ಸಿದ್ದಾಪುರ, ಮೇ 24: ಸಚಿವರು ಆದೇಶ ನೀಡಿ ತಿಂಗಳು ಕಳೆದರೂ ಇನ್ನೂ ಆದಿವಾಸಿಗಳ ಮನೆಯನ್ನು ದುರಸ್ತಿ ಪಡಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಪ್ರಸಂಗ ದಿಡ್ಡಳ್ಳಿಯಲ್ಲಿ ನಡೆದಿದೆ. ದಿಡ್ಡಳ್ಳಿಯಲ್ಲಿ ನಿರಾಶ್ರಿತರು ಗುಡಿಸಲುಗಳನ್ನು ಕಟ್ಟಿಕೊಂಡು 600ಕ್ಕೂ ಅಧಿಕ ಕುಟುಂಬಗಳು ವಾಸ ಮಾಡಿಕೊಂಡು ದಿಡ್ಡಳ್ಳಿಯಲ್ಲಿಯೇ ಶಾಶ್ವತ ಸೂರು ಒದಗಿಸಿ ಕೊಡಬೇಕೆಂದು ಒತ್ತಾಯಿಸಿ ಕಾಲ್ನಡಿಗೆ ಜಾಥಾ ಬೆಂಗಳೂರು ಚಲೋ ಹಮ್ಮಿಕೊಳಲಾಗಿತ್ತು. ಈ ಸಂದರ್ಭ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಆದೇಶದಂತೆ ಕಾಲ್ನಡಿಗೆ ಜಾಥಾ ವನ್ನು ಅರ್ಧದಲ್ಲೇ ಮೊಟಕುಗೊಳಿಸ ಲಾಯಿತು. ನಂತರ ಹೋರಾಟ ಸಮಿತಿಯ ಪ್ರಮುಖರನ್ನು ಕರೆಸಿ ಬೆಂಗಳೂರಿನಲ್ಲಿ ಸಭೆ ನಡೆಸಿದ ಮುಖ್ಯ ಮಂತ್ರಿಗಳು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ದಿಡ್ಡಳ್ಳಿಯಲ್ಲಿ ವಾಸ ಮಾಡುವ ನಿರಾಶ್ರಿತರ ಸಮಸ್ಯೆ ಆಲಿಸಲು ದಿಡ್ಡಳ್ಳಿಗೆ ಕಳುಹಿಸಿ ಕೊಡಲಾಯಿತು. ಸಚಿವ ಕಾಗೋಡು ತಿಮ್ಮಪ್ಪ ಅವರು ದಿಡ್ಡಳ್ಳಿಗೆ ಅಧಿಕಾರಿ ಗಳೊಂದಿಗೆ ಆಗಮಿಸಿ ದಿಡ್ಡಳ್ಳಿಯ ತಟ್ಟಳ್ಳಿಯಲ್ಲಿ ತಲತಲಾಂತರದಿಂದ ನೆಲೆಸಿರುವ ಜೇನುಕುರುಬರ ಸರಸು ಅವರ ಮನೆಗೆÉ ಭೇಟಿ ನೀಡಿ ಮನೆಯ ದುಸ್ಥಿತಿಯನ್ನು ಕಂಡು ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ 15 ದಿನಗಳಲ್ಲಿ ಮನೆ ದುರಸ್ತಿ ಪಡಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಆದೇಶÀ ನೀಡಿದರು. ಸ್ಥಳದಲ್ಲೇ ಇದ್ದ ತಹಶೀಲ್ದಾರ್, ಐ.ಟಿ.ಡಿ.ಪಿ. ಅಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಲೆ ಆಡಿಸಿ ಒಪ್ಪಿಕೊಂಡು ಹೋದವರು ಬಳಿಕ ಯಾರೊಬ್ಬ ಅಧಿಕಾರಿಗಳೂ ಇತ್ತ ಸುಳಿಯಲೇ ಇಲ್ಲವೆಂದು ಆದಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ. ಈಗಾಗಲೇ 1 ತಿಂಗಳು ಸಮೀಪಿಸಿದರೂ ಯಾರೊಬ್ಬ ಅಧಿಕಾರಿಯು ಕೂಡ ದುಸ್ಥಿತಿಯಲ್ಲಿರುವ ಮನೆಗಳನ್ನು ದುರಸ್ತಿ ಪಡಿಸಲು ಕಾಳಜಿ ವಹಿಸದೇ ನಿರ್ಲಕ್ಷ್ಯ ವಹಿಸಿರುತ್ತಾರೆ ಎಂದು ಹಾಡಿ ನಿವಾಸಿ ಸರಸು ಅಸಮಾಧಾನÀ ವ್ಯಕ್ತಪಡಿಸಿದರು. ಸಚಿವರ ಮಾತಿಗೆ ಅಧಿಕಾರಿಗಳು ಕವಡೆ ಕಾಸಿನ ಬೆಲೆ ನೀಡಲಿಲ್ಲ...! ಇನ್ನೂ ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾದರೆ ಮನೆಯು ಕುಸಿದು ಬಿದ್ದು ಅನಾಹುತ ಸಂಭವಿಸುವ ಸಾಧ್ಯತೆ ಇದ್ದರೂ ಕೂಡ ಆದಿವಾಸಿಗಳ ಬಗ್ಗೆ ಅಧಿಕಾರಿ ಗಳು ತಾತ್ಸಾರ ಮನೋಭಾವ ತೋರುತ್ತಿದ್ದಾರೆ ಎಂದು ಆದಿವಾಸಿ ಗಳು ಆರೋಪಿಸಿದ್ದಾರೆ. ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿರುವ ಆದಿವಾಸಿ ಗಳ ಮನೆ ದುರಸ್ತಿಯ ಬಗ್ಗೆ ಹಲವಾರು ಬಾರಿ ಕಚೇರಿಗಳಿಗೆ ಅಲೆದರು ಕೂಡ ಅಧಿಕಾರಿಗಳು ಸ್ಪಂದನ ನೀಡದೆ ಸತಾಯಿಸುತ್ತಿರುವ ಬಗ್ಗೆ ಆದಿವಾಸಿಗಳು ಆಕ್ರೋಶÀ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವತಿಯಿಂದ ಆದಿವಾಸಿಗಳಿಗೆ ವಸತಿ ನಿರ್ಮಾಣ ಮಾಡಲು ಹಾಗೂ ದುರಸ್ತಿ ಪಡಿಸಲು ಹಲವಾರು ಯೋಜನೆಗಳು ಇದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೋಜನೆ ಗಳನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸದೆ ಅನುದಾನ ನಿಷ್ಪ್ರ ಯೋಜಕವಾಗುತ್ತಿದೆ. ಇದರಿಂದಾಗಿ ಶಿಥಿಲ ವ್ಯವಸ್ಥೆಯಲ್ಲಿರುವ ಮನೆಯಲ್ಲಿ ಪ್ರಾಣವನ್ನು ಕೈಯಲ್ಲಿ ಹಿಡಿದು ಕೊಂಡೇ ಬದುಕುವಂತಹ ದುಸ್ಥಿತಿ ಆದಿವಾಸಿಗಳಿಗೆ ಒದಗಿ ಬಂದಿರು ವದು ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕನ್ನಡಿ ಯಾಗಿದೆ. ಕಂದಾಯ ಸಚಿವರೇ ಖುದ್ದಾಗಿ ಭೇಟಿ ನೀಡಿ ಅಧಿಕಾರಿಗಳಿಗೆ ಆದೇಶ ನೀಡಿದ್ದರೂ ಕೂಡ ಆದಿವಾಸಿಗಳ ಮನೆಗಳನ್ನು ದುರಸ್ತಿ ಪಡಿಸಲು ಆಸÀಕ್ತಿ ವಹಿಸದ ಅಧಿಕಾರಿಗಳಿಂದ ಬಡಜನರಿಗೆ ಯಾವ ರೀತಿಯ ಸ್ಪಂದನ ದೊರಕು ತ್ತದೆಂಬುವದೇ ಪ್ರಶ್ನೆಯಾಗಿದೆ.

- ಎ.ಎನ್. ವಾಸು