ಮಡಿಕೇರಿ, ಮೇ 25: ನೆಲ್ಲಿಹುದಿಕೇರಿ ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಗ್ರಾ.ಪಂ. ಉಪಾಧ್ಯಕ್ಷೆ ಸಫಿಯಾ ಮಹಮ್ಮದ್ ಆಯ್ಕೆಯಾಗಿದ್ದಾರೆ.ನೆಲ್ಲಿಹುದಿಕೇರಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜಿ.ಆರ್. ಪುಷ್ಪಲತಾ ಹಾಗೂ ಮಡಿಕೇರಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ಮಂಜು, ಸಫಿಯಾ ಮಹಮ್ಮದ್ ಅವರಿಗೆ ಆದೇಶ ಪ್ರತಿ ಹಸ್ತಾಂತರಿಸಿದರು.
ಸಭೆಯಲ್ಲಿ ಜಿ.ಪಂ. ಸದಸ್ಯೆ ಸುನಿತಾ, ಗ್ರಾ.ಪಂ ಅಧ್ಯಕ್ಷೆ ಪದ್ಮಾವತಿ, ಸದಸ್ಯರಾದ ಸುಹದಾ, ಅನ್ನಮ್ಮ ಕೊಟ್ಟುಕೊಸಿ ಮರಿಯಾ, ಧನಲಕ್ಷ್ಮಿ, ಶಾಂತಾ, ಗೀತಾ, ಮುಸ್ತಫಾ, ಸುಕೂರು, ಡಿಸಿಸಿ ಸದಸ್ಯ ಹಕೀಂ, ಅಬ್ದುಲ್ ರಜಾóಕ್, ಯುವ ಕಾಂಗ್ರೆಸ್‍ನ ಕಾರ್ಯದರ್ಶಿ ರಜಿತ್ ಕುಮಾರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.