, ಶಾಲಾವರಣವನ್ನು ತಳಿರು ತೋರಣಗಳಿಂದ ಅಲಂಕರಿಸಿ ಶಾಲಾ ಮಕ್ಕಳಿಗೆ ಪಾಯಸ ಹಾಗೂ ಇನ್ನಿತರ ಸಹಿ ಹಂಚಿ ಸಂಭ್ರಮದಿಂದ ವಿದ್ಯಾರ್ಥಿಗಳನ್ನು ಬರ ಮಾಡಿಕೊಳ್ಳಲಾಗುವದು. ಅಂದಿನಿಂದಲೇ ಶಾಲೆಗಳಲ್ಲಿ ಎಂದಿನಂತೆ ಪಾಠ ಪ್ರವಚನಗಳು ಆರಂಭವಾಗಲಿದೆ ಎಂದು ತಿಳಿಸಿದರು.