ಮೂರ್ನಾಡು, ಮೇ 20: ಮೂರ್ನಾಡು ಹೋಬಳಿ ಬಂಟರ ಸಂಘದ ವತಿಯಿಂದ ಕೊಡಗು ಜಿಲ್ಲಾ ಬಂಟರ ಸಂಘದ ಸಹಯೋಗದಲ್ಲಿ ಸ್ವಜಾತಿ ಬಂಧುಗಳಿಗೆ ಜಿಲ್ಲಾಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಾಗೂ ವಿವಿಧ ಆಟೋಟ ಸ್ಪರ್ಧೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಮೂರ್ನಾಡು ವಿದ್ಯಾಸಂಸ್ಥೆ ಆಟದ ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾದ ಕ್ರಿಕೆಟ್ ಪಂದ್ಯಾವಳಿಯನ್ನು ಮಡಿಕೇರಿ ಉದ್ಯಮಿ ಬಿ.ಡಿ. ಜಗದೀಶ್ ರೈ ಬ್ಯಾಟ್ ಮಾಡಿ ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ನಾರಾಯಣ ರೈ ಬಾಲ್ ಮಾಡುವದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.

(ಮೊದಲ ಪುಟದಿಂದ) ಕೊಡಗು ಬಂಟರ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ. ನಾರಾಯಣ ರೈ ಮಾತನಾಡಿ ಕ್ರೀಡಾಕೂಟವು ನಾಲ್ಕನೇ ವರ್ಷಕ್ಕೆ ಕಾಲಿಟ್ಟಿರುವದು ಸಂತೋಷಕರ. ಜಿಲ್ಲೆಯ ಸ್ವಜಾತಿ ಬಂಧುಗಳು ಒಂದೆಡೆ ಸೇರುವಲ್ಲಿ ಕ್ರೀಡಾಕೂಟ ಸಹಕಾರಿಯಾಗಿದೆ. ಇಂತಹ ಕ್ರೀಡಾಕೂಟಗಳನ್ನು ನಡೆಸಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ತಿಳಿಸಿದರು.

ಮೂರ್ನಾಡು ಹೋಬಳಿ ಬಂಟರ ಸಂಘದ ಅಧ್ಯಕ್ಷ ಬಿ.ಬಿ. ಗಿರೀಶ್ ರೈ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಸತೀಶ್ ರೈ, ಕೊಡಗು ಜಿಲ್ಲಾ ಬಂಟರ ಸಂಘದ ಖಜಾಂಚಿ ರತ್ನಾಕರ್ ರೈ, ಸಹಕಾರ್ಯದರ್ಶಿ ಬಿ.ಸಿ. ಹರೀಶ್ ರೈ, ಮಡಿಕೇರಿ ಮಹಿಳಾ ಘಟಕ ಅಧ್ಯಕ್ಷೆ ಶಶಿಕಲಾ ಲೋಕೇಶ್ ರೈ, ಮಡಿಕೇರಿ ನಗರ ಬಂಟರ ಸಂಘದ ಅಧ್ಯಕ್ಷೆ ಕುಶಾಲತಾ ಆರ್ ಶೆಟ್ಟಿ, ಮಡಿಕೇರಿ ತಾಲೂಕು ಬಂಟರ ಸಂಘ ಉಪಾಧ್ಯಕ್ಷ ಸದಾಶಿವ ರೈ, ಯುವ ಘಟಕ ಅಧ್ಯಕ್ಷ ಶರತ್ ಶೆಟ್ಟಿ, ಮಡಿಕೇರಿ ನಗರ ಬಂಟರ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ, ಮಡಿಕೇರಿ ತಾಲೂಕು ಬಂಟರ ಸಂಘದ ಮಹಿಳಾ ಘಟಕ ಕಾರ್ಯದರ್ಶಿ ರುಕ್ಷ್ಮಿಣಿ ರೈ, ಮಡಿಕೇರಿ ತಾಲೂಕು ಬಂಟರ ಸಂಘದ ಕಾರ್ಯದರ್ಶಿ ವಿಠಲ ರೈ, ವೀರಾಜಪೇಟೆ ತಾಲೂಕು ಬಂಟರ ಸಂಘದ ಕಾರ್ಯದರ್ಶಿ ಶಬರೀಶ್ ಶೆಟ್ಟಿ, ರಾಜಶೇಖರ್ ರೈ, ದಿವೇಶ್ ರೈ, ಬಾಲಕೃಷ್ಣ ರೈ, ವಿಜಯಲಕ್ಷ್ಮಿ ಶೆಟ್ಟಿ, ಜಯಂತಿ ಶೆಟ್ಟಿ ಇತರರು ಹಾಜರಿದ್ದರು.