ಮೂರ್ನಾಡು, ಮೇ 24: ಗಾಂಧಿನಗರದ ಅನ್ನಪೂರ್ಣೇಶ್ವರಿ ದೇವಾಲಯ ಮತ್ತು ಅನ್ನಪೂರ್ಣೇಶ್ವರಿ ಯೋಗ ಸೇವಾ ಪ್ರತಿಷ್ಠಾನದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಚಂಡಿಕಾಯಾಗ ಮತ್ತು ನೃತ್ಯೋತ್ಸವ ಸಮಾರಂಭ ವಿಜೃಂಭಣೆಯಿಂದ ಜರುಗಿತು.

ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾದ ನೃತ್ಯೋತ್ಸವ ಸಮಾರಂಭವನ್ನು ಬೊಳ್ಳಚೆಟ್ಟಿರ ಮಾದಪ್ಪ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಅನ್ನಪೂರ್ಣೇಶ್ವರಿ ಯೋಗ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಮಹಾಭಲೇಶ್ವರ ಭಟ್ ಮಾತನಾಡಿ, ಭರತನಾಟ್ಯ ಪವಿತ್ರ ಮತ್ತು ಪುರಾತನ ಕಲೆಯಾಗಿದ್ದು, ಈ ನಾಟ್ಯವನ್ನು ಕಲಿಯಲು ಮಕ್ಕಳಿಗೆ ಇಚ್ಛಾಶಕ್ತಿಯ ಜೊತೆಗೆ ಯೋಗಭಾಗ್ಯವು ಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ವೀರಾಜಪೇಟೆ ಗಾಯತ್ರಿ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ರವಿ, ನಿರಂಜನ್, ನೃತ್ಯ ಶಿಕ್ಷಕಿ ಜಲಜ ನಾಗರಾಜ್, ದೇವಸ್ಥಾನದ ಮುಖ್ಯಸ್ಥೆ ಗ್ರೇಸಿ ವಿಜಯ, ಕಾರ್ಯದರ್ಶಿ ಯಶೋಧ ಚಂದ್ರಶೇಖರ್ ಉಪಸ್ಥಿತರಿದ್ದರು.

ನೃತ್ಯೋತ್ಸವ ಕಾರ್ಯಕ್ರಮದಲ್ಲಿ 27 ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು. ತೊಂಭತ್ತುಮನೆ ವಿನಾಯಕ ಸೇವಾ ಸಮಿತಿಯ ವತಿಯಿಂದ ಭಜನೆ, ಗಣಪತಿ ಹವನ, ನವಗ್ರಹ ಹವನ, ಕಲಾ ಹವನ, ಚಂಡಿಕಾ ಹವನ, ಪೂರ್ಣಾಹÅತಿ, ಮಹಾ ಮಂಗಳಾರತಿ ನಡೆದ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು.