ಕೂಡಿಗೆ, ಮೇ 21: ಜಿಲ್ಲೆಯಲ್ಲಿ ತಂಬಾಕು ಮುಕ್ತಗೊಳಿಸಲು ಸಾರ್ವಜನಿಕರ ಸಹಕಾರ ಮುಖ್ಯ ಎಂದು ತಂಬಾಕು ನಿಯಂತ್ರಣದ ಹೈಪವರ್ ಮಂಡಳಿಯ ಅಧಿಕಾರಿ ಜಾನ್ ಕೆನಡಿ ಹೇಳಿದರು. ಕೂಡ್ಲೂರಿನಲ್ಲಿರುವ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದ ತಂಬಾಕು ಮುಕ್ತಗೊಳಿಸುವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಈ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರ ಸಹಕಾರ ಅವಶ್ಯಕವಾಗಿದೆ. ಸಿಒಟಿಪಿಎ ತಂಬಾಕು ಕಾಯಿದೆಯ ಅನುಷ್ಠಾನ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕೆಂದರು.

ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ. ಶಿವರಾಂ, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಜೆ.ಇ. ಮಹೇಶ್ ಸೇರಿದಂತೆ ವ್ಯಾಪ್ತಿಗೆ ಒಳಪಡುವ ಆರು ಗ್ರಾ.ಪಂ.ಗಳ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರುಗಳು ಸೇರಿದಂತೆ ಆಯಾ ವ್ಯಾಪ್ತಿಯ ವಿವಿಧ ಸಂಘಟನೆಗಳ ಮುಖ್ಯಸ್ಥರುಗಳು ಇದ್ದರು. ಈ ವ್ಯಾಪ್ತಿಯ ಅಂಗಡಿ, ಹೊಟೇಲ್, ಬಾರ್‍ಗಳಲ್ಲಿ ತಂಬಾಕು ಮಾರಾಟ ಮಾಡುತ್ತಿದ್ದುದನ್ನು ಪರಿಶೀಲಿಸಿ ಅವುಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿಲಾಯಿತು.