*ಗೋಣಿಕೊಪ್ಪಲು, ಮೇ 23: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸ್ಪಂದನದಿಂದ ಅರಣ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯದ ಬಗ್ಗೆ ಅರಿವು ಕಾರ್ಯಕ್ರಮ ನಡೆಸಲಾಯಿತು.

ಸಾಮಾಜಿಕ, ವೈಯಕ್ತಿಕ ಜೀವನ ನಿರ್ವಹಿಸುವದು, ಯುವ ಜನಾಂಗಕ್ಕೆ ಸ್ವ ಅರಿವು, ಮುಂದೆ ಜೀವನವನ್ನು ಸವಾಲಾಗಿ ಸ್ವೀಕರಿಸುವಾಗ ಜೀವನಕ್ಕೆ ಬೇಕಾಗಿರುವ ಜೀವನ ಮೌಲ್ಯಗಳನ್ನು ಚಟುವಟಿಕೆಯ ಮೂಲಕ ವಿದ್ಯಾರ್ಥಿ ಗಳಲ್ಲಿ ಜಾಗೃತಿ ಮೂಡಿಸಲಾಯಿತು.

ಯುವ ಸ್ಪಂದನ ರಾಜ್ಯ ಸರ್ಕಾರದ ಯೋಜನೆಯಾಗಿದ್ದು, ಯುವ ಜನಾಂಗಕ್ಕೆ ಉಚಿತ ಸೇವೆಯನ್ನು ಕೊಡಲಿದೆ. ಮಾನಸಿಕ ಹಾಗೂ ಸಾಮಾಜಿಕವಾಗಿ ವೈಯಕ್ತಿಕ ಬೆಂಬಲ ನೀಡುವದು, ಬಿಕ್ಕಟ್ಟು ನಿರ್ವಹಣೆ ಮಾಡುವದು ಯುವ ಸ್ಟಂದನದ ಮೂಲ ಗುರಿ ಎಂದು ಸ್ಪಂದನಾಧಿಕಾರಿ ಕೌಶಲ್ಯ ತಿಳಿಸಿದರು.

ಅರಣ್ಯ ವಿದ್ಯಾಲಯದ ಎನ್.ಎಸ್.ಎಸ್. ಸಂಯೋಜ ನಾಧಿಕಾರಿ ಡಾ. ರವಿಕುಮಾರ್ ಡಿ. ನೇತೃತ್ವದಲ್ಲಿ ಪ್ರಾಧ್ಯಾಪಕ ಡಾ. ಜಡೇಗೌಡ, ಸಹಪ್ರಾಧ್ಯಾಪಕರಾದ ಅನಂತ ಕೃಷ್ಣ ಹಾಗೂ ಶೋಭಾ ಉಪಸ್ಥಿತರಿದ್ದರು.