ಮಡಿಕೇರಿ, ಮೇ. 23: ಮಡಿಕೇರಿ ತಾಲೂಕು 8ನೇ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪೂರ್ವಭಾವಿ ಸಭೆ ನಡೆಸಲಾಯಿತು. ಕಾರ್ಯಕ್ರಮದ ರೂಪುರೇಷೆಯೊಂದಿಗೆ ಸಮ್ಮೇಳನದ ಕಾರ್ಯಚಟುವಟಿಕೆಗಳಿಗೆ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.ಕ.ಸಾ.ಪ ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ಕುಡೆಕಲ್ ಸಂತೋಷ್ ಅವರ ಅಧ್ಯಕ್ಷತೆಯಲ್ಲಿ ಅರಸು ಭವನದಲ್ಲಿ ನಡೆದ ಸಭೆಯಲ್ಲಿ ಮುಂಬರುವ ಜೂನ್ 16ರಂದು ಮಡಿಕೇರಿಯ ಕಾವೇರಿ ಕಲಾ ಕ್ಷೇತ್ರದಲ್ಲಿ ಸಮ್ಮೇಳನ ನಡೆಸುವಂತೆ ತೀರ್ಮಾನಿಸಲಾಯಿತು. ಹಿರಿಯ ಸಾಹಿತಿಗಳ ಹೆಸರಿನಲ್ಲಿ ದ್ವಾರಗಳ ನಿರ್ಮಾಣ, ಸಾಂಸ್ಕøತಿಕ ಮೆರವಣಿಗೆ, ಕವಿಗೋಷ್ಠಿ, ವಿಚಾರಗೋಷ್ಠಿ, ಬಹಿರಂಗ ಅಧಿವೇಶನ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತೀರ್ಮಾನ ಕೈಗೊಂಡು ಈ ಸಂಬಂಧ ವಿವಿಧ ಉಪಸಮಿತಿಗಳನ್ನು ರಚನೆ ಮಾಡಿ ಜವಾಬ್ದಾರಿ ಹಂಚಲಾಯಿತು.

ಸಭೆಯಲ್ಲಿ ಪಾಲ್ಗೊಂಡಿದ್ದ ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮ್ಮೇಳನವನ್ನು ವಿಶೇಷ ರೀತಿಯಲ್ಲಿ ಅಚರಿಸುವದರೊಂದಿಗೆ ಯಶಸ್ವಿಯಾಗಲು ಎಲ್ಲರೂ ಒಮ್ಮನಸ್ಸಿ ನಿಂದ ಸಹಕಾರ ನೀಡಬೇಕೆಂದು ಕೋರಿದರು. ಉಪಸಮಿತಿಯವರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ದರೊಂದಿಗೆ

(ಮೊದಲ ಪುಟದಿಂದ) ಯಶಸ್ವಿಗೊಳಿಸಿಕೊಡುವಂತೆ ಮನವಿ ಮಾಡಿದರು. ನಗರಸಭಾಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಮಾತನಾಡಿ ಕನ್ನಡ ಸಾಹಿತ್ಯದ ಬೆಳವಣಿಗೆಯ ಹಿತದೃಷ್ಟಿಯಿಂದ ಆಚರಿಸಿಕೊಂಡು ಬರಲಾಗುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ನಗರಸಭೆ ವತಿಯಿಂದ ಸಂಪೂರ್ಣ ಸಹಕಾರ ನೀಡುವದಾಗಿ ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚುಮ್ಮಿ ದೇವಯ್ಯ ಮಾತನಾಡಿ ಕನ್ನಡಕ್ಕಾಗಿ ದುಡಿಯುವ ತಂಡಕ್ಕೆ ಸದಾ ಬೆಂಬಲವಿದೆ. ಎಲ್ಲ ರೀತಿಯ ಸಹಕಾರ ನೀಡುವದಾಗಿ ಹೇಳಿದರು. ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ನಗರಸಭೆಯಿಂದ ಸಹಕಾರ ನೀಡುವದಲ್ಲದೆ ಪರಿಷತ್ತಿನ ಪದಾಧಿಕಾರಿಯಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳುವದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸುವ ಬಗ್ಗೆ ತೀರ್ಮಾನಿಸಲಾಯಿತು.

ಸಮಿತಿ ರಚನೆ : ಸಾಹಿತ್ಯ ಸಮ್ಮೇಳನದ ಮಹಾ ಪೋಷಕರುಗಳಾಗಿ ಕ್ಷೇತ್ರದ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಪೋಷಕರಾಗಿ ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮೂಡಾ ಅಧ್ಯಕ್ಷ ಚುಮ್ಮಿದೇವಯ್ಯ, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರುಗಳಿರುತ್ತಾರೆ.

ಸ್ವಾಗತ ಸಮಿತಿ : ಕ.ಸಾ.ಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಗೌರವ ಕಾರ್ಯದರ್ಶಿ ಗಳಾದ ಡಾ. ಸುಭಾಶ್ ನಾಣಯ್ಯ, ಕೆ.ಎಸ್. ರಮೇಶ್, ಕೋಶಾಧಿಕಾರಿ ಎಸ್.ಎ. ಮುರಳೀಧರ, ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಗೌರವ ಕಾರ್ಯದರ್ಶಿಗಳಾದ ಕೂಡಕಂಡಿ ದಯಾನಂದ, ಬಾಳೆಯಡ ಕಿಶನ್ ಪೂವಯ್ಯ, ಕೋಶಾಧಿಕಾರಿ ಬಾಳೆಕಜೆ ಯೋಗೇಂದ್ರ ಸೇರಿದಂತೆ ಇತರರನ್ನು ನೇಮಕ ಮಾಡಲಾಯಿತು.

ಹಣಕಾಸು ಸಮಿತಿ : ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಸಂಚಾಲಕರಾಗಿ ಅಂಬೆಕಲ್ಲು ನವೀನ್ ಕುಶಾಲಪ್ಪ, ವೇದಿಕೆ ಸಮಿತಿ ಅಧ್ಯಕ್ಷರಾಗಿ ಕೋಡಿ ಚಂದ್ರಶೇಖರ್, ಸಂಚಾಲಕರಾಗಿ ಎಸ್.ಡಿ. ಅನಿತಾ, ಡಿ.ಹೆಚ್. ಪುಷ್ಪ, ಕೆ.ಡಿ. ದಯಾನಂದ, ಸಾಂಸ್ಕøತಿಕ ಸಮಿತಿ ಅಧ್ಯಕ್ಷರಾಗಿ ಭಾರತಿ ರಮೇಶ್, ಸಂಚಾಲಕರಾಗಿ ಸುನಿತಾ ಪ್ರೀತು, ಪೂರ್ಣಿಮಾ ಬಸಪ್ಪ, ಪ್ರಚಾರ ಸಮಿತಿ ಅಧ್ಯಕ್ಷರಾಗಿ ವಾರ್ತಾಧಿಕಾರಿ ಚಿನ್ನಸ್ವಾಮಿ, ಸಂಚಾಲಕರಾಗಿ ಕಿಶೋರ್ ರೈ, ಎಂ.ವಿ. ಜಯಂತಿ, ರಫೀಕ್ ಅಹ್ಮದ್, ಮೆರವಣಿಗೆ ಸಮಿತಿ ಅಧ್ಯಕ್ಷರಾಗಿ ಎಂ.ಬಿ. ಜೋಯಪ್ಪ, ಸಂಚಾಲಕರಾಗಿ ಪಿ.ಪಿ. ಸುಕುಮಾರ್, ಎಂ.ಎಸ್. ಜಯಚಂದ್ರ, ಅಲಂಕಾರ ಸಮಿತಿ ಅಧ್ಯಕ್ಷರಾಗಿ ನಗರಸಭೆ ಆಯುಕ್ತರು, ಸಂಚಾಲಕರಾಗಿ ಜಿ.ಆರ್. ರಾಜು, ಬಿ.ಎಸ್. ಜಯಪ್ಪ, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷರಾಗಿ ಬಿ.ಆರ್. ಜೋಯಪ್ಪ, ಸಂಚಾಲಕರಾಗಿ ಕೆ.ಸಿ. ದಯಾನಂದ, ಪಿ.ಎಸ್. ರವಿಕೃಷ್ಣ, ಹರೀಶ್ ಕಿಗ್ಗಾಲು, ಹರೀಶ್ ಸರಳಾಯ, ರೇವತಿ ರಮೇಶ್, ಇಂಧುಮತಿ ರವೀಂದ್ರ, ಹೆಚ್.ಜಿ. ಕುಮಾರ್, ಆಹಾರ ಸಮಿತಿ ಅಧ್ಯಕ್ಷರಾಗಿ ಪಿ.ಎಂ. ರವಿ, ಸಂಚಾಲಕರಾಗಿ ಕೆ.ಎಂ. ಮೊಣ್ಣಪ್ಪ, ಕೆ.ಬಿ. ರವಿ, ಆರ್.ಪಿ. ಚಂದ್ರು, ಪ್ರಭು ರೈ, ಎಸ್.ಡಿ. ಪ್ರಶಾಂತ್, ಆರೋಗ್ಯ ನೈರ್ಮಲ್ಯ ಸಮಿತಿಗೆ ನಗರಸಭಾ ಆಹಾರ ನಿರೀಕ್ಷಕರು, ಸಂಚಾಲಕರಾಗಿ ಧನಂಜಯ, ಸಾಬ ಸುಬ್ರಮಣಿ, ಶಿಸ್ತು ಸಮಿತಿಗೆ ಡಿ.ವೈ.ಎಸ್.ಪಿ ನೇತೃತ್ವದಲ್ಲಿ ಸಂಚಾಲಕರಾಗಿ ಕೆ.ಪಿ. ಗುರುರಾಜ್, ನಂದೀಶ್, ತಳವಾರ್, ಪುಸ್ತಕ ಮಳಿಗೆ ಸಮಿತಿಗೆ ಅಧ್ಯಕ್ಷರಾಗಿ ಎಂ.ಎಸ್. ಬಿದ್ದಪ್ಪ, ಸಂಚಾಲಕರಾಗಿ ಬಾಳೆಕಜೆ ದೇವಿಪ್ರಸಾದ್, ರುದ್ರಪ್ರಸನ್ನ, ಸರಸ್ವತಿ, ದ್ವಾರ ಸಮಿತಿ ಅಧ್ಯಕ್ಷರಾಗಿ ಚುಮ್ಮಿ ದೇವಯ್ಯ, ಸಂಚಾಲಕರಾಗಿ ಪಿ.ಜಿ. ಸುಕಮಾರ್, ಅಜ್ಜೇಟಿರ ಲೋಕೇಶ್,ಧ್ವಜ ನಿರ್ವಹಣೆ ಉಸ್ತುವಾರಿಯನ್ನು ದೈಹಿಕ ಶಿಕ್ಷಣ ನಿದೇಶಕರುಗಳಾದ ಸಂದೇಶ್, ಶ್ರೀನಿವಾಸ್, ರಾಘವೇಂದ್ರ ಶೆಟ್ಟಿ ಅವರುಗಳಿಗೆ ವಹಿಸುವಂತೆ ತೀರ್ಮಾನಿಸಲಾಯಿತು.

ಒಂದು ದಿನದ ಸಮ್ಮೇಳನವನ್ನು ಅಚ್ಚುಕಟಾಗಿ ನಿರ್ವಹಿಸುವಂತೆ ಉಪ ಸಮಿತಿಯವರಿಗೆ ಜವಾಬ್ದಾರಿ ವಹಿಸಲಾಯಿತು. ಈ ಸಂದರ್ಭ ತಾಲೂಕು ಗೌರವ ಕಾರ್ಯದರ್ಶಿ ಬಾಳೆಯಡ ಕಿಶನ್ ಪೂವಯ್ಯ, ಗೌರವ ಕೋಶಾಧಿಕಾರಿ ಬಾಳೆಕಜೆ ಯೋಗೇಂದ್ರ, ತಾಲೂಕು ಪದಾಧಿಕಾರಿಗಳು, ಸದಸ್ಯರುಗಳು ಪಾಲ್ಗೊಂಡಿದ್ದರು. ಗೌರವ ಕಾರ್ಯದರ್ಶಿ ಕೂಡಕಂಡಿ ದಯಾನಂದ ನಿರೂಪಿಸಿ, ವಂದಿಸಿದರು.