ಸೋಮವಾರಪೇಟೆ, ಮೇ 20: ಸಮೀಪದ ಗೆಜ್ಜೆಹಣಕೋಡು ಗ್ರಾಮದಲ್ಲಿ ಐವರ ನಡುವೆ ಘರ್ಷಣೆ ನಡೆದಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು- ಪ್ರತಿದೂರು ದಾಖಲಾಗಿದೆ.
ಗೆಜ್ಜೆಹಣಕೋಡು ಗ್ರಾಮದ ನಿವಾಸಿ ಸಚಿನ್ ಎಂಬವರು ಹೂವಣ್ಣ ಅವರೊಂದಿಗೆ ಮದುವೆ ಕಾರ್ಯಕ್ರಮಕ್ಕೆ ತೆರಳಿ ವಾಪಸ್ ಬರುವಾಗ ಅದೇ ಗ್ರಾಮದ ಮಲ್ಲೇಶ್, ನಾಗೇಶ್ ವಿನಾಕಾರಣ ಜಗಳವಾಡಿ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಸಚಿನ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ಘಟನೆಗೆ ಸಂಬಂಧಿಸಿದಂತೆ ಸಿ. ಆರ್. ನಾಗೇಶ್ ದೂರು ನೀಡಿದ್ದು, ದಾರಿ ತಡೆದು ತನ್ನ ಮೇಲೆ ಸಚಿನ್, ದರ್ಶನ್ ಮತ್ತು ಕುಟ್ಟಪ್ಪ ಹಲ್ಲೆ ಮಾಡಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ. ಉಭಯ ಕಡೆಯಿಂದಲೂ ದೂರು ದಾಖಲಿಸಿಕೊಂಡಿರುವ ಸೋಮವಾರಪೇಟೆ ಪೊಲೀಸರು, ಪ್ರಕರಣದ ತನಿಖೆ ಕೈಗೊಂಡಿದ್ದಾರೆ.