ಮಡಿಕೇರಿ, ಮೇ 21: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಿಳಾ ವಿಭಾಗದ 5 ಬ್ಲಾಕ್‍ಗಳಿಗೆ ನೂತನ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ ಎಂದು ಮಹಿಳಾ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷೆ ಜಿ.ಆರ್. ಪುಷ್ಪಲತಾ ತಿಳಿಸಿದ್ದಾರೆ. ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಮಂಜುಳಾ ಹರೀಶ್, ಮಡಿಕೇರಿ ಬ್ಲಾಕ್‍ಗೆ ಮಂಜುಳಾ ಮಂಜು, ವೀರಾಜಪೇಟೆಗೆ ಮುಕ್ಕಾಟಿರ ವಿನಿತಾ ಕಾವೇರಮ್ಮ, ಪೊನ್ನಂಪೇಟೆಗೆ ಜೆ.ಎ. ಕುಸುಮ ಹಾಗೂ ನಾಪೋಕ್ಲು ಘಟಕದ ಅಧ್ಯಕ್ಷರಾಗಿ ಅಮೀನ ಆಯ್ಕೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.