ಮಡಿಕೇರಿ, ಮೇ 24: ಇದುವರೆಗೆ ಪ್ರಬಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಟಿ.ಪಿ. ರಮೇಶ್ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಮುಂದುವರಿಸಲು ರಾಜ್ಯ ಕಾಂಗ್ರೆಸ್ ಸಮಿತಿ ಹಾಗೂ ರಾಜ್ಯ ಉಸ್ತುವಾರಿ ತೀರ್ಮಾನಿಸಿದ್ದಾರೆ.ಈ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿರುವ ರಮೇಶ್ ಅವರು, ಇಂದು ಬೆಂಗಳೂರಿನಲ್ಲಿ ಹಿರಿಯ ನಾಯಕರ ಸಮ್ಮುಖದಲ್ಲಿ ಜಿಲ್ಲಾ ಕಾಂಗ್ರೆಸ್ ಕುರಿತು ಚರ್ಚೆ ನಡೆಯಿತು ಎಂದಿದ್ದಾರೆ. ಈ ಸಂದರ್ಭ ಜಿಲ್ಲಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಪ್ರಬಾರ ಅಧ್ಯಕ್ಷ ಬದಲು ಪೂರ್ಣ ಪ್ರಮಾಣದ ಕಾರ್ಯನಿರ್ವಹಣೆಯ ಅಧ್ಯಕ್ಷರನ್ನು ಆಯ್ಕೆ ಮಾಡುವದು ಸೂಕ್ತ ಎಂದು ಪ್ರಸ್ತಾಪ ಬಂದಾಗ ರಾಜ್ಯ ಉಸ್ತುವಾರಿ
(ಮೊದಲ ಪುಟದಿಂದ) ವೇಣುಗೋಪಾಲ್, ಜಿಲ್ಲಾ ಉಸ್ತುವಾರಿ ವಿಷ್ಣುನಾದನ್, ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಇತರ ಹಿರಿಯರು ತಮ್ಮನ್ನೇ ಮುಂದುವರೆಸುವಂತೆ ಮೌಖಿಕ ಆದೇಶ ನೀಡಿದ್ದು, ಸಧ್ಯದಲ್ಲೇ ಲಿಖಿತ ಆದೇಶ ಪತ್ರ ಜಿಲ್ಲೆಯ ಕೈ ಸೇರಲಿದೆ ಎಂದು ರಮೇಶ್ ವಿವರಿಸಿದ್ದಾರೆ.
ಪರ-ವಿರೋಧ : ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಬಾರ ಅಧ್ಯಕ್ಷರಾಗಿರುವ ಟಿ.ಪಿ. ರಮೇಶ್ ಅವರನ್ನು ಪ್ರಬಾರ ಸ್ಥಾನದ ಬದಲು ನೂತನ ಅಧ್ಯಕ್ಷರಾಗಿ ಮುಂದುವರಿಸಬೇಕು ಎಂಬ ಪ್ರಸ್ತಾಪವೊಂದು ಕೆ.ಪಿ.ಸಿ.ಸಿ. ಕಚೇರಿಯಲ್ಲಿ ಕೇಳಿಬಂದಿತು. ಈ ಪ್ರಸ್ತಾಪಕ್ಕೆ ತಕ್ಷಣವೇ ವಿರೋಧವೂ ವ್ಯಕ್ತಗೊಂಡಿತು.
ಕೆ.ಪಿ.ಸಿ.ಸಿ. ಕಚೇರಿಯಲ್ಲಿ ಅಧ್ಯಕ್ಷ ಡಾ|| ಜಿ. ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಜಿಲ್ಲೆಯ ಉಸ್ತುವಾರಿಗಳ ಉಪಸ್ಥಿತಿಯಲ್ಲಿ ಇಂದು ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ. ಈ ಸಂದರ್ಭ ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ಅವರು ಇದೀಗ ಪ್ರಬಾರ ಅಧ್ಯಕ್ಷರಾಗಿರುವ ಟಿ.ಪಿ. ರಮೇಶ್ ಅವರನ್ನೇ ಮುಂದಿನ ಅಧ್ಯಕ್ಷರಾಗಿ ನೇಮಕ ಮಾಡುವಂತೆ ಒತ್ತಾಯಿಸಿದರೆ ನ್ನಲಾಗಿದೆ. ಈ ಪ್ರಸ್ತಾಪಕ್ಕೆ ಸಭೆಯಲ್ಲಿದ್ದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೆ.ಪಿ.ಸಿ.ಸಿ. ಸದಸ್ಯೆ ಕೆ.ಪಿ. ಚಂದ್ರಕಲಾ ಅವರು ವಿರೋಧ ವ್ಯಕ್ತಪಡಿಸಿದ್ದಾಗಿ ಹೇಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಭೆಯಲ್ಲಿಲ್ಲ. ಅಲ್ಲದೆ ಐದು ಬ್ಲಾಕ್ ಅಧ್ಯಕ್ಷರ ಅಭಿಪ್ರಾಯವೂ ಮುಖ್ಯ. ಉಸ್ತುವಾರಿ ಸಚಿವರ ಗಮನಕ್ಕೆ ತಂದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳ ಬೇಕಾಗಿದೆ ಎಂದು ಇವರುಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾಗಿ ಪತ್ರಿಕೆಗೆ ತಿಳಿದುಬಂದಿದೆ.
ಜೂನ್ ಆರಂಭದಲ್ಲಿ ನೂತನ ಅಧ್ಯಕ್ಷರು ಈ ಮಧ್ಯೆ ಮಡಿಕೇರಿಯಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ ಅವರು, ಈ ಮಾಸಾಂತ್ಯ ಅಥವಾ ಜೂನ್ ಪ್ರಥಮ ವಾರದಲ್ಲಿ ಜಿಲ್ಲಾ ಕಾಂಗ್ರೆಸ್‍ನ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಮೂವರು ಪ್ರಮುಖರ ಹೆಸರನ್ನು ಶಿಫಾರಸ್ಸು ಮಾಡಲಾಗಿದ್ದು, ಇವರಲ್ಲಿ ಒಬ್ಬರನ್ನು ಘೋಷಿ¸ ಲಾಗುವದು. ಪಕ್ಷವನ್ನು ಸಮರ್ಥವಾಗಿ, ಶಿಸ್ತುಬದ್ಧವಾಗಿ ಮುನ್ನಡೆಸುವ ಹಾಗೂ ಜನರೊಂದಿಗೆ ಬರೆಯುವ ವ್ಯಕ್ತಿ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಿದ್ದು, ಈ ಮೂವರು ಯಾರೂ ಎಂಬ ಗುಟ್ಟು ಬಿಟ್ಟು ಕೊಡಲಿಲ್ಲ.