ಮಡಿಕೇರಿ, ಮೇ 22 : ಕೊಡಗು ಜಿಲ್ಲೆಯಲ್ಲಿನ ಕೃಷಿ ಜಮೀನಿನ ರಕ್ಷಣೆ ಅಗತ್ಯ. ಇಲ್ಲದಿದ್ದರೆ ಕೃಷಿ ಜಮೀನುಗಳ ಭೂ ಪರಿವರ್ತನೆಯಿಂದಾಗಿ ಭವಿಷ್ಯದಲ್ಲಿ ಕೃಷಿಗೆ ಭೂಮಿಯೇ ಸಿಗದಿರುವ ದುಸ್ಥಿತಿ ಖಂಡಿತ ಎಂದು ಮಾಜಿ ಸಚಿವ ಯಂ.ಸಿ.ನಾಣಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಆಯೋಜಿತ ತೋಟಗಾರಿಕಾ ಕೃಷಿ ಫಸಲು ಪ್ರದರ್ಶನಕ್ಕೆ ಭೇಟಿ ನೀಡಿ ಈ ಸಂದರ್ಭ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು.ರೈತರು ಜಿಲ್ಲೆಯಲ್ಲಿ ಕಾಫಿ, ಭತ್ತದ ಫಸಲು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಆದರೆ, ಕೊಡಗಿನ ಕೃಷಿ ಜಮೀನುಗಳಲ್ಲಿ ಇಂಥ ಬೆಳೆ ಬೆಳೆಯಲು ಸೂಕ್ತ ಜಮೀನು ರೈತಾಪಿಗಳಿಗೆ ಸಿಗುತ್ತಿಲ್ಲ, ಭೂ ಮಾಫಿಯಾದಿಂದಾಗಿ ಫಸಲನ್ನು ಸೂಕ್ತ ರೀತಿಯಲ್ಲಿ ಬೆಳೆಯಲು ಇರುವ ಅವಕಾಶವೇ ರೈತರಿಗೆ ದೊರಕದಾಗಿದೆ. ಊಹಿಸಲಾಗದ ಹಣ ನೀಡಿ ರೈತರ ಕೃಷಿ ಜಮೀನು ಖರೀದಿಸಲಾಗುತ್ತಿದೆ. ಹೀಗಾಗಿಯೇ ಈ ವರ್ಷ ಅನುಭವಿಸಿದಂಥ ತೀವ್ರ ಬಿಸಿಲಿನ ದಿನಗಳು ಮುಂದಿನ ವರ್ಷಗಳಿಂದ ಕೊಡಗಿಗೆ ಸರ್ವೆ ಸಾಮಾನ್ಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ನಾಣಯ್ಯ, ರೆಸಾರ್ಟ್ ಸಂಸ್ಕøತಿಯಿಂದ ಕೊಡಗಿನ ಕೃಷಿ ಜಮೀನುಗಳು ಪರಿವರ್ತನೆಗೊಂಡು ಮೋಜಿನ ತಾಣವಾಗಿದೆ.

ಕಾಫಿ ಕೃಷಿ ಜಮೀನನ್ನು ಮಾಫಿಯಾಗಳ ಕೈಗೆ ಭೂಪರಿವರ್ತನೆ ಮಾಡಿ ನೀಡದಿರಿ ಎಂದು ಮನವಿ ಸಲ್ಲಿಸಿದ್ದರೂ ವಸ್ತುಸ್ಥಿತಿಯ ಗಂಭೀರತೆ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಕಾಫಿ ಗಿಡ ಕಡಿದುಹಾಕಿ ರೆಸಾರ್ಟ್‍ಗಳಿಗೆ ಕೃಷಿ ಜಮೀನು ನೀಡಲಾಗುತ್ತಿದೆ. ಕಾಫಿ ಬೆಳೆಗೆ ಭೂಪರಿವರ್ತನೆ ಕಾಯ್ದೆಯಲ್ಲಿ ವಿನಾಯಿತಿ ನೀಡಲಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಮಾಹಿತಿಯೇ ಇಲ್ಲದಂತೆ ವರ್ತಿಸುತ್ತಿದೆ. ಕಾಫಿ ತೋಟ, ಭತ್ತದ ಗದ್ದೆಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಖರೀದಿಸುವ ಪ್ರವತ್ತಿ ಮುಂದುವರೆದರೆ ಕೊಡಗಿನಲ್ಲಿ ಕೃಷಿಗೆ ಭವಿಷ್ಯವೇ ಇಲ್ಲದಂತಾಗುತ್ತದೆ ಎಂದು ನಾಣಯ್ಯ ಎಚ್ಚರಿಸಿದರು.

ಕಾಫಿ, ಕರಿಮೆಣಸಿಗೆ ಪರ್ಯಾಯವಾಗಿ ಕೊಡಗಿನಲ್ಲಿ ತೋಟಗಾರಿಕಾ ಬೆಳೆ ಬೆಳೆಸುವ ನಿಟ್ಟಿನಲ್ಲಿ ಕೃಷಿಕರಿಗೆ ಪೆÇ್ರೀತ್ಸಾಹ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಹಲವಷ್ಟು ಅವಕಾಶಗಳು ಕೊಡಗಿನ ಕೃಷಿಕರಿಗೆ ಇದೆ ಎಂದು ನಾಣಯ್ಯ ಅಭಿಪ್ರಾಯಪಟ್ಟರು.