ನಾಪೆÇೀಕ್ಲು, ಮೇ. 24: ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯುವ 7ನೇ ವರ್ಷದ ಕೊಡಗು ಜಿಲ್ಲಾ ಗೊಲ್ಲ ಸಮಾಜದ ವಾರ್ಷಿಕ ಕ್ರೀಡಾ ಕೂಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಗೋವಾ ಮಡ್ಂಗಾವ್ನ ಸಿ. ರಾಕ್ ಹೊಟೇಲ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಪ್ರದೀಪ್ ನಾಯ್ಕ್ ಬೌಲಿಂಗ್ ಮಾಡುವದರ ಮೂಲಕ, ಕ್ರೀಡಾ ಸಮಿತಿ ಅಧ್ಯಕ್ಷ ಮೇಲಾಟಂಡ ವಿದ್ಯಾ ಕುಶಾಲಪ್ಪ ಬ್ಯಾಟಿಂಗ್ ಮಾಡುವದರ ಮೂಲಕ ಉದ್ಘಾಟಿಸಿದರು.
ಉದ್ಘಾಟನಾ ಪಂದ್ಯಾಟವು ಅಮ್ಮಂಗೇರಿ ಮತ್ತು ಅಯ್ಯಂಗೇರಿ ತಂಡಗಳ ನಡುವೆ ನಡೆಯಿತು. ಕ್ರಿಕೆಟ್ ಪಂದ್ಯಾಟದೊಂದಿಗೆ ಹಗ್ಗ ಜಗ್ಗಾಟ, ಪ್ರಾಥಮಿಕ ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆಗಳು ನಡೆಯಲಿದೆ.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಗೊಲ್ಲ ಸಮಾಜದ ಅಧ್ಯಕ್ಷ ಆಚೀರ ಎಸ್.ನಾಣಯ್ಯ, ಉಪಾಧ್ಯಕ್ಷೆ ಪೆÇನ್ನುಕಂಡ ಚಿತ್ರಾ ಮೊಣ್ಣಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ಕೋಡಿಯಂಡ ಇಂದಿರಾ ಹರೀಶ್, ಪೆÇಟ್ಟಂಡ ಅನಿತಾ ದಿನೇಶ್, ಅಯ್ಯಂಗೇರಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಕ್ರೀಡಾ ಸಮಿತಿ ಉಪಾಧ್ಯಕ್ಷ ಕಡವಡಿರ ಸಂತೋಷ್, ಚೋಕಿರ ವಾಸುದೇವ್, ಉದ್ದುಮಾಡಂಡ ಪ್ರತೀಶ್, ಚೋಕಿರ ಬಾಬಿ ಭೀಮಯ್ಯ ಇದ್ದರು.