ಸೋಮವಾರಪೇಟೆ, ಮೇ 24: 12 ವರ್ಷಗಳಿಗೊಮ್ಮೆ ನಡೆಯುವ ತಾಕೇರಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ವಿಶೇಷ ಪೂಜಾ ಮಹೋತ್ಸವ ಪ್ರಸಕ್ತ ವರ್ಷ ನಡೆಯಲಿದ್ದು, ತಾ. 26 ಮತ್ತು 27ರಂದು ಪೂಜಾ ಕೈಂಕರ್ಯಗಳು ಜರುಗಲಿವೆ ಎಂದು ಈಶ್ವರ ದೇವರ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್ ತಿಳಿಸಿದ್ದಾರೆ.
ತಾ. 26ರಂದು ರಾತ್ರಿ 8 ಗಂಟೆಯಿಂದ ಪ್ರಾರಂಭ ಪೂಜೆ, ಉಮಾ ಮಹೇಶ್ವರ ದೇವಾಲಯದಿಂದ ಅಯ್ಯಪ್ಪ ದೇವಾಲಯದ ಬೆಟ್ಟದವರೆಗೆ ದೇವರ ಪ್ರಸಾದ ಮೆರವಣಿಗೆ, ನಂತರ ಪೂಜೆ, ಸಾರ್ವಜನಿಕ ಭಕ್ತಾದಿಗಳಿಗೆ ಅನ್ನದಾನ, ತಾ. 27ರಂದು ಭೂತಾರಾಧನೆ, ಮಧ್ಯಾಹ್ನ 12 ಗಂಟೆಗೆ ಅನ್ನದಾನ ಏರ್ಪಡಿ¸ Àಲಾಗಿದೆ ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಎಸ್.ಪಿ. ನಿಂಗಪ್ಪ, ಖಜಾಂಚಿ ಎಸ್.ಎ. ಕುಶಾಲಪ್ಪ, ಸದಸ್ಯರುಗಳಾದ ಸುರೇಶ್, ಮಂಜುನಾಥ್ ಉಪಸ್ಥಿತರಿದ್ದರು.