ಮಡಿಕೇರಿ, ಮೇ 20: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೆÉೀಜಿನ ಹಳೇ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಮತ್ತು ‘ಸಂತೋಷ ಕೂಟ’ ತಾ. 25 ರಂದು ಕಾಲೆÉೀಜು ಸಭಾಂಗಣದಲ್ಲಿ ನಡೆಯಲಿದೆ.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶೋಭಾ ಸುಬ್ಬಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಸಂಘದ ವಾರ್ಷಿಕ ಸಂತೋಷ ಕೂಟದ ಹಿನ್ನೆಲೆಯಲ್ಲಿ ಕಾಲೆÉೀಜು ಪ್ರಾಂಶುಪಾಲರ ಅನುಮತಿಯೊಂದಿಗೆ ಕಾಲೇಜು ಹಿಂಭಾಗದಲ್ಲಿ ಸುಮಾರು ಇನ್ನೂರು ಅಡಿ ಉದ್ದ ಹಾಗೂ ಐವತ್ತು ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ನೂರು ಮರಗಳನ್ನು ನೆಡುವ ಉದ್ದೇಶ ಹೊಂದಲಾಗಿದೆ ಎಂದರು. ಸಂತೋಷ ಕೂಟದಂದು ಸಾಂಕೇತಿಕವಾಗಿ ವಿವಿಧ ಜಾತಿಯ ಹತ್ತು ಗಿಡಗಳನ್ನು ಅತಿಥಿ ಗಣ್ಯರು ನೆಡಲಿದ್ದಾರೆ.
ಬ್ರಿಗೇಡಿಯರ್ ಎನ್.ಎನ್. ಮಾದಪ್ಪ (ಸನ್ನಿ) ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವ ಸಂತೊಷ ಕೂಟ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಈ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಷಣಗಳನ್ನು ಮೊಟಕು ಗೊಳಿಸಿ ಸಮಾರಂಭಕ್ಕೆ ಆಗಮಿಸುವ ಎಲ್ಲರೂ ಪಾಲ್ಗೊಳ್ಳಬಹುದಾದ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ ಎಂದು ಶೋಭಾ ಸುಬ್ಬಯ್ಯ ತಿಳಿಸಿದರು.
ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿಸುವ ಉದ್ದೇಶದಿಂದ ಕಾರ್ಯಕ್ರಮದ ಸಂದರ್ಭ ಬಿಎಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ, ವಿಜ್ಞಾನ, ಗಣಿತದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು, ಎನ್ಸಿಸಿಯಲ್ಲಿ ಆರ್ಡಿ ಪೆರೇಡ್ನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು, ಕ್ರೀಡೆಯಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ ಆಟಗಾರ್ತಿಯೊಬ್ಬರನ್ನು ಸನ್ಮಾನಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಕಳೆದ ಎರಡು ವರ್ಷಗಳಿಂದ ಹಳೇ ವಿದ್ಯಾರ್ಥಿ ಸಂಘ ಕಾಲೆÉೀಜು ವಿದ್ಯಾರ್ಥಿಗಳ ಅಭ್ಯುದಯದ ದೃಷ್ಟಿಕೋನದೊಂದಿಗೆ ಹಲವಾರು ಕಾರ್ಯಕ್ರಗಳನ್ನು ಆಯೋಜಿಸಿ ಕೊಂಡು ಬರುತ್ತಿದೆ. ಭಾಷಣ ಸ್ಪರ್ಧೆ, ದಂತ ತಪಾಸಣಾ ಶಿಬಿರ, ವನಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವದಾಗಿ ತಿಳಿಸಿದ ಶೋಭಾ ಸುಬ್ಬಯ್ಯ, ಸಂಘÀದ ವತಿಯಿಂದ ಕಾಲೆÉೀಜು ವಿದ್ಯಾರ್ಥಿನಿ ಯರ ವಸತಿ ಗೃಹಕ್ಕೆ ಮೇಜು ಮತ್ತು ಕುರ್ಚಿಗಳನ್ನು ಉದಾರವಾಗಿ ಒದಗಿಸಿರುವದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಳೇ ವಿದ್ಯಾರ್ಥಿ ಸಂಘÀದ ಮಾಜಿ ಅಧ್ಯಕ್ಷರಾದ ಎನ್.ಎ. ಅಪ್ಪಯ್ಯ, ಪದಾಧಿಕಾರಿಗಳಾದ ಶ್ಯಾಂ ಪೂಣಚ್ಚ, ಜಾಜಿ ಗಣಪತಿ, ತಾರಾ ಸೋಮಯ್ಯ ಹಾಗೂ ತುಳಸಿ ಬೆಳ್ಯಪ್ಪ ಉಪಸ್ಥಿತರಿದ್ದರು.