ಶ್ರೀಮಂಗಲ, ಮೇ 24: ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವ ಅಳಮೇಂಗಡ ಕಪ್ 2017ರ ವಿನ್ನರ್ಸ್ ಹಾಗೂ ರನ್ನರ್ಸ್ ಪ್ರಶಸ್ತಿ ಪಡೆದ ಒಂದೇ ಗ್ರಾಮದ ಎರಡು ತಂಡಗಳಾದ ಕಳಕಂಡ ಕುಟುಂಬ (ವಿನ್ನರ್ಸ್) ಹಾಗೂ ಅಣ್ಣಳಮಾಡ ಕುಟುಂಬ (ರನ್ನರ್ಸ್) ತಮ್ಮ ತಂಡದೊಂದಿಗೆ ಕುಟುಂಬದ ಸದಸ್ಯರು ಹಾಗೂ ನಾಡಿನ ಜನತೆ ಸ್ವಗ್ರಾಮ ಬಿರುನಾಣಿಯಲ್ಲಿ ವಿಜಯೋತ್ಸವ ನಡೆಸಿ ಸಂಭ್ರಮ ಪಟ್ಟರು.
ಮುಖ್ಯರಸ್ತೆಯಲ್ಲಿ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಬಹುತೇಕ ಎಲ್ಲಾ ಕುಟುಂಬದವರು ವಿಜಯೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ತಂಡಗಳನ್ನು ಅಭಿನಂದಿಸಿದರು. ಪಟ್ಟಣದ ಮುಖ್ಯರಸ್ತೆಯಲ್ಲಿ ತೆರೆದ ಜೀಪಿನಲ್ಲಿ ಪ್ರಶಸ್ತಿಯೊಂದಿಗೆ ಉಭಯ ತಂಡಗಳು ಮೆರವಣಿಗೆ ನಡೆಸಿದವು.
ಈ ಸಂದÀರ್ಭ ಪಟ್ಟಣದ ಶಾಲಾ ಮೈದಾನದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕಳಕಂಡ ಕುಟುಂಬದ ಅಧ್ಯಕ್ಷ ರಾಮು ನಾಚಪ್ಪ, ಕಳಕಂಡ ಕುಟುಂಬದ ಹಿರಿಯರಾದ ಬಾಬಿ ತಿಮ್ಮಯ್ಯ ಮಾತನಾಡಿದರು.
ವಿಜಯೋತ್ಸವದಲ್ಲಿ ಅಳಮೇಂಗಡ ಕ್ರಿಕೆಟ್ ನಮ್ಮೆ ಅಧ್ಯಕ್ಷ ಬೋಸ್ ಮಂದಣ್ಣ, ಉಪಾಧ್ಯಕ್ಷ ಮೋಹನ್ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಳಕಂಡ ಕುಟುಂಬದ ಕಾರ್ಯದರ್ಶಿ ದರ್ಶನ್, ಅಣ್ಣಳಮಾಡ ಕುಟುಂಬದ ಕಾರ್ಯದರ್ಶಿ ರಾಜಾ ನಾಣಯ್ಯ, ಅಣ್ಣಳಮಾಡ ಚಿಣ್ಣಪ್ಪ, ಕಳಕಂಡ ಕುಟುಂಬ ತಂಡದ ನಾಯಕ ಪ್ರಸನ್ನ, ಅಣ್ಣಳಮಾಡ ಕುಟುಂಬದ ನಾಯಕ ಗಿರೀಶ್ ಸೇರಿದಂತೆ ಕುಟುಂಬದ ಮಹಿಳೆಯರು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.