ಮಡಿಕೇರಿ, ಮೇ 21: ಕೊಡವ ಮಕ್ಕಡ ಕೂಟದ ವತಿಯಿಂದ ನಾಪೋಕ್ಲುವಿನಲ್ಲಿ ನಡೆಯುತ್ತಿರುವ 5ನೇ ವರ್ಷದ ಆಟ್-ಪಾಟ್-ಪಡಿಪು ಇದರ ಸಮಾರೋಪ ತಾ. 22 ರಂದು (ಇಂದು) ನಾಪೋಕ್ಲುವಿನ ಜೂನಿಯರ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.ಬೆಳಿಗ್ಗೆ 10 ಗಂಟೆಗೆ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಇಂಡಿಯನ್ ಸೈಕ್ಲಿಂಗ್ ತರಬೇತುದಾರ ಪಾಡೆಯಂಡ ಚರ್ಮಣ, ನಾಪೋಕ್ಲು ಜೂನಿಯರ್ ಕಾಲೇಜಿನ ಉಪ ಪ್ರಾಂಶುಪಾಲೆ ಬಡ್ಡಿರ ನಳಿನಿ ಭಾಗವಹಿಸುವರು.